ಹೊಸಕೋಟೆ: ಕಳ್ಳತನ ಮಾಡುತ್ತಿದ್ದ ದಂಡುಪಾಳ್ಯ ಗ್ಯಾಂಗ್‌ ಮೂವರ ಬಂಧನ

Published : Feb 01, 2025, 08:56 AM IST
ಹೊಸಕೋಟೆ: ಕಳ್ಳತನ ಮಾಡುತ್ತಿದ್ದ ದಂಡುಪಾಳ್ಯ ಗ್ಯಾಂಗ್‌ ಮೂವರ ಬಂಧನ

ಸಾರಾಂಶ

ಸೂರಿ ಅಲಿಯಾಸ್ ಸೈಕೋ ಸೂರಿ, ನಿಡಘಟ್ಟ ಗ್ರಾಮದ ನಿವಾಸಿ ಸುಬ್ರಮಣಿ, ಅಂಕಶೆಟ್ಟಿಹಳ್ಳಿ ಮಾರುತಿ ಬಂಧಿತ ಆರೋಪಿಗಳು. ದಂಡುಪಾಳ್ಯ ಗ್ಯಾಂಗ್‌ನ ಲೀಡರ್‌ಬಂಧಿತ ಆರೋಪಿ ಸೂರಿ ನಟೋರಿಯಸ್ ಆಗಿದ್ದು ಈತನ ಮುಖ್ಯ ವೃತ್ತಿ ಕಳ್ಳತನ, ಹೈವೇ ರಾಬರಿ, ಕುರಿ ಕಳ್ಳತನ ಸೇರಿದಂತೆ 25ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.

ಹೊಸಕೋಟೆ(ಫೆ.01):  ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿಮನೆಯ ಬೀಗ ಒಡೆದು ಸುಮಾರು ₹10 ಲಕ್ಷ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಕದ್ದು ಪರಾರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರರನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸೂರಿ ಅಲಿಯಾಸ್ ಸೈಕೋ ಸೂರಿ, ನಿಡಘಟ್ಟ ಗ್ರಾಮದ ನಿವಾಸಿ ಸುಬ್ರಮಣಿ, ಅಂಕಶೆಟ್ಟಿಹಳ್ಳಿ ಮಾರುತಿ ಬಂಧಿತ ಆರೋಪಿಗಳು. ದಂಡುಪಾಳ್ಯ ಗ್ಯಾಂಗ್‌ನ ಲೀಡರ್‌ಬಂಧಿತ ಆರೋಪಿ ಸೂರಿ ನಟೋರಿಯಸ್ ಆಗಿದ್ದು ಈತನ ಮುಖ್ಯ ವೃತ್ತಿ ಕಳ್ಳತನ, ಹೈವೇ ರಾಬರಿ, ಕುರಿ ಕಳ್ಳತನ ಸೇರಿದಂತೆ 25ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.

ಮೀಟರ್ ಬಡ್ಡಿಗೆ ಸಾಲ ಕೊಟ್ಟವನನ್ನೇ ಕಿಡ್ನಾಪ್ ಮಾಡಿದ ಖ್ವಾಜಾ ಗ್ಯಾಂಗ್; 32 ಲಕ್ಷ ರೂ.ಗೆ ಬೇಡಿಕೆ!

ಬಂಧಿತ ಆರೋಪಿಗಳು ಹೊಸಕೋಟೆ ತಾಲೂಕಿನಮಲ್ಲಸಂದ್ರ ಗ್ರಾಮದಲ್ಲಿಮನೆಯ ಬೀಗ ಒಡೆದು ಸುಮಾರು 10 ಲಕ್ಷ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ದೋಚಿ ಪರಾರಿಯಾಗಿದ್ದರು. ಆರೋಪಿಯ ಸುಳಿವು ಪತ್ತೆ ಹಚ್ಚಿದ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯ ಪಿಐ ಸುಂದರ್‌ ಹಾಗೂ ತಂಡದವರು ತಮಿಳುನಾಡಿನ ತಳಿಯಲ್ಲಿ ಅವಿತು ಕುಳಿತಿದ್ದ ಕಳ್ಳರ ಗ್ಯಾಂಗ್ ಪತ್ತೆ ಹಚ್ಚಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ₹10 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಕಾರು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡಿವೈಎಸ್ಪಿ ಅಣ್ಣಾ ಸಾಹೇಬ್ ಪಾಟೀಲ್ ಮಾತನಾಡಿ, ದಂಡುಪಾಳ್ಯದ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಬಹುಮಾನ ದೊರಕಿಸಿ ಕೊಡುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಆರೋಪಿಗಳ ಪತ್ತೆಯ ತನಿಖೆಯಲ್ಲಿ ಪಿ.ಎಸ್.ಐ. ನಾರಾಯಣಸ್ವಾಮಿ, ಎ.ಎಸ್ ವೆಂಕಟೇಶ್, ಸಿಬ್ಬಂದಿಗಳಾದ ಮಂಜುನಾಥ್, ನಟರಾಜ್, ಲಕ್ಷ್ಮೀಕಾಂತ್, ದೇವೆಂದ್ರ ಬಡಿಗೇರ್, ಮುರ್ತೋಜ, ಅಕ್ಷಯ್ ಹಾಗೂ ಇತರರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು