ಪಕ್ಕದ್ಮನೆ ಹುಡುಗನ ಜೊತೆ ವಿವಾಹಿತೆ ಎಸ್ಕೇಪ್‌, 2 ವಾರಗಳ ಬಳಿಕ ಇಬ್ಬರೂ ಶವವಾಗಿ ಪತ್ತೆ!

By Santosh Naik  |  First Published Nov 30, 2022, 5:02 PM IST

ಬಹುತೇಕ ಕೊಳೆದ ಸ್ಥಿತಿಯಲ್ಲಿ ರಾಜಸ್ಥಾನ ಬಾರ್ಮರ್‌ನಲ್ಲಿ ವಾಟರ್‌ ಟ್ಯಾಂಗ್‌ನಲ್ಲಿ ಪ್ರೇಮಿಗಳ ಶವಗಳಯ ಪತ್ತೆಯಾಗಿದೆ. ಕಳೆದ 13 ದಿನಗಳಿಂದ ಇವರಿಬ್ಬರೂ ನಾಪತ್ತೆಯಾಗಿದ್ದರು. ಎರಡೂ ಕುಟುಂಬದವರು ಈ ಕುರಿತಾಗಿ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು.


ಜೈಪುರ (ನ.30): ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಪೇಮಿಗಳಿಬ್ಬರ ಶವಗಳು ರಾಜಸ್ಥಾನದ ಬಾರ್ಮರ್‌ನಲ್ಲಿನ ದೊಡ್ಡ ವಾಟರ್‌ ಟ್ಯಾಂಕ್‌ನಲ್ಲಿ ಬುಧವಾರ ಪತ್ತೆಯಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಇಬ್ಬರೂ ಕೂಡ ಕಲೆದ 13 ದಿನಗಳಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ವಾಟರ್‌ ಟ್ಯಾಂಗ್‌ ಇರುವ ಜಮೀನಿನ ಮಾಲೀಕ ಲೀಲಾರಾಮ್ ತಮ್ಮ ಜಮೀನಿನ ಬಳಿ ದಿನದಿಂದ ದಿನಕ್ಕೂ ದುರ್ವಾಸನೆ ಏರುತ್ತಿರುವುದು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ವಾಟರ್‌ ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿದೆ ಎನ್ನುವುದನ್ನು ಗಮನಿಸಿದ ಲೀಲಾರಾಮ್‌, ಅದರ ಬಳಿ ಕೆಲವು ಬಟ್ಟೆಗಳು ಹಾಗೂ ಬೂಟುಗಳನ್ನು ನೋಡಿದ್ದಾರೆ. ವಾಟರ್‌ ಟ್ಯಾಂಕ್‌ನ ಒಳಗಡೆ ಎರಡು ಮೃತದೇಹಗಳನ್ನು ಕಂಡು ಲೀಲಾರಾಮ್‌ ಅಚ್ಚರಿಗೆ ಒಳಪಟ್ಟಿದ್ದರು. ತಕ್ಷಣವೇ ಅವರು ಗ್ರಾಮದ ಸರ್‌ಪಂಚ್ ಹಾಗೂ ಪೊಲೀಸರಿಗೆ ಈ ಕುರಿತಾದ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು, ಪ್ರಕರಣದ ತನಿಖೆ ನಡೆದ ಎರಡೂ ಕಡೆಯ ಕುಟುಂಬದವರನ್ನು ಕರೆದು ಮಾಹಿತಿ ನೀಡಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಎರಡೂ ಶವಗಳು ಸಾಕಷ್ಟು ದಿನಗಳಿಂದ ವಾಟರ್‌ ಟ್ಯಾಂಕ್‌ನಲ್ಲಿದ್ದವು ಎನ್ನುವುದನ್ನು ದೇಹಗಳನ್ನು ನೋಡುವ ವೇಳೆ ಗೊತ್ತಾಗುತ್ತದೆ. ದೇಹ ಊದಿಕೊಂಡು ಕೊಳೆತಿದ್ದು, ಪೊಲೀಸರು ಜೆಸಿಬಿ ಬಳಸಿ ಟ್ಯಾಂಕ್‌ನ ಮೇಲ್ಭಾಗವನ್ನು ಒಡೆದು ಶವಗಳನ್ನು ಹೊರತೆಗೆದಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ, ನವೆಂಬರ್ 14 ರಂದು ಛನ್ನಾನಿ ಎನ್ನುವ ಹೆಸರಿನ 19 ವರ್ಷದ ಯುವತಿ ನಾಪತ್ತೆಯಾಗಿರುವ ಬಗ್ಗೆ ದೂರು ಸ್ವೀಕರಿಸಿದ್ದರು. ಆಕೆಯ ದೇಹ ಈ ವಾಟರ್‌ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ. ಕಳೆದ ಆರು ತಿಂಗಳ ಹಿಂದೆ ವಿಷ್ಣರಾಮ್ ಸಿಂಧಾರಿ ಎಂಬಾತನನ್ನು ಮದುವೆಯಾಗಿದ್ದ ಮಹಿಳೆ ಸುಮಾರು 13 ದಿನಗಳ ಹಿಂದೆ ಮನೆಯಿಂದ ಹೊರಗೆ ಹೋಗಿದ್ದು ಮತ್ತೆ ಮನೆಗೆ ಬಂದಿರಲಿಲ್ಲ. ತಮ್ಮ ದೂರಿನಲ್ಲಿ ತಮ್ಮ ಸೊಸೆಯನ್ನು 20 ವರ್ಷದ ಜೋಗಾರಾಮ್‌ ಎನ್ನುವ ವ್ಯಕ್ತಿ ಅಪಹರಿಸಿದ್ದಾನೆ ಎಂದು ಅವರು ಆರೋಪ ಮಾಡಿದ್ದರು.

Tap to resize

Latest Videos

Love Triangle: ತನ್ನೆದುರೇ ಸೆಕ್ಸ್‌ ಮಾಡುವಂತೆ ಹೇಳಿ ಅವರ ಮೇಲೆ ಫೆವಿಕ್ವಿಕ್‌ ಸುರಿದು ಕೊಂದ ಮಂತ್ರವಾದಿ!

ಈ ನಡುವೆ ಪೊಲೀಸರು ತನಿಖೆ ಆರಂಭ ಮಾಡಿದ್ದಾಗ ಜೋಗರಾಮ್‌ ಕೂಡ ಕಳೆದ 13 ದಿನಗಳಿಂದ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿತ್ತು. ಇಬ್ಬರೂ ಪ್ರೇಮ ಸಂಬಂಧ ಹೊಂದಿದ್ದು, ಒಟ್ಟಿಗೆ ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಈ ವೇಳೆ ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಹಾಗೂ ಕುಟುಂಬ ಸದಸ್ಯರ ಹೇಳಿಕೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಧಾರಿ ಪೊಲೀಸ್ ಠಾಣಾಧಿಕಾರಿ ಸುರೇಂದ್ರ ಕುಮಾರ್ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಂತರಿಕ ಕಚ್ಚಾಟ ಭುಗಿಲು: ಪೈಲೆಟ್ ಗೆಹ್ಲೋಟ್ ಮಧ್ಯೆ ಫೈಟ್

ಛನ್ನಾನಿ ಹಾಗೂ ಜೋಗರಾಮ್‌ ಇಬ್ಬರೂ ನೆರೆಮನೆಯವರಾಗಿದ್ದಾರೆ. ಹೈದರಾಬಾದ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜೋಗರಾಮ್‌ ಕಳೆದ ಕೆಲವು ತಿಂಗಳುಗಳಿಂದ ಛನ್ನಾನಿ ಅವರ ನೆರೆಮನೆಯಲ್ಲಿಯೇ ವಾಸವಿದ್ದ. ಹೊಸದಾಗಿ ಮದುವೆಯಾಗಿದ್ದ ಛನ್ನಾನಿ ಹಾಗೂ ಜೋಗರಾಮ್‌ ನಡುವಿನ ಸ್ನೇಹ ಕೆಲವೇ ದಿನಗಳಲ್ಲಿ ಪ್ರೇಮವಾಗಿ ಬದಲಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಇಬ್ಬರೂ ಓಡಿ ಹೋಗಿ ಹೊಸ ಜೀವನ ಆರಂಭ ಮಾಡುವ ಉತ್ಸಾಹದಲ್ಲಿದ್ದರು. ಅದಕ್ಕಾಗಿ 14 ದಿನಗಳ ಹಿಂದೆ ಅವರು, ತಮ್ಮ ತಮ್ಮ ಮನೆಗಳನ್ನು ತೊರೆದಿದ್ದರು ಎನ್ನಲಾಗಿದೆ. ಮೊದಲಿಗೆ ಜೋಗರಾಮ್‌ ನಾಪತ್ತೆಯಾಗಿರುವ ವಿಚಾರ ತಿಳಿದಿರಲಿಲ್ಲ. ಛನ್ನಾನಿ ಕುಟುಂಬದವರು ಸೊಸೆ ನಾಪತ್ತೆಯಾಗಿರುವ ದೂರು ದಾಖಲಿಸಿ, ಜೋಗರಾಮ್‌ ಕಿಡ್ನಾಪ್‌ ಮಾಡಿದ್ದಾನೆ ಎಂದು ಹೇಳಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಜೋಗರಾಮ್‌ ಕೂಡ ನಾಪತ್ತೆಯಾಗಿದ್ದಾನೆ ಎನ್ನುವ ಮಾಹಿತಿ ಸಿಕ್ಕಿತ್ತು.

click me!