Udupi: ಮನೆ ಕಳ್ಳತನ ಪ್ರಕರಣ: ಹದಿಹರೆಯದ ಆರೋಪಿಗಳ ಬಂಧನ

By Govindaraj S  |  First Published Mar 2, 2023, 9:41 PM IST

ಜಿಲ್ಲೆಯಲ್ಲಿ ದಿನೇದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ, ಈ ನಡುವೆ ಚುರುಕಾಗಿರುವ ಪೊಲೀಸರು ಕಳ್ಳತನ ಪ್ರಕರಣ ಒಂದನ್ನು ಅಷ್ಟೇ ಚುರುಕಾಗಿ ಪತ್ತೆ ಮಾಡಿದ್ದಾರೆ. 


ಉಡುಪಿ (ಮಾ.02): ಜಿಲ್ಲೆಯಲ್ಲಿ ದಿನೇದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ, ಈ ನಡುವೆ ಚುರುಕಾಗಿರುವ ಪೊಲೀಸರು ಕಳ್ಳತನ ಪ್ರಕರಣ ಒಂದನ್ನು ಅಷ್ಟೇ ಚುರುಕಾಗಿ ಪತ್ತೆ ಮಾಡಿದ್ದಾರೆ. ಫೆಬ್ರವರಿ 19ರಂದು ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ  ಕೃಷ್ಣ ಕೃಪಾ ಹೆಸರಿನ ಮನೆಗೆ ಯಾರೋ ಕಳ್ಳರು ಒಳ ಪ್ರವೇಶಿಸಿ ಮನೆಯ ಬೆಡ್ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ ಅಂದಾಜು 20 ಗ್ರಾಂ ಕಿವಿಯ ಯೋಲೆ ಮತ್ತು ಸರ,  20 ಗ್ರಾಂ ಪೆಂಡೆಂಟ್ ಇರುವ‌ ಚಿನ್ನದ ಸರ,  4 ಗ್ರಾಂ ಚಿನ್ನದ ಉಂಗುರ, 8 ಗ್ರಾಂ ಚಿನ್ನದ ಸರ ಹಾಗೂ 2 ಗ್ರಾಂ ಮೂಗಿನ ಬೊಟ್ಟು ಕಳವು ಮಾಡಿಕೊಂಡು ಹೋಗಿದ್ದರು. 

ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 2,40,000/- ಆಗ ಬಹುದು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 37 /2023 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು.ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಬಗ್ಗೆ ನಿರಂತರವಾಗಿ ಪ್ರಯತ್ನಿಸಿ ದಿನಾಂಕ 02.03.2023 ರಂದು ಆರೋಪಿತರಾದ ಅಲೆವೂರು ನಿವಾಸಿ ವರುಣ ಪ್ರಾಯ 19 ವರ್ಷ, ಕಾರ್ತಿಕ್ ಪೂಜಾರಿ ಪ್ರಾಯ 19 ವರ್ಷ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ 2 ಬಾಲಕರನ್ನು ಪೆರಂಪಳ್ಳಿ ಶೀಂಬ್ರಾ ಕ್ರಾಸ್‌ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ. 

Tap to resize

Latest Videos

undefined

ನಿಮ್ಮ ಕಾರ್ಯಕ್ರಮ ಹೇಳಿ, ನಮ್ಮನ್ನು ಟೀಕಿಸುವುದು ಬೇಡ: ಎಚ್‌.ಡಿ.ಕುಮಾರಸ್ವಾಮಿ

ಮಣಿಪಾಲ ಪೊಲೀಸ್ ಠಾಣಾ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದು, ಅವರುಗಳಿಂದ ಕಳವು ಮಾಡಿದ 2,40,000/- ರೂ ಚಿನ್ನಾಭರಣಗಳನ್ನು ಮತ್ತು 1 ಸ್ಕೂಟರ್‌ ಹಾಗೂ ಕೃತ್ಯಕ್ಕೆ ಬಳಸಿದ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ 2 ಪ್ರಕರಣಗಳು ಹಾಗೂ ಮಣಿಪಾಲ ಠಾಣೆಯ 1 ಪ್ರಕರಣ ಸೇರಿ ಒಟ್ಟು 3 ಪ್ರಕರಣದಲ್ಲಿ ಭಾಗಿಯಾಗಿದ್ದು, ಸದರಿ 3 ಪ್ರಕರಣಗಳನ್ನು ಭೇದಿಸಿ ಆರೋಪಿತರುಗಳಿಂದ ಸುಮಾರು 4 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ್ ಎಮ್‌ ಎಚ್‌ ಐ.ಪಿ.ಎಸ್‌ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ಧಲಿಂಗಪ್ಪ ಟಿ ಕೆ.ಎಸ್‌.ಪಿ.ಎಸ್‌ರವರು ತಮ್ಮ ತಂಡದ ಸದಸ್ಯರಾದ ದಿನಕರ ಕೆ.ಪಿ, ಡಿ.ವೈ.ಎಸ್.ಪಿ ಉಡುಪಿ, ದೇವರಾಜ ಟಿ.ವಿ ಪೊಲೀಸ್‌ ನಿರೀಕ್ಷಕರು ಮಣಿಪಾಲ ಠಾಣೆ, ನವೀನ್ ನಾಯ್ಕ್ ಪಿ.ಎಸ್.ಐ ಮಣಿಪಾಲ ಠಾಣೆ, ರುಕ್ಮ ನಾಯ್ಕ್ ಪಿ ಎಸ್ ಐ ಮಣಿಪಾಲ ಠಾಣೆ ಹಾಗೂ ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್‌.ಐ ಗಂಗಪ್ಪ ಎಸ್‌, ಎ.ಎಸ್‌.ಐ ನಾಗೇಶ್‌ ನಾಯಕ್‌, ಎ.ಎಸ್‌.ಐ ಶೈಲೇಶ್‌ ಕುಮಾರ್‌, ಹೆಚ್ ಸಿ 164 ಪ್ರಸನ್ನ ಸಿ, ಹೆಚ್.ಸಿ. 1094 ಇಮ್ರಾನ್‌, ಹೆಚ್ ಸಿ 2168 ಸುಕುಮಾರ್‌ ಶೆಟ್ಟಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

click me!