ಚಿನ್ನದ ಮಳಿಗೆಗಳಿಗೆ ಭೇಟಿ ನೀಡಿ ಚಿನ್ನಾಭವರಣ ಎಗರಿಸುತ್ತಿದ್ದ ಇಬ್ಬರು ಕಳ್ಳರ ಬಂಧನ| ಬಂಧಿತರಿಂದ 3.98 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ| ಮೂರು ಲಕ್ಷದ ತೊಂಬತ್ತೆಂಟು ಸಾವಿರ ರು. ಮೌಲ್ಯದ ಆಭರಣಗಳನ್ನು ಎಗರಿಸಿ ಪರಾರಿಯಾಗಿದ್ದ ಖದೀಮರು|
ಹುಬ್ಬಳ್ಳಿ(ಸೆ.13): ಗ್ರಾಹಕರ ಸೋಗಿನಲ್ಲಿ ಪ್ರತಿಷ್ಠಿತ ಚಿನ್ನದ ಮಳಿಗೆಗಳಿಗೆ ಭೇಟಿ ನೀಡಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭವರಣಗಳನ್ನು ಎಗರಿಸುತ್ತಿದ್ದ ಇಬ್ಬರು ಚಾಲಾಕಿ ಕಳ್ಳರನ್ನ ಹುಬ್ಬಳ್ಳಿಯ ಶಹರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಧಾರವಾಡದ ವಿರಕ್ತಾನ ಕಟಗಿ ಹಾಗೂ ಗದಗನ ಶರತ ಶ್ರೀಕಾಂತ ಕಾರಂತ ಎಂದು ಗುರುತಿಸಲಾಗಿದೆ. ಬಂಧಿತರಿಂದ 3.98 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮೂರು ದಿನಗಳ ಹಿಂದೆ ಬಂಧಿತ ಖದೀಮರು ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ ಕಲ್ಯಾಣ ಜುವೆಲರ್ಸ್‌ಗೆ ಭೇಟಿ ನೀಡಿದ್ದರು. ಮುಖಕ್ಕೆ ಮಾಸ್ಕ್ ಧರಿಸಿ ಗ್ರಾಹಕರ ಸೋಗಿನಲ್ಲಿ ಜುವೆಲರ್ಸ್‌ಗೆ ಬಂದ ಈ ಇಬ್ಬರು ಮೂರು ಲಕ್ಷದ ತೊಂಬತ್ತೆಂಟು ಸಾವಿರ ರು. ಮೌಲ್ಯದ ಆಭರಣಗಳನ್ನು ಎಗರಿಸಿ ಪರಾರಿಯಾಗಿದ್ದರು.
ಗುಂಡಿಕ್ಕಿ ಬಂಧಿಸಿದ್ದ ಸರಗಳ್ಳರಿಂದ 20 ಲಕ್ಷ ಮೌಲ್ಯದ ಆಭರಣ ವಶ
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ತಕ್ಷಣವೇ ಕಾರ್ಯಪೃವತ್ತರಾಗಿ ಚಾಲಾಕಿ ಕಳ್ಳರನ್ನು ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನದ ದೃಶ್ಯಗಳು ಜುವೆಲರ್ಸ್ ಶಾಪ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.