ಡ್ರಾಪ್‌ ಕೊಡುವ ನೆಪದಲ್ಲಿ ಸುಲಿಗೆ: ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

By Kannadaprabha NewsFirst Published Nov 18, 2020, 7:52 AM IST
Highlights

ಬಂಧಿತ ಆರೋಪಿಗಳಿಂದ 30 ಗ್ರಾಂ ಚಿನ್ನ ಹಾಗೂ 2 ಕಾರು ಸೇರಿದಂತೆ 8.4 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ|  ಡ್ರಾಪ್‌ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಪ್ರಯಾಣಿಕರಿಗೆ ಬೆದರಿಸಿ ಆರೋಪಿಗಳು ಸುಲಿಗೆ ಮಾಡುತ್ತಿದ್ದ ಖದೀಮರು| 

ಬೆಂಗಳೂರು(ನ.18): ಬಸ್‌ ಕಾಯುತ್ತಿದ್ದ ಸಾರ್ವಜನಿಕರಿಗೆ ಡ್ರಾಪ್‌ ಕೊಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡು ಸುಲಿಗೆ ಮಾಡುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸಾಗರ ತಾಲೂಕಿನ ಶೇಕ್‌ ಶಾಯಿದ್‌ ಅಹಮ್ಮದ್‌ ಹಾಗೂ ಅತೀಕ್‌ ಬಂಧಿತರಾಗಿದ್ದು, ಆರೋಪಿಗಳಿಂದ 30 ಗ್ರಾಂ ಚಿನ್ನ ಹಾಗೂ 2 ಕಾರು ಸೇರಿದಂತೆ 8.4 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಉಡುಪಿ; ಕಳ್ಳ ಗಂಡ, ಚೋರಿ ಹೆಂಡ್ತಿ..  ಎಲ್ಲ ಜಿಲ್ಲೆಯಲ್ಲೂ ಕಳ್ಳತನ ಮಾಡಿದ್ರು!

ಹೆಬ್ಬಾಳದ ಎಸ್ಟಿಂ ಮಾಲ್‌ ಬಳಿ ಮುಂಜಾನೆ ವೇಳೆ ಆಂಧ್ರಪ್ರದೇಶದ ಅನಂತಪುರ, ಹೈದರಾಬಾದ್‌ ಹಾಗೂ ಕರ್ನೂಲ್‌ ಸೇರಿದಂತೆ ಇತರೆಡೆಯಿಂದ ಆಗಮಿಸುವ ಪ್ರಯಾಣಿಕರು, ತಮ್ಮ ಮನೆಗಳಿಗೆ ಹೋಗಲು ಬಸ್‌ ಹಾಗೂ ಕ್ಯಾಬ್‌ ಕಾಯುತ್ತಿದ್ದರು. ಆಗ ಡ್ರಾಪ್‌ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು ಪ್ರಯಾಣಿಕರಿಗೆ ಬೆದರಿಸಿ ಆರೋಪಿಗಳು ಸುಲಿಗೆ ಮಾಡುತ್ತಿದ್ದರು. ಈ ಬಗ್ಗೆ ದಾಖಲಾದ ದೂರಿನ ಮೇರೆಗೆ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!