20 ಸಾವಿರ ಹಣಕ್ಕೆ ಕಾಲಿಗೆ ಸರಪಳಿ ಕಟ್ಟಿ ಅಮಾನವೀಯ ವರ್ತನೆ: ಇಬ್ಬರ ಬಂಧನ

Published : Jul 20, 2025, 09:36 AM IST
chaining legs

ಸಾರಾಂಶ

ಇಪ್ಪತ್ತು ಸಾವಿರ ರುಪಾಯಿ ಸಾಲದ ಹಣಕ್ಕಾಗಿ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಚಡಚಣ (ಬಾಗಲಕೋಟೆ) (ಜು.20): ಇಪ್ಪತ್ತು ಸಾವಿರ ರುಪಾಯಿ ಸಾಲದ ಹಣಕ್ಕಾಗಿ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚಾಲಕನಾದ ಚಾಂದಸಾಬ್ ಅಲ್ಲಾವುದ್ದೀನ್‌ ಮುಲ್ಲಾ ಎಂಬಾತ ಚಾಲಕ ಕೆಲಸಕ್ಕೆ ಬರುವುದಾಗಿ ಹೇಳಿ ಆರೋಪಿ ಕುಮಾರಗೌಡ ಬಿರಾದಾರ್ ಬಳಿ ₹20 ಸಾವಿರ ಹಣ ಪಡೆದಿದ್ದ. ಬಳಿಕ ಕೆಲಸಕ್ಕೂ ಹೋಗದೇ ಹಣವನ್ನೂ ವಾಪಸ್‌ ಕೊಡದೇ ಸತಾಯಿಸುತ್ತಿದ್ದ.

ಇದರಿಂದ ಕುಪಿತರಾದ ಆರೋಪಿಗಳಾದ ಕುಮಾರಗೌಡ ಬಿರಾದಾರ ಹಾಗೂ ಶ್ರೀಶೈಲ ಬಿರಾದಾರ ಸೇರಿ ಚಡಚಣದಲ್ಲಿ ಸಿಕ್ಕ ಚಾಂದಸಾಬ್‌ನನ್ನು ತಮ್ಮ ಪಲ್ಸರ್‌ ಬೈಕ್‌ ಮೇಲೆ ಹತ್ತಿಸಿಕೊಂಡು ಹತ್ತಳ್ಳಿ ಗ್ರಾಮಕ್ಕೆ ಕರೆತಂದಿದ್ದಾರೆ. ಬಳಿಕ ಮಲ್ಲಿಕಾರ್ಜುನ ಬಿರಾದಾರ್ ಅಂಗಡಿಯ ಮುಂದೆ ಕಾಲಿಗೆ ಸರಪಳಿ ಕಟ್ಟಿ ಬೀಗ ಜಡಿದು ಹಣಕ್ಕಾಗಿ ಒತ್ತಾಯಿಸಿದ್ದಾರೆ. ಸಂಜೆ ವೇಳೆಗೆ ಸರಪಳಿ ಬಿಚ್ಚಿ ಕಳುಹಿಸಿ ಕೊಟ್ಟಿದ್ದಾರೆ. ಘಟನೆ ನಡೆದು ನಾಲ್ಕೈದು ದಿನಗಳಾಗಿದ್ದು, ಚಾಂದಸಾಬ್ ಮುಲ್ಲಾ ಶನಿವಾರ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಕಾಕ್ರೋಚ್‌ ಹಿಟ್‌ ಸ್ಪ್ರೇ ಮಾಡಿ ಕಳ್ಳರ ಓಡಿಸಿದ ಮಹಿಳೆ: ಮನೆಯೊಂದರಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ಕಳ್ಳರ ಗುಂಪೊಂದು ಹೊಂಚುಹಾಕಿ ಕಳ್ಳತನಕ್ಕೆ ಯತ್ನ ನಡೆಸಿ ವಿಫಲರಾದ ಘಟನೆ ನಗರದ ಗೌತಮಬುದ್ಧ ಕಾಲೊನಿಯಲ್ಲಿ ಗುರುವಾರ ನಡೆದಿದೆ. ನಗರದ ನಿವಾಸಿ ಪೃಥ್ವಿ ಪ್ರದೀಪ ನವಣಿ ಎಂಬುವರು ಮನೆಯಲ್ಲಿ ಈ ಘಟನೆ ನಡೆದಿದೆ. ಇವರು ಒಂಟಿಯಾಗಿದ್ದಾರೆ ಎಂಬುದನ್ನು ಗಮನಿಸಿದ ದುಷ್ಕರ್ಮಿಗಳು ಮಧ್ಯಾಹ್ನ 12ರ ಸುಮಾರಿಗೆ ಮನೆಗೆ ಬಂದು ಬಾಗಿಲು ಬಾರಿಸಿ ಮಹಿಳೆಯನ್ನು ಹೊರಗೆ ಕರೆದಿದ್ದಾರೆ ಎನ್ನಲಾಗಿದೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತ ಮಹಿಳೆಯ ಚಿತ್ತವನ್ನು ಬೇರೆಡೆ ಸೆಳೆದು ಸರ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ.

ಸೂಕ್ಷ್ಮವಾಗಿ ಗಮನಿಸಿದ ಮಹಿಳೆ ದಿಟ್ಟತನ ಪ್ರದರ್ಶಿಸಿದ್ದು ಪಕ್ಕದಲ್ಲಿದ್ದ ಕಾಕ್ರೋಚ್‌ ಹಿಟ್‌ನ ಬಾಟಲಿಯಿಂದ ಕಳ್ಳರ ಮುಖಕ್ಕೆ ಸ್ಪ್ರೇ ಮಾಡಿದ್ದಾರೆ. ಇದರಿಂದ ವಿಚಲಿತರಾದ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಹಿಳೆಯ ದಿಟ್ಟತನದ ಪ್ರದರ್ಶನದಿಂದ ಸಂಭವಿಸಬಹುದಾಗಿದ್ದ ಕಳ್ಳತನ ವಿಫಲವಾಗಿದೆ. ಘಟನಾ ಸ್ಥಳಕ್ಕೆ ನಗರದ ಪಿಎಸ್‌ಐ ಅನೀಲ ಕುಂಬಾರ, ಕ್ರೈಂ ವಿಭಾಗದ ಪಿಎಸ್‌ಐ ಎಚ್.ಎಚ್.ಹೊಸಮನಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ. ಮಹಿಳೆಯರು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!