
ಪುಣೆ(ಆ. 17) ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಗರ್ಭಿಣಿ ಸಂಗಾತಿಯನ್ನು ಹತ್ಯೆ ಮಾಡಿದ ಯುವಕನೊಬ್ಬ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
27ರ ಹರೆಯದ ಯುವಕನೋರ್ವ ತನ್ನ ಗರ್ಭಿಣಿ ಲಿವ್ ಇನ್ ಸಂಗಾತಿ ಜತೆಗೆ ಜಗಳವಾಡಿ ನಂತರ ಆಕೆಯನ್ನು ಹತ್ಯೆಗೈದಿದ್ದಾನೆ.
ರಂಜನ್ ಗಾಂವ್ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕರೇಗಾಂವ್ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಪ್ರಕರಣ ಇದು. ಕೊಲೆ ಮಾಡಿ ವ್ಯಕ್ತಿಯು ಪೊಲೀಸ್ ಠಾಣೆಗೆ ತೆರಳಿ ತನ್ನ 24ರ ಹರೆಯದ ಲಿವ್ ಇನ್ ಸಂಗಾತಿಯ ಹತ್ಯೆ ಮಾಡಿದ್ದೇನೆ ಎಂದಿದ್ದಾನೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಿರಣ್ ಪಂಡೆ ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ. ಹತ್ಯೆಯಾದ ಸಂಗಾತಿ ಸೋನಾಮಾನಿ ಸೋರನ್ ಸಹ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಹಲವು ತಿಂಗಳಿನಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು.
ಆರೋಪಿಯು ಪೊಲೀಸ್ ಠಾಣೆಗೆ ಬಂದು ಒಂದು ತುಂಡು ಕಾಗದ ಮತ್ತು ಪೆನ್ನು ಕೇಳಿದ. ಅನಂತರ ಆತ ಕಾಗದದಲ್ಲಿ ತಾನು ಖಿನ್ನತೆಯ ರೋಗಿಯಾಗಿದ್ದು, ತನ್ನ ಗರ್ಭಿಣಿ ಲಿವ್ ಇನ್ ಸಂಗಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಬೆರೆದುಕೊಂಡಿದ್ದು, ತನ್ನನ್ನು ಗಲ್ಲಿಗೇರಿಸಬೇಕೆಂದು ಕೋರಿ, ಸಂಪೂರ್ಣ ಅಡ್ರೆಸ್ ಬರೆದು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಸುದ್ದಿ ಕೇಳಿದ ಪೊಲೀಸರು ಅವರು ವಾಸ ಮಾಡುತ್ತಿದ್ದ ಜಾಗಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಯುವತಿ ಕೋಣೆಯ ಮೂಲೆಯೊಂದರಲ್ಲಿ ಶವವಾಗಿ ಬಿದ್ದಿದ್ದಳು.
ಯುವತಿ ಗರ್ಭವತಿಯಾಗಿದ್ದು ಇಬ್ಬರ ನಡುವೆ ಆಗಾಗ ಗಲಾಟೆ ನಡೆಯಲು ಕಾರಣವಾಗಿತ್ತು. ಗರ್ಭಪಾತದ ವಿಚಾರ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಂದಿಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ