ಬೆಂಗ್ಳೂರಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ

By Kannadaprabha NewsFirst Published Jun 2, 2023, 7:27 AM IST
Highlights

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೇರಿಂದ್ಯಾಪನಹಳ್ಳಿ ಗ್ರಾಮದ ರವಿಕುಮಾರ್‌ ಹಾಗೂ ಹಾರೋಹಳ್ಳಿ ತಾಲೂಕಿನ ಕುಲುಮೆ ಭೀಮಸಂದ್ರದ ನಿವಾಸಿ ಸೋಮಶೇಖರ್‌ ಬಂಧಿತರಾಗಿದ್ದು, ಆರೋಪಿಗಳಿಂದ 25.5 ಕೇಜಿ ತೂಕದ ಒಂದು ಆನೆ ದಂತ ಜಪ್ತಿ 

ಬೆಂಗಳೂರು(ಜೂ.02):  ಬೆಂಗಳೂರಿನಲ್ಲಿ ಅಕ್ರಮವಾಗಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಬೇಟೆಗಾರರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೇರಿಂದ್ಯಾಪನಹಳ್ಳಿ ಗ್ರಾಮದ ರವಿಕುಮಾರ್‌ ಹಾಗೂ ಹಾರೋಹಳ್ಳಿ ತಾಲೂಕಿನ ಕುಲುಮೆ ಭೀಮಸಂದ್ರದ ನಿವಾಸಿ ಸೋಮಶೇಖರ್‌ ಬಂಧಿತರಾಗಿದ್ದು, ಆರೋಪಿಗಳಿಂದ 25.5 ಕೇಜಿ ತೂಕದ ಒಂದು ಆನೆ ದಂತ ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಬನಶಂಕರಿ 3ನೇ ಹಂತದ ಸಪ್ತಗಿರಿ ಲೇಔಟ್‌ನ ಹನುಮಗಿರಿ ಬೆಟ್ಟದ ನೀಲಗಿರಿ ತೋಪಿನಲ್ಲಿ ಆನೆದಂತ ಮಾರಾಟಕ್ಕೆ ಕೆಲವರು ಯತ್ನಿಸಿದ್ದಾರೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಸತ್ತ ಆನೆ ದಂತ ಕಳವು:

ರವಿಕುಮಾರ್‌ ಹಾಗೂ ಸೋಮಶೇಖರ್‌ ವೃತ್ತಿಪರ ಬೇಟೆಗಾರರಾಗಿದ್ದಾರೆ. ಹಲವು ವರ್ಷಗಳಿಂದ ಕನಕಪುರ ವ್ಯಾಪ್ತಿಯ ಅರಣ್ಯದಲ್ಲಿ ಮೊಲ, ಕಾಡು ಹಂದಿ ಹಾಗೂ ಜಿಂಕೆ ಸೇರಿದಂತೆ ವನ್ಯಜೀವಿಗಳನ್ನು ಆರೋಪಿಗಳು ಬೇಟೆಯಾಡಿದ ಬಳಿಕ ಆ ವ್ಯನ್ಯಜೀವಿಗಳ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಅವರು ಹಣ ಸಂಪಾದಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಾಡಿಗೆ ಮೊಲ ಬೇಟೆಗೆ ತೆರಳಿದ್ದಾಗ ಅಲ್ಲಿ ಸತ್ತು ಬಿದ್ದಿದ್ದ ಆನೆಯ ದಂತವನ್ನು ಕತ್ತರಿಸಿಕೊಂಡು ಬಂದು ನಗರದಲ್ಲಿ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಡನ ಬಿಟ್ಟು ಸೋಷಿಯಲ್ ಮೀಡಿಯಾ ಫ್ರೆಂಡ್ ಹಿಂದೆ ಹೋದ ಸುಂದರಿ, ಹೆಣವಾಗಿ ಸಿಕ್ಕಳು!

ವಿಚಾರಣೆ ವೇಳೆ ಕಾಡಿನಲ್ಲಿ ಆನೆ ಸತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಆದರೆ ನಮಗೆ ಆರೋಪಿಗಳ ಮಾತಿನ ಮೇಲೆ ನಂಬಿಕೆಯಿಲ್ಲ. ಇಬ್ಬರನ್ನು ಕಸ್ಟಡಿಗೆ ಪಡೆದು ಅರಣ್ಯ ಕರೆದೊಯ್ದು ಪರಿಶೀಲಿಸಿದಾಗ ಸತ್ಯ ಗೊತ್ತಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!