
ಮಂಡ್ಯ (ಏ.18): ಐಸ್ ಕ್ರೀಮ್ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬುಧವಾರ ನಡೆದ ಘಟನೆಯಲ್ಲಿ ಅವಳಿ ಮಕ್ಕಳು ಐಸ್ ಕ್ರೀಮ್ ತಿಂದು ಅಸ್ವಸ್ಥರಾದ ಬಳಿಕ ಸಾವು ಕಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಗೊತ್ತಾಗಿದ್ದು, ತಾಯಿಯೇ ಮಗುವಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ. ಕೌಟುಂಬಿಕ ಕಲಹದ ಕಾರಣಕ್ಕೆ ಒಟ್ಟು ಮೂರು ಮಕ್ಕಳಿಗೆ ತಾಯಿ ವಿಷ ಹಾಕಿದ್ದಳು. ಅವಳಿ ಜವಳಿ ಮಕ್ಕಳು ಹಾಗೂ ಇನ್ನೊಂದು ಮಗುವಿಗೆ ವಿಷ ಹಾಕಿದ್ದಳು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು. ಗ್ರಾಮದ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಜವಳಿ ಕಂದಮ್ಮಗಳು ಸಾವು ಕಂಡಿದ್ದರು.
ಪೊಲೀಸ್ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದು ಗೊತ್ತಾಗಿದೆ. ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ವಿಷ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.
Mandya: ಐಸ್ ಕ್ರೀಮ್ ತಿಂದು ಒಂದೂವರೆ ವರ್ಷದ ಅವಳಿ ಕಂದಮ್ಮಗಳ ಸಾವು?
ಪೂಜಾ ಪತಿ ಪ್ರಸನ್ನ ಜೊತೆ ಪದೇ ಪದೇ ಜಗಳವಾಡುತ್ತಿದ್ದ. ಮನೆಯಲ್ಲಿ ಜಗಳ ವಿಕೋಪಕ್ಕೆ ತಿರುಗಿತ್ತು. ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ಪೂಜಾ ವಿಷ ಹಾಕಿದ್ದಳು. ಮನೆಯಲ್ಲಿ ಇದ್ದ ಜಿರಳೆಯ ಲಕ್ಷ್ಮಣ ರೇಖೆಯನ್ನು ಊಟಕ್ಕೆ ಹಾಕಿ ಮಕ್ಕಳಿಗೆ ಪೂಜಾ ತಿನ್ನಿದ್ದಳು. ಬಳಿಕ ಅದೇ ಲಕ್ಷ್ಮಣ ರೇಖೆಯನ್ನು ಪೂಜಾ ಕೂಡ ತಿಂದಿದ್ದಳು. ಬಳಿಕ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿತ್ತು. ತಾಯಿ ಪೂಜಾ ಹಾಗೂ ಮೊದಲ ಮಗಳು ಬೃಂದಾಗೆ ಮಾತ್ರ ಚಿಕಿತ್ಸೆ ಮುಂದುವರಿದಿತ್ತು.
ಹುಟ್ಟುಹಬ್ಬ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ತಿಂದ 10 ವರ್ಷ ಬಾಲಕಿ ನಿಧನ, ಕುಟುಂಬಸ್ಥರು ಅಸ್ವಸ್ಥ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ