
ಟಿಎಂಸಿ ಮಹಿಳಾ ನಾಯಕಿ ಬೇಬಿ ಕೊಲಿ ಅವರು ಸಿಪಿಐಎಂನ ಹಿರಿಯ ನಾಯಕ ಅನಿಲ್ ದಾಸ್ ಅವರ ಮೇಲೆ ಸಾರ್ವಜನಿಕವಾಗಿಯೇ ರಸ್ತೆ ಮಧ್ಯೆಯೇ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿದಂತಹ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಜನನಿಬಿಡ ಮಾರುಕಟ್ಟೆಯಲ್ಲೇ ಈ ಘಟನೆ ನಡೆದಿದ್ದು, ಈ ಹಲ್ಲೆಯ ದೃಶ್ಯ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ. ಈ ಅಮಾನುಷ ಘಟನೆಯನ್ನು ಅಲ್ಲೇ ಇದ್ದ ಜನ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟಿಎಂಸಿ ನಾಯಕಿ ಬೇಬಿ ಕೋಲಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೋದಲ್ಲಿ ಟಿಎಂಸಿ ನಾಯಕಿ ಬೇಬಿ ಕೋಲೆ ಸಿಪಿಐಎಂ ಹಿರಿಯ ನಾಯಕ ಅನಿಲ್ ದಾಸ್ ಅವರಿಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿ ದೈಹಿಕವಾಗಿ ಹಲ್ಲೆ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಸೋಮವಾರ ಬೆಳಗ್ಗೆ ಖರಗ್‌ಪುರದ ಖಾರಿಡಾ ಪ್ರದೇಶದಲ್ಲಿ ಸ್ಥಳೀಯ ನಿವಾಸಿಯೊಬ್ಬರಿಗೆ ಸೇರಿದ ಗೋಡೆಯನ್ನು ಅಕ್ರಮವಾಗಿ ಕೆಡವಿದ್ದರ ವಿರುದ್ಧ ಅನಿಲ್ ದಾಸ್ ಪ್ರತಿಭಟಿಸಿದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಬೇಬಿ ಕೋಲೆ ಮತ್ತು ಅವರ ಸಹಚರರು ಈ ಧ್ವಂಸ ಕಾರ್ಯವನ್ನು ನಡೆಸುತ್ತಿದ್ದರು ಎಂದು ವರದಿಯಾಗಿದೆ.
ಟಿಎಂಸಿ ನಾಯಕಿ ಬೇಬಿ ಕೋಲೆ ಹಿರಿಯ ಸಿಪಿಎಂ ನಾಯಕ ಅನಿಲ್ ದಾಸ್ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ .ಆಕೆ ಅನಿಲ್ ದಾಸ್‌ಗೆ ದೈಹಿಕ ಹಲ್ಲೆ ಮಾಡಿ ಅವರನ್ನು ನೆಲಕ್ಕೆ ಬೀಳಿಸಿ ಅವರ ಬಟ್ಟೆ ಹರಿದು ಹಾಕಿ ಅವರ ಮೇಲೆ, ಶಾಯಿ ಸಿಂಪಡಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇವೆಲ್ಲವೂ ಜನರ ಕಣ್ಣಮುಂದೆಯೇ ನಡೆಯುತ್ತಿದ್ದರೂ ಯಾರೋಬ್ಬರೂ ಕೂಟ ಅನಿಲ್ ದಾಸ್ ಅವರ ರಕ್ಷಣೆಗೆ ಧಾವಿಸದೇ ಮೂಕ ಪ್ರೇಕ್ಷಕರಂತೆ ಘಟನೆಯನ್ನು ನೋಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊದಲ್ಲಿ ನಾಯಕಿ ಮತ್ತು ಆಕೆಯ ಇತರ ಮಹಿಳಾ ಸಹಚರರು ಅನಿಲ್ ದಾಸ್ ಅವರನ್ನು ರಸ್ತೆಯ ಮಧ್ಯದಲ್ಲಿ ಕ್ರೂರವಾಗಿ ಥಳಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಮಹಿಳೆಯರು ಅನಿಲ್ ದಾಸ್ ಅವರ ಬಟ್ಟೆಗಳನ್ನು ಹರಿದು ಹಾಕಿ ಅವರನ್ನು ನೆಲಕ್ಕೆ ತಳ್ಳಿ ಅವರನ್ನು ಹೊಡೆಯುವುದನ್ನು ಕಾಣಬಹುದು. ನಂತರ ಅವರು ಅನಿಲ್ ದಾಸ್ ಮೇಲೆ ನೀಲಿ ಶಾಯಿಯನ್ನು ಸುರಿಯುತ್ತಾರೆ. ಹೀಗೆ ಜನದಟ್ಟಣೆಯ ಮಾರುಕಟ್ಟೆಯ ಮಧ್ಯದಲ್ಲಿ ಹಿರಿಯ ನಾಯಕನ್ನು ಅವಮಾನಿಸಲಾಗಿದೆ. ಅಷ್ಟೊಂದು ಜನರಿದ್ದರೂ ಯಾರೊಬ್ಬರೂ ಈ ವೃದ್ಧ ನಾಯಕನ ರಕ್ಷಣೆಗೆ ಧಾವಿಸಿಲ್ಲ.
ಈ ಹಲ್ಲೆಯ ವೇಳೆ ಅನಿಲ್ ದಾಸ್ ಅವರು ಹತ್ತಿರದ ಬಣ್ಣದ ಅಂಗಡಿಯೊಳಗೆ ಸಾಗಿ ಆಶ್ರಯ ಪಡೆಯಲು ಯತ್ನಿಸಿದರಾದರೂ ಈ ಮಹಿಳಾ ಗೂಂಡಾಗಳು ಅವರನ್ನು ಹಿಂಬಾಲಿಸಿ ಹೋಗಿ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಬಣ್ಣದ ಡಬ್ಬಿಯನ್ನು ಎಸೆದಿದ್ದಾರೆ. ಇದರಿಂದ ಅವರಿಗೆ ಗಾಯಗಳಾಗಿವೆ. ಘಟನೆಯ ನಂತರ ಅನಿಲ್ ದಾಸ್ ಅವರು ಪೊಲೀಸ್ ಠಾಣೆಗೆ ತೆರಳಿ ಬೇಬಿ ಕೋಲೆ ಹಾಗೂ ಆಕೆಯ ಸಹಚರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ