ಒಂದೇ ನೋಂದಣಿಯ ಸಂಖ್ಯೆಯ ಎರಡು ಬೆಂಜ್‌ ಕಾರು!

By Web Desk  |  First Published Nov 20, 2019, 5:03 PM IST

ಒಂದೇ ನೋಂದಣಿಯ ಸಂಖ್ಯೆಯ ಎರಡು ಬೆಂಜ್‌ ಕಾರು!| ಇದೆಲ್ಲಾ ಬೇಕಿತ್ತಾ? ತೆರಿಗೆ ವಂಚಿಸಲು ಬೇರೆ ನೋಂದಾಯಿತ ಕಾರಿನ ನೋಂದಣಿ ಸಂಖ್ಯೆ ಅಳವಡಿಸಿದ್ದ| ಸಾರಿಗೆ ಅಧಿಕಾರಿಗಳಿಂದ ಕಾರು ಜಪ್ತಿ


ಬೆಂಗಳೂರು[ನ.20]: ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಅಕ್ರಮವಾಗಿ ಓಡಾಡುತ್ತಿದ್ದ ಐಷಾರಾಮಿ ಮರ್ಸಿಡೀಜ್‌ ಬೆಂಜ್‌ ಕಾರನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.

ನಗರದಲ್ಲಿ ಒಂದೇ ನೋಂದಣಿ ಸಂಖ್ಯೆಯ ಎರಡು ಬೆಂಜ್‌ ಕಾರುಗಳು ಓಡಾಡುತ್ತಿರುವ ಬಗ್ಗೆ ಯಶವಂತಪುರ ಆರ್‌ಟಿಓ ಕಚೇರಿ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಕಳೆದ ಒಂದು ವಾರದಿಂದ ಅಕ್ರಮವಾಗಿ ಓಡಾಡುತ್ತಿದ್ದ ಬೆಂಜ್‌ ಕಾರು ಹಿಡಿಯಲು ಬಲೆ ಬೀಸಿದ್ದರು. ಅದರಂತೆ ಮಂಗಳವಾರ ಮುಂಜಾನೆ ಮೈಸೂರು ರಸ್ತೆಯ ಮೈಲಸಂದ್ರದ ಬಳಿ ನಕಲಿ ನೋಂದಣಿ ಸಂಖ್ಯೆಯ ಬೆಂಜ್‌ ಕಾರು ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ.

Latest Videos

undefined

ಅತ್ತಿಗೆ ಜತೆ ಚಕ್ಕಂದವಾಡುತ್ತಿದ್ದವನ ಹತ್ಯೆಗೈದ ಮೈದುನ: ಸಂಬಂಧ ಬೆಳೆಸಿದ್ದ ಮಹಿಳೆಯೂ ಸಾವು

ಮಂಡ್ಯದ ವಿ.ವಿ.ನಗರದ ಬಿ.ಕೆ.ರೇಖಾ ಎಂಬುವವರ ಹೆಸರಿನಲ್ಲಿ 2013ರಲ್ಲಿ ಈ ನಕಲಿ ನೋಂದಣಿ ಸಂಖ್ಯೆಯ .77 ಲಕ್ಷ ಮೌಲ್ಯದ ಬೆಂಜ್‌ ಕಾರನ್ನು ಖರೀದಿಸಲಾಗಿದೆ. ಅಂದಿನಿಂದ ಈವರೆಗೂ ಈ ಕಾರನ್ನು ನೋಂದಣಿ ಮಾಡಿಸದೆ ನಕಲಿ ನೋಂದಣಿ ಫಲಕ ಅಳವಡಿಸಿಕೊಂಡು ಓಡಾಡಿದ್ದಾರೆ. ಮೈಸೂರು ಲೈಟ್ಸ್‌ ಆ್ಯಂಡ್‌ ಇಂಟಿರಿಯರ್‌ ಕಂಪನಿ 2018ರಲ್ಲಿ ಖರೀದಿಸಿರುವ ಬೆಂಜ್‌ ಕಾರಿನ ನೋಂದಣಿ ಸಂಖ್ಯೆ(ಕೆ.ಎ.05 ಎಂ.ವಿ.6201) ನಕಲು ಮಾಡಿ ಕಾರಿಗೆ ಅಳವಡಿಸಿಕೊಂಡಿದ್ದಾರೆ ಎಂದು ಯಶವಂತಪುರ ಆರ್‌ಟಿಓ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ರಾಜಣ್ಣ ಹೇಳಿದರು.

ಕಾಂಪೌಂಡ್‌ ಹಾರಿ ಚಾಲಕ ಪರಾರಿ;

ಈ ಬೆಂಜ್‌ ಕಾರು ಬಿ.ಕೆ.ರೇಖಾ ಅವರ ಹೆಸರಿನಲ್ಲಿ ಖರೀದಿಸಿದ್ದರೂ ಮೈಲಸಂದ್ರದ ನಿವಾಸಿ ರಾಜುಗೌಡ ಎಂಬುವವರು ಬಳಕೆ ಮಾಡುತ್ತಿದ್ದರು. ಮುಂಜಾನೆ 4ರ ಸಮಯದಲ್ಲಿ ಮೈಲಸಂದ್ರದ ಬಳಿ ರಾಜುಗೌಡ ಈ ಕಾರಿನಲ್ಲಿ ಹೋಗುವಾಗ ಕಾರ್ಯಾಚರಣೆ ನಡೆಸಿ ಹಿಡಿಯಲಾಯಿತು. ಬಳಿಕ ಕಾರು ಸಮೇತ ಯಶವಂತಪುರ ಆರ್‌ಟಿಓ ಕಚೇರಿಗೆ ಕರೆತರಲಾಯಿತು. ಈ ವೇಳೆ ಆತ ಕಾರು ಬಿಟ್ಟು ಕಾಂಪೌಂಡ್‌ ಹಾರಿ ಪರಾರಿಯಾದರು. ಈ ಮಧ್ಯ ಅಸಲಿ ನೋಂದಣಿಯ ಸಂಖ್ಯೆಯ ಬೆಂಜ್‌ ಕಾರಿನ ಮಾಲಿಕರು ಕಾರಿನ ಸಹಿತ ಆರ್‌ಟಿಓ ಕಚೇರಿಗೆ ಬಂದು ಕಾರಿನ ಮೂಲ ದಾಖಲೆಗಳನ್ನು ಹಾಜರುಪಡಿಸಿದರು. ಬಳಿಕ ಅವರ ಕಾರನ್ನು ಬಿಟ್ಟು ಕಳುಹಿಸಲಾಯಿತು ಎಂದು ಮಾಹಿತಿ ನೀಡಿದರು.

ನಕಲಿ ನೋಂದಣಿ ಸಂಖ್ಯೆಯ ಬೆಂಜ್‌ ಕಾರಿನ ಮಾಲಿಕರ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

16 ಲಕ್ಷ ತೆರಿಗೆ ವಂಚನೆ

ಕಾರು ಖರೀದಿಸಿದಾಗ ಶೋರಂನಲ್ಲಿ ತಾತ್ಕಾಲಿಕ ನೋಂದಣಿ ಸಂಖ್ಯೆ ನೀಡುತ್ತಾರೆ. ಒಂದು ತಿಂಗಳವರೆಗೆ ಈ ತಾತ್ಕಾಲಿಕ ನೋಂದಣಿಗೆ ಮಾನ್ಯತೆ ಇರುತ್ತದೆ. ಬಳಿಕ ಮಾಲಿಕರು ಸಂಬಂಧಪಟ್ಟಆರ್‌ಟಿಓ ಕಚೇರಿಯಲ್ಲಿ ಕಾರಿನ ದರ ಆಧರಿಸಿ ನಿಗದಿಪಡಿಸಿದ ರಸ್ತೆ ತೆರಿಗೆ ಪಾವತಿಸಿ ಶಾಶ್ವತ ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕು. ಈಗ ಜಪ್ತಿ ಮಾಡಿರುವ ಬೆಂಜ್‌ ಕಾರಿನ ಮಾಲಿಕರು ಈವರೆಗೂ ನೋಂದಣಿ ಮಾಡಿಸಿಲ್ಲ. 6 ವರ್ಷದ ಹಿಂದೆ ಈ ಕಾರಿನ ದರ .77 ಲಕ್ಷ ಇದ್ದು, ತೆರಿಗೆ ಸುಮಾರು .16 ಲಕ್ಷ ಪಾವತಿಸಬೇಕಿತ್ತು.

ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಶಂಕೆ: ಯುವಕರಿಬ್ಬರ ಶಂಕಾಸ್ಪದ ಸಾವು!

click me!