ಆತನಿಗೆ ಒಳ್ಳೆಯ ಕೆಲಸ, ಕೈ ತುಂಬಾ ಸಂಬಳ ಮುದ್ದಾದ ಇಬ್ಬರು ಅವಳಿ ಮಕ್ಕಳು, ಸುಂದರ ಸಂಸಾರ, ಹೀಗೆ ಸುಖಃ ಜೀವನ ನಡೆಸುತ್ತಾ ಜೀವನ ನಡೆಸುತ್ತಿದ್ದ. ಆದರೆ ಈಗ ಆತ ಯಾವ ತಂದೆ ಕೂಡ ಮಾಡದ ಹೀನಾ ಕೃತ್ಯವೆಸಗಿದ್ದು, ಇಡೀ ಸಮಾಜವೇ ಆತನಿಗೆ ಹಿಡಿ ಶಾಪ ಹಾಕುವಂತ ಹೀನಾ ಕೃತ್ಯ ನಡೆಸಿದ್ದಾನೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ (ಜೂ.01): ಆತನಿಗೆ ಒಳ್ಳೆಯ ಕೆಲಸ, ಕೈ ತುಂಬಾ ಸಂಬಳ ಮುದ್ದಾದ ಇಬ್ಬರು ಅವಳಿ ಮಕ್ಕಳು, ಸುಂದರ ಸಂಸಾರ, ಹೀಗೆ ಸುಖಃ ಜೀವನ ನಡೆಸುತ್ತಾ ಜೀವನ ನಡೆಸುತ್ತಿದ್ದ. ಆದರೆ ಈಗ ಆತ ಯಾವ ತಂದೆ ಕೂಡ ಮಾಡದ ಹೀನಾ ಕೃತ್ಯವೆಸಗಿದ್ದು, ಇಡೀ ಸಮಾಜವೇ ಆತನಿಗೆ ಹಿಡಿ ಶಾಪ ಹಾಕುವಂತ ಹೀನಾ ಕೃತ್ಯ ನಡೆಸಿದ್ದಾನೆ. ಹೀಗೆ ಶವಗಾರದಲ್ಲಿ ಹೆಣವಾಗಿ ಮಲಗಿರುವ ಇಬ್ಬರು ಮುದ್ದಾದ ಮಕ್ಕಳನ್ನು ನೋಡಿದ್ರೆ ಎಂಥಹಾ ಕಲ್ಲಿನ ಮನಸ್ಸಿನವರಿಗಾಗಲಿ ಕಣ್ಣೀರು ಬಾರದೇ ಇರಲಾರದು. ಈ ಮಕ್ಕಳು ಯಾವುದೋ ರೋಗಕ್ಕೆ ಬಲಿಯಾದವರಲ್ಲ. ಹೆತ್ತ ತಂದೆ ಹೀನಾಯ ಕೃತ್ಯಕ್ಕೆ ಬಲಿಯಾದ ಮುದ್ದು ಕಂದಮ್ಮಗಳು.
ಹೌದು! ದಾವಣಗೆರೆ ನಗರದ ಅಂಜನೇಯ ಬಡಾವಣೆಯ ನಿವಾಸಿ ಅಮರ್ ಕಿತ್ತೂರ್ ಹೆತ್ತ ಮಕ್ಕಳನ್ನು ಕೊಲೆ ಮಾಡಿದ ಪಾಪಿ ತಂದೆಯಾಗಿದ್ದು. ಮೂಲತಃ ಬೆಳಗಾವಿಯ ಗೋಕಾಕ್ ನವರಾರ ಅಮರ್ ಹರಿಹರದ ಕಾರ್ಗಿಲ್ ಕಂಪನಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಜಯಲಕ್ಷ್ಮಿ ಗೃಹಿಣಿಯಾಗಿದ್ದಳು, ಇಬ್ಬರು ಅವಳಿ ಜವಳಿ ಮಕ್ಕಳು ಹುಟ್ಟಿದ್ದು ಆದರೆ ಹುಟ್ಟಿನಿಂದಲೇ ಮಕ್ಕಳಾದ ಅದ್ವೈತ್ ಹಾಗೂ ಅನ್ವೀತ್ ಸ್ವಲ್ಪ ಬುದ್ದಿಮಾಂದ್ಯೆತೆಯನ್ನು ಹೊಂದಿದ್ದು ನಾಲ್ಕು ವರ್ಷದಲ್ಲಿದ್ದ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಸ್ವಲ್ಪ ಗಂಡ ಹೆಂಡತಿ ನಡುವೆ ಮನಸ್ಥಾಪ ಬಂದಿದೆ.
ಸರ್ಕಾರಿ ಶಾಲೆ ಉಳಿದರೆ ಮಾತ್ರ ಸರ್ವರಿಗೂ ಶಿಕ್ಷಣ ಸಾಧ್ಯ: ಶಾಸಕ ಕೊತ್ತೂರು ಮಂಜುನಾಥ್
ಅಲ್ಲದೆ ಪತ್ನಿ ಜಯಲಕ್ಷ್ಮಿ ತವರು ಮನೆಯಾದ ವಿಜಯಪುರಕ್ಕೆ ಹೋಗಿದ್ದು, ಇಬ್ಬರ ನಡುವೆ ಜಗಳ ಶುರುವಾಗಿದೆ. ಅಲ್ಲದೆ ಮಕ್ಕಳನ್ನು ಕೊಲೆ ಮಾಡುವುದಾಗಿ ಕೂಡ ಅಮರ್ ಹೇಳಿದ್ದನಂತೆ ಆದರೂ ಕೂಡ ಪತ್ನಿ ವಾಪಸ್ಸು ಬಾರದ ಹಿನ್ನಲೆ ಇಬ್ಬರು ಮಕ್ಕಳ ಕೈ ಕಾಲುಗಳನ್ನು ಟೀಪ್ ನಿಂದ ಕಟ್ಟಿ, ಬಾಯಿ ಹಾಗೂ ಮೂಗಿಗೆ ಟಿಕ್ಸೋ ಟೆಪ್ ಅಚ್ಚಿ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ. ಇನ್ನು ಅವಳಿ ಮಕ್ಕಳಾದ ಅದ್ವೈತ್ ಹಾಗೂ ಅನ್ವೀತ್ ಇಬ್ಬರು ಅಂಜನೇಯ ಬಡಾವಣೆಯಲ್ಲಿರುವ ಮನೆಯಲ್ಲಿ ಅಮರ್ ತಾಯಿ ಸಾವಿತ್ರಮ್ಮನ ಮಕ್ಕಳು ಇದ್ದವು. ಆದರೆ ಪಾಪಿ ತಂದೆ ಅಮರ್ ಮನೆಯಲ್ಲಿ ಅವಳ ತಾಯಿ ಇದ್ದರು ಮಕ್ಕಳನ್ನ ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಚಳಗೆರೆ ಟೋಲ್ ಗೇಟ್ ಬಳಿಗೆ ಕಾರ್‌ನಲ್ಲಿ ಕರೆದುಕೊಂಡು ಹೋಗಿ ಇಬ್ಬರು ಮಕ್ಕಳ ಕೈಗೆ ಟೀಪ್ ಹಾಕಿ ನಂತರ ಬಾಯಿಗೆ ಅಲ್ಲದೆ ಅಲ್ಲಿಂದ ಜೋಗ್ ಫಾಲ್ಸ್ ಗೆ ಹೋಗಿ ತಾನು ಅತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ.
ಯುವಜನಾಂಗಕ್ಕೆ ವಿಜ್ಞಾನದಲ್ಲಿ ಆಸಕ್ತಿ ಹುಟ್ಟಿಸುವಂತೆ ಮಾಡಲಿರುವ ನಾಸಾದ 'ಮಾರ್ಸ್ ಆಪರ್ಚುನಿಟಿ ರೋವರ್'!
ಆದರೆ ವಾಪಸ್ಸು ಮನೆಗೆ ಬಂದಿದ್ದಾನೆ. ಅಲ್ಲದೆ ಮಕ್ಕಳನ್ನು ಕೊಲೆ ಮಾಡಿ ಶವವನ್ನು ಕಾರಿನಲ್ಲಿಯೇ ತಂದಿದ್ದ. ಇದರಿಂದ ಸಂಶಯ ಬಂದು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ತಾನೇ ಇಬ್ಬರು ಮಕ್ಕಳನ್ನು ಕೊಲೆ ಮಾಡಿರುವುದಾಗಿ ಪಾಪಿ ತಂದೆ ಒಪ್ಪಿಕೊಂಡಿದ್ದಾನೆ. ಏನೇ ಆಗಲಿ ಬುದ್ದಿಮಾಂಧ್ಯತೆ ಇರುವ ಮಕ್ಕಳು ಎನ್ನುವ ಕಾರಣಕ್ಕೆ ಯಾವ ತಂದೆ ಮಾಡದ ಕೃತ್ಯವನ್ನು ಈತ ಮಾಡಿದ್ದು, ಮಕ್ಕಳನ್ನು ನೋಡಿ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಸದ್ಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.