ಜಿಂಕೆ ಬೇಟೆಯಾಡಲು ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ರೈತರನ್ನು ಕಂಡು ಅಲ್ಲಿಂದ ವೇಗವಾಗಿ ಪರಾರಿಯಾಗುವ ವೇಳೆ ಅವರು ಹೋಗುತ್ತಿದ್ದ ಜೀಪ್ ಪಲ್ಟಿಯಾಗಿ ಬಿದ್ದಿದೆ.
ಮೈಸೂರು (ಡಿ.18): ಜಿಂಕೆ ಬೇಟೆಯಾಡಲು ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ರೈತರನ್ನು ಕಂಡು ಅಲ್ಲಿಂದ ವೇಗವಾಗಿ ಪರಾರಿಯಾಗುವ ವೇಳೆ ಅವರು ಹೋಗುತ್ತಿದ್ದ ಜೀಪ್ ಪಲ್ಟಿಯಾಗಿ ಬಿದ್ದಿದೆ. ಜಿಂಕೆ ಮಾಂಸ ಮತ್ತು ಜೀಪನ್ನು ಸ್ಥಳದಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಹೊರವಲಯದಲ್ಲಿ ರಾತ್ರಿ 9.30ರ ಸಮಯದಲ್ಲಿ ಅಪರಿಚಿತರ ಗುಂಪೊಂದು ಎತ್ತಿನ ಮುಂಟಿ ಎಂಬ ಸ್ಥಳದಲ್ಲಿ ಜಿಂಕೆ ಬೇಟೆಯಾಡಿದ್ದಾರೆ. ನಂತರ ಮರವೊಂದಕ್ಕೆ ಸತ್ತಿರುವ ಜಿಂಕೆಯನ್ನು ನೇತು ಹಾಕಿ ಮಾಂಸ ಕತ್ತರಿಸಿ ತುಂಬುತ್ತಿದ್ದರು. ಆದರೆ, ಇದೇ ವೇಳೆ ಕೆಲಸದ ನಿಮಿತ್ತ ಹಲದ ಕಡೆಗೆ ಹೋಗಿದ್ದ ರೈತರನ್ನು ಕಂಡು ದುಷ್ಕರ್ಮಿಗಳಿಗೆ ತೀವ್ರ ಭಯ ಉಂಟಾಗಿದೆ. ಜಿಂಕೆಯ ಮಾಂಸವನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಲು ಜೀಪ್ ಹತ್ತಿಕೊಂಡು ವೇಗವಾಗಿ ಹೊರಟಿದ್ದಾರೆ. ಈ ವೇಳೆ ಜೀಪ್ ಆಯತಪ್ಪಿ ಪಲ್ಟಿಯಾಗಿದೆ.
ಕಲಬುರಗಿ: ಜಿಂಕೆ-ನವಿಲು ಮಾಂಸ ಮಾರಾಟ ಗ್ಯಾಂಗ್ ಪತ್ತೆ..!
ದುಷ್ಕರ್ಮಿಗಳು ಪರಾರಿ: ಇನ್ನು ತಾವು ಬೇಟೆಯಾಡಿದ್ದ ಜಿಂಕೆಯ ಮಾಂಸವನ್ನು ಬಿಟ್ಟು ಪರಾರಿಯಾಗುವ ವೇಳೆ ಜೀಪು ಪಲ್ಟಿಯಾಗಿ ಗಾಯಗೊಂಡರೂ ಅದನ್ನು ಲೆಕ್ಕಿಸದೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ರೈತರು ಜಿಂಕೆ ಬೇಟೆಗೆ ಬಂದಿದ್ದ ಗುಂಪನ್ನು ನೋಡಿ ಸ್ವಲ್ಪ ಭಯಬೀತರಾಗಿದ್ದಾರೆ. ನಂತರ ಅವರೇ ಓಡಿ ಹೋಗಿದ್ದನ್ನು ನೋಡಿ ಸ್ಥಳಕ್ಕೆ ಹೋದಾಗ ಅಲ್ಲಿ ಜಿಂಕೆಯ ಮಾಂಸ ಇರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ದೂರು ನಿಡಿದ್ದಾರೆ. ಸ್ಥಳಕ್ಕೆ ಕವಲಂದೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.