
ಮೈಸೂರು (ಜ.31): ಮೈಸೂರಿನಲ್ಲಿ ಕೂತುಕೊಂಡು ದುಬೈನಲ್ಲಿದ್ದೇವೆ ಅಂತಾ ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಖಾಸೀಫ್, ಅಜರುದ್ದೀನ್, ಮುದಾಸೀರ್, ಸೈಯದ್ ಡ್ಯಾನಿಶ್, ಶಶಿಕುಮಾರ್ ಇಮ್ತಿಯಾಜ್, ಶಫಿವುಲ್ಲಾ ಬಂಧಿತ ಆರೋಪಿಗಳು.
ಬಂಧಿತರು ಸುಮಾರು 20ಕ್ಕೂ ಹೆಚ್ಚು ಕೇಸ್ ನಲ್ಲಿ ಭಾಗಿಯಾಗಿರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರಿಂದ 9 ಮೊಬೈಲ್, 11 ಬ್ಯಾಂಕ್ ಪಾಸ್ ಬುಕ್, 6ಚೆಕ್ ಬುಕ್, 31 ಎಟಿಎಮ್ ಕಾರ್ಡ್, 9 ಆಧಾರ್ ಕಾರ್ಡ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆನ್‌ಲೈನ್ ವಂಚನೆ ಆಘಾತಕಾರಿ ಪ್ರಕರಣ; 1 ಅನ್ನು ಒತ್ತಿ 2 ಲಕ್ಷ ಕಳೆದುಕೊಂಡ ಮಹಿಳೆ!
ಹೇಗೆ ವಂಚನೆ?
ಮೊದಲಿಗೆ ಪರಿಚಯಸ್ಥರ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡ್ತಿದ್ದ ಆರೋಪಿಗಳು. ಬಳಿಕ ಸ್ನೇಹಿತರ ಹೆಸರಲ್ಲಿ ರಿಕ್ವೆಸ್ಟ್ ಕಳಿಸುತ್ತಿದ್ದರು. ರಿಕ್ವೆಸ್ಟ್ ಕಳಿಸುವವರಿಗೆ ತೀರಾ ಪರಿಚಯದವರ ಹೆಸರಲ್ಲೇ ನಕಲಿ ಫೇಸ್‌ಬುಕ್ ಅಕೌಂಟ್ ಕ್ರಿಯೆಟ್ ಮಾಡುತ್ತಿದ್ದ ಆರೋಪಿಗಳು ಬಳಿಕ ನಾನು ದುಬೈನಲ್ಲಿದ್ದೇನೆ ನನ್ನ ಹತ್ರ ಸಾಕಷ್ಟು ಹಣ ಇದೆ. ಟ್ಯಾಕ್ಸ್ ಉಳಿಸೋಕೆ ನಿಮ್ಮ ಅಕೌಂಟ್‌ಗೆ ಹಣ ಹಾಕುತ್ತೇನೆ ಅರ್ಜೆಂಟ್ ಆಗಿ ನನಗೆ ಹಣ ಹಾಕಿ ಎನ್ನುತ್ತಿದ್ದ ಆರೋಪಿಗಳು. ಹಣ ಹಾಕಿದರೆ ಅದಕ್ಕೆ ಡಬಲ್ ಹಣ ಕೊಡುವುದಾಗಿ ನಂಬಿಸುತ್ತಿದ್ದ ಆರೋಪಿಗಳು. ಹಣದ ಆಸೆಗೋ, ಪರಿಚಯಸ್ಥರು ಕಷ್ಟಕ್ಕೆ ಸಹಾಯ ಮಾಡಬೇಕೆಂದೋ ಹಣ ಕಳಿಸುತ್ತಿದ್ದವರಿಗೆ ಟೋಪಿ ಹಾಕುತ್ತಿದ್ದ ಗ್ಯಾಂಗ್. ನಿಮಗೆ ಹಣ ವಾಪಸ್ ಮಾಡುತ್ತೇವೆ ಎಂದು ಅವರ ಬ್ಯಾಂಕ್ ಡಿಟೇಲ್ ಪಡೆದುಕೊಂಡು ಲಕ್ಷಾಂತರ ರೂಪಾಯಿ ಹಣ ಡೆಪಾಸಿಟ್ ಮಾಡಿರುವ ರೀತಿಯಲ್ಲಿ ಫೇಕ್ ರಿಸಿಪ್ಟ್ ಕಳಿಸುತ್ತಿದ್ದ ಖದೀಮರು.
ಇದನ್ನೂ ಓದಿ: ಏನಿದು ಹೊಸ ಜಂಪ್ ಡೆಪಾಸಿಟ್ ವಂಚನೆ, ಶುರುವಾಗಿದೆ ಯುಪಿಐ ಪೇಮೆಂಟ್ ಸ್ಕ್ಯಾಮ್
ಸಿಕ್ಕಿಬಿದ್ದಿದ್ದು ಹೇಗೆ?
ಹಲವಾರು ಜನರಿಗೆ ಇದೇ ವಂಚಿಸಿದ್ದ ಖದೀಮರ ಗ್ರಹಚಾರ ಕೆಟ್ಟಿದೆ. ಇದೇ ರೀತಿ ಓರ್ವ ವ್ಯಕ್ತಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಗ್ಯಾಂಗ್. ಹಂತ ಹಂತವಾಗಿ ವ್ಯಕ್ತಿಯಿಂದ ಒಂದೂವರೆ ಲಕ್ಷ ರೂಪಾಯಿ ಕದ್ದಿದ್ದರು. ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು. ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ದುಬೈನಲ್ಲಿಲ್ಲ, ಮೈಸೂರಿನಲ್ಲೇ ಕುಳಿತುಕೊಂಡು ದುಬೈ ನಾಟಕ ಆಡಿ ಹಣ ದೋಚುತ್ತಿದ್ದ ಗ್ಯಾಂಗ್. ಇಂಥ ಪ್ರಕರಣಗಳು ಹೆಚ್ಚುತ್ತಿದ್ದರೂ ಜನರು ಮಾನವೀಯ ದೃಷ್ಟಿಯಿಂದ ಸಹಾಯಕ್ಕೆ ಮುಂದಾಗಿ ಹಣ ಕಳೆದುಕೊಳ್ಳುತ್ತಿರವ ಪ್ರಕರಣಗಳು ಹೆಚ್ಚುತ್ತಿವೆ. ಆನ್‌ಲೈನ್ ಅಥವಾ ಕರೆಗಳ ಮೂಲಕ ಹಣ ಕೇಳುವವರ ಬಗ್ಗೆ ಎಚ್ಚರವಹಿಸಬೇಕು ಎಂಬುದಕ್ಕೆ ಇಂಥ ಪ್ರಕರಣಗಳು ಜನರಿಗೆ ಪಾಠವಾಗಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ