ಕಬಾಬ್ ಅಂಗಡಿಯಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ, ಹಣ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಕುಂದಾಪುರ, (ಆ.17): ಇಲ್ಲಿನ ಬಸ್ರೂರು ಗ್ರಾಮದ ಪಾನಕದಕಟ್ಟೆ ಎಂಬಲ್ಲಿನ ಕಬಾಬ್ ಅಂಗಡಿಯಲ್ಲಿ ಗಾಂಜಾ ಮಾರುತಿದ್ದ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ.
ಆರೋಪಿಗಳು ಸಮೀಪದ ಕಾವ್ರಾಡಿ ಗ್ರಾಮದ ಮಹ್ಮದ್ ತನ್ವೀರ್ (36) ಹಾಗೂ ಸಬೀಬ್ (25) ಎಂದು ಗುರುತಿಸಲಾಗಿದೆ.
ಪುಂಡರ ವಿರುದ್ಧ ಕ್ರಮಕ್ಕೆ ಮುಂದಾದ ಸಿಎಂ, ಕಂಗನಾ ಮಾತಿಗೆ ಸೊನಾಕ್ಷಿ ಗರಂ: ಆ.17ರ ಟಾಪ್ 10 ಸುದ್ದಿ!
ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್. ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದು, ಆರೋಪಿಗಳಿಂದ 25 ಸಾವಿರ ರು. ಮೌಲ್ಯದ 1.050 ಗ್ರಾಂ ಗಾಂಜಾ, 2 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.