ರೈಲ್ವೆ ಸ್ಟೇಷನ್‌ನಲ್ಲೇ ಅತ್ಯಾಚಾರ: ಕೃತ್ಯವೆಸಗಿದ 4 ಉದ್ಯೋಗಿಗಳ ಬಂಧನ

Published : Jul 23, 2022, 01:06 PM IST
ರೈಲ್ವೆ ಸ್ಟೇಷನ್‌ನಲ್ಲೇ ಅತ್ಯಾಚಾರ: ಕೃತ್ಯವೆಸಗಿದ 4 ಉದ್ಯೋಗಿಗಳ ಬಂಧನ

ಸಾರಾಂಶ

ರಾಷ್ಟ್ರ ರಾಜಧಾನಿಯ ರೈಲ್ವೆ ಸ್ಟೇಷನ್‌ನಲ್ಲಿ ರೈಲ್ವೆ ಸಿಬ್ಬಂದಿಯೇ ಅತ್ಯಾಚಾರದಂತಹ ಹೀನ ಕೃತ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ರೈಲ್ವೆ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ನಾಲ್ವು ಆರೋಪಿಗಳನ್ನು ಬಂಧಿಸಿರುವ ಬಗ್ಗೆಯೂ ತಿಳಿಸಿದ್ದಾರೆ. 

ದೆಹಲಿ ರೈಲು ನಿಲ್ದಾಣದಲ್ಲೇ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ, ಈ ಘಟನೆ ಸಂಬಂಧ ನಾಲ್ವರು ರೈಲ್ವೆ ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಾಲ್ವರು ರೈಲ್ವೆ ಇಲಾಖೆಯ ಎಲೆಕ್ಟ್ರಿಕಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

ನವದೆಹಲಿ ರೈಲ್ವೆ ಸ್ಟೇಷನ್‌ನ ಕೊಠಡಿಯೊಂದರಲ್ಲಿ ಇಬ್ಬರು ರೈಲ್ವೆ ಉದ್ಯೋಗಿಗಳು ಅತ್ಯಾಚಾರದಂತಹ ಹೀನ ಕೃತ್ಯ ನಡೆಸಿರುವ ಘೋರ ಘಟನೆ ನಡೆದಿದೆ. ರೈಲ್ವೆ ಇಲಾಖೆಯೇ ಈ ಘಟನೆ ಬಗ್ಗೆ ಒಪ್ಪಿಕೊಂಡಿದ್ದು, ಒಟ್ಟು ನಾಲ್ವರು ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇಬ್ಬರು ಅತ್ಯಾಚಾರ ಮಾಡಿದ್ದರೆ, ಇನ್ನಿಬ್ಬರು ಆರೋಪಿಗಳು ಕೃತ್ಯ ನಡೆಯುವಾಗ ಆ ಕೊಠಡಿಯ ಕಾವಲು ಕಾಯುತ್ತಿದ್ದರು ಎಂದು ತಿಳಿದುಬಂದಿದೆ. 

ದೆಹಲಿಯಲ್ಲಿ ವ್ಯಕ್ತಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟ ಪಾತಕಿ..!

ಕೃತ್ಯ ಬೆಳಕಿಗೆ ಬಂದಿದ್ದೇಗೆ..?
ರೈಲ್ವೆ ಸ್ಟೇಷನ್‌ನ ಪ್ಲಾಟ್‌ಫಾರ್ಮ್‌ 8 - 9 ರಲ್ಲಿ ಶುಕ್ರವಾರ ಕಂಡುಬಂದ ಮಹಿಳೆ ರೈಲ್ವೆ ಅಧಿಕಾರಿಗಳಿಗೆ ತಾನು ಅತ್ಯಾಚಾರಕ್ಕೊಳಗಾಗಿರುವ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಆ ಅಧಿಕಾರಿಗಳು ರೈಲ್ವೆ ರಕ್ಷಣಾ ಪಡೆಗೆ ಮಾಹಿತಿ ನೀಡಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪರಿಚಿತನಿಂದಲೇ ಕೃತ್ಯ
ಇನ್ನು, ಘಟನೆ ಬಗ್ಗೆ ವಿವರ ನೀಡಿದ ಮಹಿಳೆ ತಾನು ಕಳೆದೊಂದು ವರ್ಷದಿಂದ ಪತಿಯಿಂದ ಬೇರ್ಪಟ್ಟಿದ್ದು, ಈ ಸಂಬಂಧ ಕೋರ್ಟ್‌ನಲ್ಲಿ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ಹಾಗೂ ಎರಡು ವರ್ಷಗಳ ಹಿಂದೆ ತನಗೆ ಫ್ರೆಂಡ್‌ ಒಬ್ಬರ ಮೂಲಕ ವ್ಯಕ್ತಿಯ ಪರಿಚಯವಾಯಿತು. ಆತ ತನ್ನನ್ನು ರೈಲ್ವೆ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದು, ಹಾಗೂ ಮಹಿಳೆಗೆ ಕೆಲಸ ಕೊಡಿಸೋದಾಗಿಯೂ ಭರವಸೆ ನೀಡಿದ್ದ ಎಂದು ಮಹಿಳೆ ಹೇಳಿರುವ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಹಾಗೂ, ಆರೋಪಿ ವ್ಯಕ್ತಿ ತನಗೆ ಫೋನ್‌ನ ಮೂಲಕ ಸಂಪರ್ಕದಲ್ಲಿದ್ದರು. ಜುಲೈ 21ರಂದು ಆತನ ಮಗನ ಹುಟ್ಟುಹಬ್ಬ ಹಾಗೂ ಹೊಸ ಮನೆ ತೆಗೆದುಕೊಂಡಿದ್ದಕ್ಕೆ ಪಾರ್ಟಿ ಎಂದು ಆಹ್ವಾನ ನೀಡಿದ್ದರು ಎಂದು ಮಹಿಳೆ ಹೇಳಿರುವ ಬಗ್ಗೆಯೂ ರೈಲ್ವೆ ಇಲಾಖೆ ತಿಳಿಸಿದೆ. 

ಕೀರ್ತಿ ನಗರ ಮೆಟ್ರೋ ಸ್ಟೇಷನ್‌ನಿಂದ ರಾತ್ರಿ ಸುಮಾರು 10:30 ರ ವೇಳೆಗೆ ಮಹಿಳೆಯನ್ನು ಪಿಕಪ್‌ ಹೋದ ವ್ಯಕ್ತಿ ರೈಲ್ವೆ ಸ್ಟೇಷನ್‌ನ ಪ್ಲಾಟ್‌ಫಾರ್ಮ್‌ 8 - 9 ರ ಬಳಿ ಕರೆದೊಯ್ದಿದ್ದಾನೆ. ಅಲ್ಲದೆ, ಎಲೆಕ್ಟ್ರಿಕಲ್‌ ಸಿಬ್ಬಂದಿಗೆ ನೀಡಿರುವ ಕೊಠಡಿಯೊಂದರಲ್ಲಿ ಕುಳಿತುಕೊಳ್ಳುವಂತೆಯು ಕೇಳಿಕೊಂಡಿದ್ದಾನೆ ಎಂದೂ ರೈಲ್ವೆ ಇಲಾಖೆ ಘಟನೆ ಬಗ್ಗೆ ಮಾಹಿತಿ ನೀಡಿದೆ. 

ನಂತರ ತನ್ನ ಗೆಳೆಯನೊಬ್ಬನ ಜತೆ ಆ ಕೊಠಡಿಗೆ ಬಂದ ಆರೋಪಿ ಆ ರೂಂ ಅನ್ನು ಲಾಕ್‌ ಮಾಡಿ ಲೈಂಗಿಕ ಕೃತ್ಯ ನಡೆಸಿದ್ದಾರೆ. ಒಬ್ಬರಾದ ನಂತರ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಇನ್ನಿಬ್ಬರು ಅಹೋದ್ಯೋಗಿಗಳು ಕೊಠಡಿಯ ಹೊರಗಿನಿಂದ ಕಾವಲು ಕಾಯುವ ಮೂಲಕ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದೂ ಅತ್ಯಾಚಾರಕ್ಕೊಳಗಾಗಿರುವ ಮಹಿಳೆ ಹೇಳಿಕೊಂಡಿರುವ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. 

ಬೆನ್ನಟ್ಟಿದ ಐವರು ಕಾಮುಕರು : ಶಾಲಾ ಕಟ್ಟಡದಿಂದ ಹಾರಿದ ಬಾಲಕಿ

ಆರೋಪಿಗಳ ಬಂಧನ
ಇನ್ನು, ಘಟನೆ ಸಂಬಂಧ ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಸ್ಥಳೀಯ ಕೋರ್ಟ್‌ ಎದುರು ವಿಚಾರಣೆಗೆ ಒಳಪಡಿಸಿದ್ದು, ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದೂ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. 

ರಾಷ್ಟ್ರ ರಾಜಧಾನಿಯ ರೈಲ್ವೆ ಸ್ಟೇಷನ್‌ನಲ್ಲೇ ಇಂತಹ ಕೃತ್ಯ ನಡೆದಿರುವುದು ನಿಜಕ್ಕೂ ತಲೆ ತಗ್ಗಿಸುವ ವಿಚಾರವಾಗಿದೆ. ಅಲ್ಲದೆ, ರೈಲ್ವೆ ಸಿಬ್ಬಂದಿಗಳೇ ಇಂತಹ ಕೃತ್ಯ ನಡೆಸಿರುವುದು ಆ ರೈಲ್ವೆ ಸ್ಟೇಷನ್‌ನ ಭದ್ರತೆ, ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಏಳುವಂತಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ