ಚಾಮರಾಜನಗರ: ಕಾಡಿಗೆ ಅಕ್ರಮ ಪ್ರವೇಶಿಸಿದ್ದ ವೈದ್ಯ ಸೇರಿ ಮೂವರ ಬಂಧನ

By Kannadaprabha News  |  First Published Oct 6, 2022, 9:30 PM IST

ಏರ್‌ಗನ್‌ ನಾಡಬಂದೂಕು ವಶ, ಮಹದೇಶ್ವರ ಬೆಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು


ಹನೂರು(ಅ.06):  ನಾಡ ಬಂದೂಕು ಮತ್ತು ಹೈಫ್ರೆಜರ್‌ ಏರ್‌ಗನ್‌ ಜೊತೆ ಅಕ್ರಮವಾಗಿ ಅರಣ್ಯದೊಳಗೆ ಪ್ರವೇಶಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಮಹದೇಶ್ವರಬೆಟ್ಟಪೊಲೀಸರು ವಶಕ್ಕೆ ಒಪ್ಪಿಸಿದ ಘಟನೆ ಗೋಪಿನಾಥಂನ ಆಲಂಬಾಡಿಯ ಬಳಿ ನಡೆದಿದೆ. ಹೊಗೇನಕಲ್‌ ಫಾಲ್ಸ್‌ನ ಮಾರಿಮುತ್ತು, ಪೆನ್ನಗರಂ ತಾಲೂಕಿನ ನಲ್ಲಾಂಪಟ್ಟಿಗ್ರಾಮದ ವೃತ್ತಿಯಲ್ಲಿ ವೈದ್ಯ ಕವಿನ್‌ಕುಮಾರ್‌ ಮತ್ತು ಈತನ ಸ್ನೇಹಿತ ವಿಘ್ನೇಶ್‌ ಎಂಬುವರೆ ಬಂಧಿತ ಆರೋಪಿಗಳಾಗಿದ್ದಾರೆ.

ಗೋಪಿನಾಥಂನ ಆಲಂಬಾಡಿ ಗ್ರಾಮದ ಬಳಿ ಅಕ್ರಮ ಕಾಡು ಪ್ರವೇಶಿಸಿ, ಕೈಯಲ್ಲಿ ಬಂದೂಕು ಹಿಡಿದು ಅನುಮಾನಾಸ್ಪದ ಓಡಾಡುತ್ತಿದ್ದ ಇವರನ್ನು ಅರಣ್ಯ ಅಧಿಕಾರಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಮೂವರನ್ನು ಸೆರೆ ಹಿಡಿದು ಅವರ ಬಳಿ ಇದ್ದಂತಹ ಬಂದೂಕು ವಶಕ್ಕೆ ಪಡೆದುಕೊಂಡಿದ್ದಾರೆ.

Tap to resize

Latest Videos

undefined

Shivamogga: ಲಾಂಗು-ಮಚ್ಚುಗಳೊಂದಿಗೆ ವಿಡಿಯೋ ಚಿತ್ರೀಕರಿಸಿದ ಯುವಕನ ಬಂಧನ

ಘಟನೆಯ ವಿವರ: 

ಮಂಗಳವಾರ ತಡರಾತ್ರಿ ಮೂವರ ತಂಡ ಬಂದೂಕು ಸಮೇತ ಕಾಡೊಳಗೆ ನುಸುಳುತ್ತಿದ್ದ ವೇಳೆ ಕ್ಯಾಮೆರಾಗೆ ಸಿಕ್ಕ ಮಾಹಿತಿಯಿಂದ ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿವಿಧೆಡೆ ಅಡಗಿಸಿಟ್ಟಿದ್ದ ಬಂದೂಕು ಸಮೇತ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲು: 

ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಅರಣ್ಯಾಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಮಹದೇಶ್ವರ ಬೆಟ್ಟಪೊಲೀಸರ ವಶಕೆ ನೀಡಿ, ಅರಣ್ಯಾಧಿಕಾರಿಗಳು ನೀಡಿದ ದೂರಿನ ಅನ್ವಯ ಮಹದೇಶ್ವರಬೆಟ್ಟಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ. ದಾಳಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್‌ ಅಂಕರಾಜ್‌, ವಲಯ ಅರಣ್ಯ ಅಧಿಕಾರಿ ಲೋಕೇಶ್‌, ಡಿಆರ್‌ಎಫ್‌ಒ ದಿನೇಶ್‌ ಮತ್ತು ಸಿಬ್ಬಂದಿ ಇದ್ದರು.
 

click me!