ಜಮೀನಿಗೆ ನುಗ್ಗಿ ಜೋಳದ ಬೆಳೆಯನ್ನು ತಿಂದಿವೆ ಎಂದು ಮಚ್ಚಿನಿಂದ ಎತ್ತುಗಳ ಕಾಲು ಕತ್ತರಿಸಿದ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಒಡೆಯರಪಾಳ್ಯ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.
ವರದಿ - ಪುಟ್ಟರಾಜು. ಆರ್. ಸಿ.
ಚಾಮರಾಜನಗರ (ಫೆ.29) - ಜಮೀನಿಗೆ ನುಗ್ಗಿ ಜೋಳದ ಬೆಳೆಯನ್ನು ತಿಂದಿವೆ ಎಂದು ಮಚ್ಚಿನಿಂದ ಎತ್ತುಗಳ ಕಾಲು ಕತ್ತರಿಸಿದ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆ ಒಡೆಯರಪಾಳ್ಯ ಟಿಬೇಟಿಯನ್ ಕಾಲೋನಿಯಲ್ಲಿ ನಡೆದಿದೆ.
undefined
ಮೂಕ ಪ್ರಾಣಿಗಳ ರೋಧನಾ ಕೇಳೋರು ಯಾರು ಎಂಬ ಚರ್ಚೆ ನಡೀತಿದೆ. ಮಚ್ಚಿನಿಂದ ಕೊಚ್ಚಿದವರಿಗೆ ಶಿಕ್ಷೆ ಆಗಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಅಮಾನವೀಯ ಘಟನೆ ನಡೆದಿದ್ದು ಎಲ್ಲಿ ಅಂತಾ ತೋರಿಸ್ತೇವೆ ಈ ಸ್ಟೋರಿ ನೋಡಿ.
ನಡೆಯಲಾರದೆ ಹೊಲದಲ್ಲಿ ಕುಸಿದು ಬಿದ್ದಿರುವ ಎತ್ತು. ಮತ್ತೊಂದೆಡೆ ಜಮೀನಿನಲ್ಲಿ ಮೇಯುತ್ತಿರುವ ದನಕರುಗಳು. ಮತ್ತೊಂದೆಡೆ ಎತ್ತು ಕುಸಿದು ಬಿದ್ದಿರುವ ಜನರ ರೋಧನೆ. ಹೌದು ಈ ದೃಶ್ಯವೆಲ್ಲಾ ಕಂಡುಬಂದಿದ್ದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರ್ ಪಾಳ್ಯದ ಡಿ ವಿಲೇಜ್ ಟಿಬೇಟಿಯನ್ ಕ್ಯಾಂಪಿನಲ್ಲಿ.
ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಶವವಾಗಿ ಪತ್ತೆ!
ಆಹಾರ ಅರಸಿ ದನಕರುಗಳು ಜಮೀನಿಗೆ ಎಂಟ್ರಿ ಕೊಟ್ಟಿವೆ. ಜೋಳದ ಮೇವನ್ನು ಮೇಯಲು ಆರಂಭಿಸಿವೆ.ಇದನ್ನು ನೋಡಿದ ಟಿಬೆಟಿಯನ್ ರೈತ ಸಿಟು(ಕಿಟುಪ್) ಎಂಬ ವ್ಯಕ್ತಿ ಏಕಾಏಕಿ ಬಂದು ದನಕರುಗಳ ಎರ್ರಾಬಿರ್ರಿ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಹೀಗೆ ಮಚ್ಚಿನಿಂದ ಹಲ್ಲೆ ನಡೆಸಿದ ವೇಳೆ 10 ಕ್ಕೂ ಹೆಚ್ಚು ದನಕರುಗಳ ಬಾಲ, ಕೊಂಬು, ಕಾಲು ಸೇರಿದಂತೆ ಅಂಗಾಂಗಗಳಿಗೆ ಮಚ್ಚಿನೇಟು ಬಿದ್ದಿದೆ. ಎಂಟಕ್ಕೂ ಹೆಚ್ಚು ಎತ್ತು ಹಾಗೂ ಹಸುಗಳಿಗೆ ಮಾರಣಾಂತಿಕ ಗಾಯಗಳಾಗಿವೆ. ಮೂಕ ಪ್ರಾಣಿಗಳ ರೋಧನೆ ಹೇಳತೀರದಾಗಿದೆ. ಮೊದಲೆ ಮಳೆ ಇಲ್ಲ, ವಿಪರೀತ ಬಿಸಿಲಿನಿಂದ ಕಾಡೆಲ್ಲ ಒಣಗಿ ನಿಂತಿದೆ ದನಕರುಗಳಿಗೆ ಮೇವು ಇಲ್ಲ ಪ್ರಾಣಿಗಳಿಗೆ ಕುಡಿಯುವ ನೀರಿಲ್ಲ ಬೆಳೆ ಇಲ್ಲದೆ ದನಕರುಗಳನ್ನು ಮೇಯಿಸಿ ಹಾಲು ಮಾರಿ ಜೀವನ ನಡೆಸುವ ಇಂತ ಸಮಯದಲ್ಲಿ ಈ ರೀತಿ ಹಲ್ಲೆ ಮಾಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು..
ಇನ್ನೂ ಈ ಗುಂಡಿಮಾಳದ ರೈತರು ಜೀವನೋಪಾಯಕ್ಕಾಗಿ ದನಕರುಗಳನ್ನೇ ಅವಲಂಬಿಸಿದ್ದಾರೆ. ಬಹುತೇಕ ಎಲ್ಲಾ ರೈತರ ಮನೆಯಲ್ಲೂ ಕೂಡ ಹಸು ಹಾಗೂ ಎತ್ತುಗಳಿವೆ. ಹೊರಗಿನಿಂದ ಬಂದ ಟಿಬೇಟಿಯನ್ನರಿಂದ ನಮಗೆ ತೊಂದರೆಯಾಗುತ್ತಿದೆ. ದನಕರುಗಳನ್ನು ಕೋಲಿನಿಂದ ಹೊಡೆದು ಓಡಿಸಬಹುದಿತ್ತು. ಅದನ್ನೆಲ್ಲಾ ಬಿಟ್ಟು ಮಚ್ಚಿನಿಂದ ಹೊಡೆದಿದ್ದು ಎಷ್ಟು ಸರಿ ಅಂತಾರೆ.
ನಾಗಮಲೆಗೆ ಹೋಗುವ ಭಕ್ತರಿಗೆ ನಿರ್ಬಂಧ ವಿಧಿಸಿದ ಅರಣ್ಯ ಇಲಾಖೆ; ಉದ್ಯೋಗ ಕಿತ್ತುಕೊಳ್ತಿದೆ ಎಂದು ಸ್ಥಳೀಯರು ಆಕ್ರೋಶ
ಈಗಾಗ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡಿರುವ ಹಸುಗಳಿಗೆ ಪಶು ಇಲಾಖೆಯ ವೈದ್ಯರು ಆಗಮಿಸಿ ಚಿಕಿತ್ಸೆ ಕೊಡುವ ಕೆಲಸ ಮಾಡಿದ್ದಾರೆ. ಆದ್ರೆ ಮೂರಕ್ಕೂ ಹೆಚ್ಚು ಎತ್ತುಗಳಿಗೆ ಮೂಳೆ ಮುರಿದು ಹೋಗಿದ್ದು, ಮೇಲೆಳಲು ಕೂಡ ಸಾಧ್ಯವಿಲ್ಲದಂತಾಗಿದೆ. ನಷ್ಟ ಭರಿಸುವಂತೆ ರೈತರ ಆಗ್ರಹವಾಗಿದೆ.
ಒಟ್ನಲ್ಲಿ ಹೊಲಕ್ಕೆ ದನಕರು ಬಂತೂ ಎಂದು ಮಚ್ಚಿನಿಂದ ಹಲ್ಲೆ ನಡೆಸಿ ದರ್ಪ ತೋರಿದ್ದು ಎಷ್ಟು ಸರಿ? ಮೂಕ ಪ್ರಾಣಿಗಳ ಹಾಗು ಪ್ರಾಣಿಗಳನ್ನು ದೇವರಂತೆ ಕಾಣುವ ಈ ಜನರ ರೋಧನೆ ಕೇಳೋರು ಯಾರು? ಆರೋಪಿಗೆ ಶಿಕ್ಷೆಯಾಗಲಿ ಅಂತಾ ಒತ್ತಾಯಿಸುತ್ತಿದ್ದಾರೆ.