Mysuru: ಕೆಆರ್‌ಎಸ್ ಹಿನ್ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

By Govindaraj S  |  First Published Jul 16, 2023, 3:03 PM IST

ಭರತ್, ಪ್ರವೀಣ್ ಹಾಗೂ ವರುಣ್ 20 ವರ್ಷ ವಯಸ್ಸಿನ ಇವರು ಮೈಸೂರಿನ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಹುಟ್ಟು ಹಬ್ಬದ ಪಾರ್ಟಿ ಮಾಡಲು ಹೋಗಿ ಈ ಮೂವರು ಜಲಸಮಾಧಿಯಾಗಿದ್ದಾರೆ.


ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ, ಮೈಸೂರು

ಮೈಸೂರು (ಜು.16): ಅವರೆಲ್ಲ ಬರ್ತಡೆ ಪಾರ್ಟಿಗೆ ಅಂತ ಕಾವೇರಿ ಹಿನ್ನಿರಿಗೆ ಹೋಗಿದ್ದರು ಪಾರ್ಟಿ ಮುಗಿಸಿ ರಿಲ್ಯಾಕ್ಸ್ ಗೆ ಅಂತ ನೀರಿಗೆ ಇಳಿದಿದ್ದರು. ಹೀಗೆ ಇಳಿದವರು ಕಾವೇರಿ ಇಲ್ಲಿ ನೀರಿನಲ್ಲಿ ಹೆಣವಾಗಿದ್ದಾರೆ. ಭರತ್, ಪ್ರವೀಣ್ ಹಾಗೂ ವರುಣ್ 20 ವರ್ಷ ವಯಸ್ಸಿನ ಇವರು ಮೈಸೂರಿನ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಹುಟ್ಟು ಹಬ್ಬದ ಪಾರ್ಟಿ ಮಾಡಲು ಹೋಗಿ ಈ ಮೂವರು ಜಲಸಮಾಧಿಯಾಗಿದ್ದಾರೆ. 

Tap to resize

Latest Videos

ಹೌದು! ಮೈಸೂರು ತಾಲೂಕು ಮೀನಾಕ್ಷಿಪುರದ ಕಾವೇರಿ ಈ ನೀರಿನಲ್ಲಿ ಈ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ಭರತ್ ಮೈಸೂರಿನ ಪಡುವರಹಳ್ಳಿ ನಿವಾಸಿ. ವರುಣ್ ಮೂಲತಃ ಮಂಡ್ಯ ಜಿಲ್ಲೆ ಬಲ್ಲೇನಹಳ್ಳಿ ನಿವಾಸಿ. ಸದ್ಯ ಮೈಸೂರಿನ ಹೆಬ್ಬಾಳು ಬಡಾವಣೆಯಲ್ಲಿ ವಾಸವಾಗಿದ್ದ. ಇನ್ನು ಪ್ರವೀಣ್ ಮೈಸೂರಿನ ರಾಮಕೃಷ್ಣ ನಗರದ ನಿವಾಸಿ.‌ ಎರಡು ದಿನದ ಹಿಂದೆ ಮೃತ ಭರತ್ ಹುಟ್ಟುಹಬ್ಬ. ಈ ಕಾರಣಕ್ಕಾಗಿ ಈ ಮೂವರು ಸ್ನೇಹಿತರಾದ ಮನೋಜ್ ಹಾಗೂ ವಿಘ್ನೇಶ್ ಜೊತೆ ಪಾರ್ಟಿ ಮಾಡಲು ಕಾವೇರಿ‌ ಹಿನ್ನೀರಿಗೆ ಹೋಗಿದ್ದರು. 

35ರ ಆಂಟಿಯ ಸುಳ್ಳು ಪ್ರೀತಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ

ಇಳಿ ಸಂಜೆಯಲ್ಲಿ ಐದು ಜನರು ನೀರಿಗೆ ಇಳಿದಿದ್ದಾರೆ. ಈ ವೇಳೆ ವಿಘ್ನೇಶ್ ಮೊಬೈಲ್ ಇಟ್ಟು ಬರುವುದಾಗಿ ನೀರಿನಿಂದ ಮೇಲೆ ಬಂದಿದ್ದಾನೆ. ಆಗ ಉಳಿದ ನಾಲ್ಬರು ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಈಜು ಬರುತ್ತಿದ್ದ ಮನೋಜ್ ಈಜಿ ದಡ ಸೇರಿದ್ದಾನೆ.  ಆದ್ರೆ ಉಳಿದ ಭರತ್ ಪ್ರವೀಣ್ ವರುಣ್ ಈಜು ಬಾರದೆ ಕಾವೇರಿ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಾವೇರಿ ಹಿನ್ನೀರಿನಲ್ಲಿ ಪದೇ ಪದೇ ಈ ರೀತಿ ಘಟನೆಗಳು ನಡೆಯುತ್ತಿದ್ದು, ಸ್ಥಳದಲ್ಲಿ ಯಾವುದೇ ಅಪಾಯದ ಮುನ್ಸೂಚನೆಯ ನಾಮಫಲಕಗಳು ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣ ಅನ್ನೋದು ಹಲವರ ಆರೋಪ. 

ಜನವರಿಗೆ ಕಾಂಗ್ರೆಸ್‌ ಸರ್ಕಾರ ಬೀಳುವುದು ಖಚಿತ: ಸಂಸದ ಮುನಿಸ್ವಾಮಿ ಭವಿಷ್ಯ

ಸದ್ಯ ಭರತ್ ವರುಣ್ ಪ್ರವೀಣ್ ಅವರ ಮೃತ ದೇಹಗಳನ್ನು ಕಾವೇರಿ ಹಿನ್ನೀರಿನಿಂದ ಹೊರಗೆ ತೆಗೆಯಲಾಗಿದೆ. ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೆಲ್ಲ ಏನೇ ಇರಲಿ ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕಾದ ವಿದ್ಯಾರ್ಥಿಗಳು ಈ ರೀತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ದುರಂತವೇ ಸರಿ.

click me!