ರೈಲು ಪ್ರಯಾಣಿಕರೇ ಎಚ್ಚರ: ನಿಮ್ಮನ್ನು ರಕ್ಷಣೆ ಮಾಡೋ ಪೊಲೀಸಪ್ಪನೇ ರಾತ್ರಿ ದರೋಡೆ ಮಾಡೋಕೆ ಬರ್ತಾನೆ!

By Sathish Kumar KH  |  First Published Nov 6, 2023, 12:56 PM IST

ರೈಲು ಪ್ರಯಾಣಿಕರೇ ಎಚ್ಚರ. ಹಗಲು ಹೊತ್ತಿನಲ್ಲಿ ನಿಮ್ಮನ್ನು ರಕ್ಷಣೆ ಮಾಡೋ ಪೊಲೀಸಪ್ಪನೇ ಕಳ್ಳರ ಗ್ಯಾಂಗ್‌ ಕಟ್ಟಿಕೊಂಡು ರಾತ್ರಿ ರೈಲು ಪ್ರಯಾಣದ ವೇಲೆ ದರೋಡೆ ಮಾಡಲು ಬರ್ತಾನೆ.


ಬೆಂಗಳೂರು (ನ.06): ರೈಲಿನಲ್ಲಿ ಹೋಗೋ ಪ್ರಯಾಣಿಕರೇ ಎಚ್ಚರ ಎಚ್ಚರ.ಹಗಲು ಹೊತ್ತಿನಲ್ಲಿ ನಿಮ್ಮನ್ನು ಪುಂಡ ಪೋಕರಿಗಳು ಹಾಗೂ ಕಳ್ಳ-ಕಾಕರಿಂದ ರಕ್ಷಣೆ ಮಾಡೋ ಪೊಲೀಸಪ್ಪನೇ ಬಂದು ನಿಮ್ಮನ್ನು ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣ ಮಾಡೋವಾಗ ದರೋಡೆ ಮಾಡುತ್ತಾನೆ.

ಬೆಳಗ್ಗೆ ಪೊಲೀಸ್‌ ಡ್ಯೂಟಿ ಮಾಡೋ ಪೊಲೀಸಪ್ಪ, ರಾತ್ರಿಯಾದರೆ ಸಾಕು ಖತರ್ನಾಕ್‌ ಕಳ್ಳನಾಗಿ ಬದಲಾಗುತ್ತಾನೆ. ಹೌದು, ನಿಮ್ಮ ಬಳಿ ಇರೋ ಚಿನ್ನಾಭರಣ ನಗುದು ಕದಿಯಲು ಬರ್ತಾರೆ ಖತರ್ನಾಕ್ ಗ್ಯಾಂಗ್ ಬರುತ್ತದೆ. ಅದರಲ್ಲಿ ನಿಮ್ಮನ್ನು ರಕ್ಷಣೆ ಮಾಡಬೇಕಾಗಿದ್ದವರಿಂದಲೇ ಕಳ್ಳತನ ನಡೆಯುತ್ತದೆ. ಹಿರಿಯರು ಮಾಡಿದ ಗಾದೆಯಂತೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಕ್ರೈಂ ಸ್ಟೋರಿಯ ಕಥೆ. ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಪೊಲೀಸ್ ಬಂಧನವಾಗಿದೆ. 

Tap to resize

Latest Videos

ಪ್ರತ್ಯೇಕ ಪ್ರಕರಣ: ಹೆತ್ತ ಮಕ್ಕಳಿಂದಲೇ ತಂದೆಯ ಹತ್ಯೆ..ಬಳಿಕ ಆರೋಪಿಗಳು ಪೊಲೀಸರಿಗೆ ಶರಣು

ಬೆಳಿಗ್ಗೆ ಪೊಲೀಸ್ ಡ್ಯೂಟಿ ರಾತ್ರಿ ಕಳ್ಳತನ ಮಾಡುತ್ತಿದ್ದ ಮುಖ್ಯಪೇದೆ ಎಂಓಬಿ ಒಬ್ಬನನ್ನೇ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದನು. ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ  ಮುಖ್ಯಪೇದೆ ಸಿದ್ದರಾಮರೆಡ್ಡಿ ಅವರು, ಸಾಬಣ್ಣ ಎಂಬ ಎಂಓಬಿಯನ್ನ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದನು. ಮಧ್ಯರಾತ್ರಿಯಲ್ಲಿ ಪ್ರಯಾಣ ಮಾಡುತ್ತಿದ್ದ ಕೇರಳ, ತಮಿಳುನಾಡು ಪ್ರಯಾಣಿಕರೇ ಈತನ ಟಾರ್ಗೆಟ್ ಆಗಿದ್ದರು. ಪ್ರಯಾಣಿಕರಿಂದ ನಗದು ಹಣ ಚಿನ್ನಾಭರಣಗಳನ್ನ ಮಾತ್ರ ಕದಿಯುತ್ತಿದ್ದರು.

ಬೆಂಗಳೂರಿನ ದಂಡು ರೈಲು ನಿಲ್ದಾಣ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾರೆ. ಆರೋಪಿ ಸಿದ್ದರಾಮಯ್ಯರೆಡ್ಡಿಯನ್ನು ಪೊಲೀಸ್‌ ಇಲಾಖೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ, ಮುಖ್ಯಪೇದೆ ಸಿದ್ದರಾಮರೆಡ್ಡಿ ಮಾಡಿರುವ ಕಳ್ಳತನ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೆಇಎ ಪರೀಕ್ಷೆ ಬ್ಲೂಟೂತ್ ಅಕ್ರಮ ಪೊಲೀಸರಿಗೆ ಮಹತ್ವದ ಸುಳಿವು, ಯಾರು ಈ ಸರ್ಕಾರ್‌

ಸರ್ಕಾರಿ ಮಹಿಳಾ ಅಧಿಕಾರಿ ಕೊಲೆಗೈದಿದ್ದ ಆರೋಪಿ ಬಂಧಿಸಿದ ಪೊಲೀಸರು: 
ಬೆಂಗಳೂರು (ನ.6):
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದ್ದು,  ಹಳೇ ಡ್ರೈವರ್ ಕಿರಣ್ ಎಂಬಾತ  ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾನೆ ಎಂಬುದು ಬಹಿರಂಗವಾಗಿದೆ.

ಕೊಲೆ ಮಾಡಿ ಆರೋಪಿ ಕಿರಣ್ ಚಾಮರಾಜನಗರಕ್ಕೆ  ಪರಾರಿಯಾಗಿದ್ದ. ಮೊಬೈಲ್ ಲೋಕೆಷನ್ ಆಧರಿಸಿ ಆರೋಪಿ ಪತ್ತೆ ಮಾಡಿದ್ದಾರೆ. ಆರೋಪಿ ಕಿರಣ್ ಚಾಮರಾಜನಗರದ ಮಹಾದೇಶ್ವರ ಬೆಟ್ಟದಲ್ಲಿ ಇರೋ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಚಾಮರಾಜನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತ್ರ ಚಾಮರಾಜನಗರ ಪೊಲೀಸರು ಮಹಾದೇಶ್ವರ ಬೆಟ್ಟಕ್ಕೆ ಹೋಗಿ ಕಿರಣ್ ಹಿಡಿದಿದ್ದರು. ಬಳಿಕ ಬೆಂಗಳೂರು ಸುಬ್ರಮಣ್ಯ ಪುರ ಪೊಲೀಸರಿಗೆ ಒಪ್ಪಿಸಿದರು. ಸದ್ಯ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ. 

click me!