* ನೇಣುಬಿಗಿದುಕೊಂಡು ಪೊಲೀಸ್ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ.
* ಲಾವಣ್ಯ (21) ನೇಣಿಗೆ ಶರಣಾದ ಮೃತ ದುರ್ದೈವಿ.
* ಚಿಕ್ಕನಾಯಕನಹಳ್ಳಿ ಪೊಲೀಸ್ ವಸತಿ ಗೃಹದಲ್ಲಿ ಘಟನೆ.
* ಹುಳಿಯಾರು ಹೋಬಳಿ ಕಲ್ಲಹಳ್ಳಿ ಗ್ರಾಮದ ಲಾವಣ್ಯ
ತುಮಕೂರು(ಜ. 30) ನೇಣುಬಿಗಿದುಕೊಂಡು ಪೊಲೀಸ್ ಕಾನ್ಸ್ಟೇಬಲ್ (Karnataka Police) ಪತ್ನಿ ಆತ್ಮಹತ್ಯೆಗೆ (suicide) ಶರಣಾಗಿದ್ದಾರೆ. ಲಾವಣ್ಯ (21) ನೇಣಿಗೆ ಶರಣಾಗಿದ್ದಾರೆ. ಚಿಕ್ಕನಾಯಕನಹಳ್ಳಿ (Tumkur) ಪೊಲೀಸ್ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶಶಿಧರ್ ಪತ್ನಿ ಲಾವಣ್ಯ ನೇಣಿಗೆ ಶರಣಾಗಿದ್ದಾರೆ. ಪಟ್ಟಣದ ಪೊಲೀಸ್ ವಸತಿ ಗೃಹದಲ್ಲಿ ಪತ್ನಿ ಹಾಗೂ ಮಗು ಜೊತೆ ವಾಸವಿದ್ದ ಶಶಿಧರ್ ವಾಸ ಮಾಡುತ್ತಿದ್ದರು.
ಹುಳಿಯಾರು ಹೋಬಳಿ ಕಲ್ಲಹಳ್ಳಿ ಗ್ರಾಮದ ಲಾವಣ್ಯಳ ಜತೆ ಕಳೆದ ಒಂದೂವರೆ ವರ್ಷಗಳ ಹಿಂದೆ ಶಶಿಧರ್ ವಿವಾಹವಾಗಿದ್ದರು. ಇವರಿಗೆ 6 ತಿಂಗಳ ಗಂಡು ಮಗು ಇದೆ. ಭಾನುವಾರ ಮಧ್ಯಾಹ್ನ ಪೊಲೀಸ್ ವಸತಿ ಗೃಹದಲ್ಲಿ ಶಶಿಧರ್ ಪತ್ನಿ ಲಾವಣ್ಯ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚಿಕ್ಕನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.
ಬೆಳಗಾವಿ, ಬುದ್ಧಿಮಾಂದ್ಯ ಮಕ್ಕಳಾಗಿದ್ದಕ್ಕೆ ಕಿರುಕುಳ, ಮಗನೊಂದಿಗೆ ಕೆರೆಗೆ ಹಾರಿದ ಮಹಿಳೆ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡನಿಂದ ನಿತ್ಯವೂ ಕಿರುಕುಳ ತಾಳಲಾರದೆ ಮಹಿಳೆ ಮಗನೊಂದಿಗೆ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ಪ್ರಕರಣ ನಡೆದಿದ್ದು ಸೇವಂತಿ ಪ್ಯಾಟಿ(32) ಪುತ್ರ ಮಹಾಂತೇಶ್ ಪ್ಯಾಟಿ(12) ಜತೆ ಕೆರೆಗೆ ಹಾರಿದ್ದಾರೆ.
Suvarna FIR: ಪ್ರಿಯಕರನಿಗೆ ಪತ್ನಿಯ ಬೆತ್ತಲೆ ಕರೆ... ಮಗನೊಂದಿಗೆ ಸುಸೈಡ್‌ಗೂ ಮುನ್ನ ಅದೊಂದು ವಿಡಿಯೋ ಮಾಡಿದ್ದ!
ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡ ಬೆಳ್ಳಪ್ಪ ಪ್ರತಿದಿನ ಹಿಂಸೆ ನೀಡುತ್ತಿದ್ದ. ಗುರುವಾರ ಸಂಜೆ ಹೆಂಡತಿ ಮಗನ ಮೇಲೆ ಹಲ್ಲೆ ಮಾಡಿದ್ದ. ಕಿರಿಯ ಮಗನನ್ನು ತಂಗಿಯ ಮನೆಯಲ್ಲಿ ಬಿಟ್ಟು ಬಂದಿದ್ದ. ಇನ್ನೊಂದು ಮಗುವನ್ನು ಗಂಡ ಹೆಂಡತಿ ನೋಡಿಕೊಳ್ಳುತ್ತಿದ್ದರು. ಮಹಿಳೆ ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಿಎಸ್‌ವೈ ಮೊಮ್ಮಗಳ ಸುಸೈಡ್: ಕರ್ನಾಟಕ ಮಾಜಿ ಸಿಎಂ ಬಿ, ಎಸ್. ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪದ್ಮಾವತಿ ಪುತ್ರಿ ಸೌಂದರ್ಯ(30) ಆತ್ಮಹತ್ಯೆ ಮಾಡಿಕೊಂಡಿದ್ದರು. ಬಿ. ಎಸ್ ಯಡಿಯೂರಪ್ಪ ಅವರ ದ್ವಿತೀಯ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಅವರು ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಎಲ್‌ಐಸಿ ಏಜೆಂಟನ್ ಸಂಗ ಬಿಡದ ಪತ್ನಿ: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಮಗನ ಜತೆ ಅಪ್ಪ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಸಮೀಪದ ಚನ್ನಾಪುರ ಕೆರೆಗೆ ಮಗುವನ್ನು ಸೊಂಟಕ್ಕೆ ಕಟ್ಟಿಗೊಂಡು ಗಂಡ ಜಿಗಿದಿದ್ದ.
ಗಂಗಾಧರಗೌಡ ತನ್ನ 6 ವರ್ಷದ ಪುತ್ರ ಜಸ್ವಿತ್‌ನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೆ ಪತ್ನಿ ಸಿಂಧು ಹಾಗೂ ಎಲ್‌ಐಸಿ ಏಜೆಂಟ್ ಜಿ.ಸಿ. ನಂಜುಂಡೇಗೌಡ ಕಾರಣ ಎಂದು ಬರೆದಿರುವ ಡೆತ್‌ನೋಟ್ ಘಟನಾ ಸ್ಥಳದಲ್ಲಿ ಪತ್ತೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಗಂಗಾಧರಗೌಡ ಕೊನೆಯದಾಗಿ ಮಾಡಿದ್ದ ವಿಡಿಯೋ ಸಹ ಲಭ್ಯವಾಗಿತ್ತು.
ಅಕ್ರಮ ಸಂಬಂಧ ಆರೋಪದಿಂದ ಮನನೊಂದು ಆತ್ಮಹತ್ಯೆ: ಮಹಿಳೆಯೋರ್ವರು ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಭದ್ರಾವತಿಯ ಹಂಚಿನ ಸಿದ್ದಾಪುರದಿಂದ ಪ್ರಕರಣ ವರದಿಯಾಗಿತ್ತು.