ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನನ್ನು ಕೊಂದ ಮೈದುನ: ವಿಷ ಕುಡಿದು ಸಾವನ್ನಪ್ಪಿದ ಅತ್ತಿಗೆ

By Web Desk  |  First Published Nov 20, 2019, 3:44 PM IST

ತನ್ನ ಸಹೋದರನ ಹೆಂಡ್ತಿ [ಅತ್ತಿಗೆ] ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನ್ನು ಮೈದುನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಮತ್ತೊಂದೆಡೆ ಘಟನೆಯಿಂದ ಹೆದರಿ ವಿಷ ಕುಡಿದು ಆಸ್ಪತ್ರೆ ಸೇರಿದ್ದ ಅತ್ತಿಗೆ ಸಾವನ್ನಪ್ಪಿದ್ದಾಳೆ.


ಶಿವಮೊಗ್ಗ, (ನ.20): ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ದೊಡ್ಡಮಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿತ್ತು. 

Tap to resize

Latest Videos

undefined

ಅತ್ತಿಗೆಯೊಂದಿಗೆ ಚಕ್ಕಂದವಾಡುತ್ತಿದ್ದವನನ್ನು ಹತ್ಯೆಗೈದ ಮೈದುನ..!

ಮಂಜಪ್ಪ (43) ಕೊಲೆಯಾದ ವ್ಯಕ್ತಿ. ಆಂಜನೇಯ (30) ಎಂಬಾತನೇ ಮಂಜಪ್ಪನನ್ನು ಕೊಲೆ ಮಾಡಿದ ಆರೋಪಿಯಾಗಿದ್ದು, ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಮೇಲ್ನೊಟಕ್ಕೆ  ತಿಳಿದುಬಂದಿದೆ.

ಈ ಘಟನೆಯಿಂದ ಹೆದರಿ ಆಂಜನೇಯ್ಯ ಅತ್ತಿಗೆ ಮಂಜಪ್ಪನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಲಲಿತಾ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಳು. ಆದ್ರೆ, ಚಿಕಿತ್ಸೆ ಫಲಕಾರಿಯಾದೇ ಇಂದು (ಬುಧವಾರ) ಸಾವನ್ನಪ್ಪಿದ್ದಾಳೆ. ಇನ್ನು ಈ ಬಗ್ಗೆ ಕುಂಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.

ಆಗಿದ್ದೇನು..?
ಆಂಜನೇಯ್ಯ ಸಹೋದರ ವೆಂಕಟೆಶ್ ಪತ್ನಿ ಲಲಿತಾ ಜತೆ ಮಂಜಪ್ಪ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದು 4 ತಿಂಗಳ ಹಿಂದೆಯೇ ಈ ಪ್ರಕರಣ ಭುಗಿಲೆದ್ದಿದ್ದು, ಕೊನೆಗೆ, ರಾಜಿ-ಸಂಧಾನ ಮೂಲಕ ಶಮನವಾಗಿತ್ತು. 

ಆದರೆ ಮಂಜಪ್ಪ ಹಳೇ ಚಾಳಿಯನ್ನು ಬಿಡದ ಮಂಜಪ್ಪ ಪುನಃ  ನಿನ್ನೆ [ಸೋಮವಾರ] ರಾತ್ರಿ ಲಲಿತಾ ಜತೆ ಚಕ್ಕಂದವಾಡಲು ಹೋಗಿದ್ದಾನೆ. ಇದನ್ನು ನೋಡಿದ ಆಂಜನೇಯ್ಯ, ಕುಪಿತಗೊಂಡು ಮಂಜಪ್ಪನನ್ನ ಹತ್ಯೆ ಮಾಡಿದ್ದ. ಇದರಿಂದ ಭಯಗೊಂಡಿದ್ದ ಲಲಿತಾ ವಿಷ ಸೇವಿಸಿದ್ದಳು.

click me!