ಗೋವಾ-ತೆಲಂಗಾಣ ಖಾಸಗಿ ಬಸ್ಸೊಳಗೇ ಇತ್ತು ಮಿನಿ ಬಾರ್‌: ಖದೀಮರ ಖರ್ತನಾಕ್‌ ಐಡಿಯಾ..!

By Kannadaprabha NewsFirst Published Sep 29, 2023, 12:05 PM IST
Highlights

ಗೋವಾ ರಾಜ್ಯದಿಂದ ಕದ್ದುಮುಚ್ಚಿ ಮದ್ಯ ಸಾಗಾಟ ಮಾಡುತ್ತಿದ್ದ ಖಾಸಗಿ ಟ್ರಾವಲ್ಸ್‌ ಕಲಬುರಗಿಯಲ್ಲಿ ಬಸ್‌ ಜಪ್ತಿ, ಬಸ್‌ನಲ್ಲಿದ್ದ ಬೆಲೆಬಾಳುವಂತಹ ವ್ಹಿಸ್ಕಿ ಬಾಟಲ್‌ಗಳು ವಶ, ವೋಲ್ವೋ ಬಸ್‌, ಚಾಲಕ ಸೇರಿ 3 ಸಿಬ್ಬಂದಿ ಬಂಧನ. 

ಕಲಬುರಗಿ(ಸೆ.29):  ಅದು ಐಷಾರಾಮಿ ಖಾಸಗಿ ವೋಲ್ವೋ ಬಸ್‌, ಆರಾಮಾಗಿ ಮಲಗಿಕೊಂಡು ಗೋವಾ ತಲುಪುವಂತಹ ವ್ಯವಸ್ಥೆ ಇರುವ ಈ ಬಸ್‌ನಲ್ಲಿ ಕೊನೆ ಸೀಟಲ್ಲಿ ಗಿಜಿನಿಂದ ಮಾಡಿದ ಸುರಕ್ಷಿತ ಲಾಕರ್‌ ತೆರೆದಾಗಲೇ ಗೊತ್ತಾಗಿದ್ದು ಅಲ್ಲಿ ಮಿನಿ ಬಾರ್‌ ಸೃಷ್ಟಿಯಾಗಿರೋದು!

ಈ ಬಸ್ಸಿನ ಕೊನೆ ಸೀಟ್‌ನ ಈ ಗಾಜಿನ ಪೆಟ್ಟಿಗೆಯಲ್ಲಿ ಬೆಲೆ ಬಾಳುವಂತಹ ವ್ಹಿಸ್ಕಿ, ಮದ್ಯದ ಅನೇಕ ಬಾಟಲ್‌ಗಳನ್ನು ಒಪ್ಪಓರಣವಾಗಿ ಜೋಡಿಸಿಡಲಾಗಿತ್ತು. ಗೋವಾದಿಂದ ತೆಲಂಗಾಣಕ್ಕೆ ಹೊರಟಿದ್ದ ಈ ಬಸ್ಸನ್ನು ಕಲಬುರಗಿಯಲ್ಲಿ ಅಬಕಾರಿ ಪೊಲೀಸರು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಬಸ್ಸೊಳಗೇ ಮಿನಿ ಬಾರ್‌ ಸೃಷ್ಟಿಸಿರೋದು ಪತ್ತೆಯಾಗಿದೆ. ದಾಳಿ ಕಾಲದಲ್ಲಿ ಬ್ಲೆಂಡರ್‌ ಪ್ರೈಡ್‌, ರಾಯಲ್‌ ಸ್ಟಾಗ್‌ ಸೇರಿದಂತೆ ಅನೇಕ ಬೆಲೆ ಬಾಳುವ ಮದ್ಯದ ಬಾಟಲ್‌ಗಳು ಸಿಕ್ಕಿವೆ. ಅವೆಲ್ಲವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿದ್ದಾರೆ.

ಬೆಳಗಾವಿ: ಅವಾಚ್ಯ ಶಬ್ದಗಳಿಂದ ನಿಂದನೆ, ಮಾರಕಾಸ್ತ್ರಗಳಿಂದ ಕೊಚ್ಚಿ ವಿದ್ಯಾರ್ಥಿಯ ಬರ್ಬರ ಹತ್ಯೆ

ನಿತ್ಯ ತೆಲಂಗಾಣ ರಾಜ್ಯದ ಹೈದ್ರಾಬಾದ್‌- ಗೋವಾ ನಡುವೆ ಓಡಾಡುವ ಈ ಬಸ್ಸಲ್ಲಿ ಮದ್ಯದ ಬಾಟಲ್‌ ಸಾಗಾಟ ನಡೆದಿದೆ ಎಂಬ ಖಚಿತ ದೂರುಗಳು ಪೊಲೀಸರಿಗೆ ಬರುತ್ತಿದ್ದವಾದರೂ ಸರಿಯಾದ ಮಾಹಿತಿ ಇಲ್ಲದೆ ಅವು ಸಿಕ್ಕಿಬಿದ್ದಿರಲಿಲ್ಲ. ನಿನ್ನೆ ಕಲಬುರಗಿ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿಯಂತೆ ನಡೆದ ದಾಳಿಯಲ್ಲಿ ಅಬಕಾರಿ ಇಲಾಖೆ ಭದ್ರತಾ ಸಿಬ್ಬಂದಿ ಅಪಾರ ಬೆಲೆಬಾಳುವ ಮದ್ಯದ ಬಾಟಲ್‌, ಜೊತೆಗೇ ಬಸ್‌ ಎಲ್ಲವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಗೋವಾದಲ್ಲಿ ಮದ್ಯ ತುಂಬ ಅಗ್ಗ, ಹೀಗಾಗ ಅದನ್ನು ಅಗ್ಗದ ದರದಲ್ಲಿ ಖರೀದಿಸಿ ತಂದು ಕರ್ನಾಟಕ, ತೆಲಂಗಾಣದುದ್ದಕ್ಕೂ ದೊಡ್ಡ ಪಟ್ಟಣ, ನಗರಗಳಲ್ಲಿನ ಗಿರಾಕಿಗಳಿಗೆ ಈ ಬಸ್ಸಿನವರು ಮಾರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಗೋವಾದಿಂದ ಹೊರಡುತ್ತಿದ್ದ ಈ ಖಾಸಗಿ ಟ್ರಾವಲ್‌ ಬಸ್‌ ದಾರಿಯುದ್ದಕ್ಕೂ ತನ್ನದೇ ಆದಂತಹ ಮದ್ಯಪ್ರೀಯ ಗಿರಾಕಿಗಳನ್ನು ಹೊಂದಿತ್ತು ಎನ್ನಲಾಗಿದೆ. ದಾರಿಯುದ್ದಕ್ಕೂ ಈ ಬಸ್ಸಿನ ಚಾಲಕರು, ಸಹಾಯಕರು ಎಲ್ಲರೂ ತಾವು ಗೋವಾದಿಂದ ಖರೀದಿಸಿ ತರುತ್ತಿದ್ದ ಮದ್ಯವನ್ನ ಹಾಗೇ ಮಾರಾಟ ಮಾಡುತ್ತಲೇ ಸಾಗುತ್ತಿದ್ದರು ಎಂದೂ ವಿಚಾರಣೆಯಲ್ಲಿ ಬಸ್ಸಿನ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ.

ಬೆಂಗಳೂರು: ಲಗೇಜ್‌ನೊಳಗೆ ಜೀವಂತ ಗುಂಡು ಪತ್ತೆ, ಕೆಂಪೇಗೌಡ ಏರ್‌ಪೋರ್ಟಲ್ಲಿ ಪ್ರಯಾಣಿಕನ ಬಂಧನ

ಸದ್ಯ ಕಲಬುರಗಿ ಅಬಕಾರಿ ಪೊಲೀಸರು ವೋಲ್ವೋ ಬಸ್‌, ಆ ಬಸ್‌ನ ಚಾಲಕ ಸೇರಿದಂತೆ ತೆಲಂಗಾಣ ಮೂಲದ ಮೂವರನ್ನು ಬಂಧಿಸಿದ್ದಾರೆ. ಸದರ್ ಜಪ್ತಿಯಾದ ವೋಲ್ವೋ ಬಸ್‌ ಎಸ್‌ವಿಆರ್‌ ಖಾಸಗಿ ಟ್ರಾವೆಲ್ಸ್‌ ಕಂಪನಿಗೆ ಸೇರಿದೆ.
ಈ ಸಂಬಂಧ ಅಬಕಾರಿ ಇಲಾಖೆಯ ಅಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿದ್ದು ಗೋವಾ ರಾಜ್ಯದಿಂದ ಹೊರಡುವ ಖಾಸಗಿ ಬಸ್‌ಗಳಲ್ಲಿ ಇಂತಹ ಅಕ್ರಮ ಚಟುವಟಿಕೆ ನಡೆದ ಬಗ್ಗೆ ಸಾಕಷ್ಟು ದೂರುಗಳಿವೆ. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ಯಶಸ್ವಿ ದಾಳಿ ಮಾಡಲಾಗಿದೆ ಎಂದಿದ್ದಾರೆ.

ಈಗಾಗಲೇ ತೆಲಂಗಾಣ ರಾಜ್ಯದ ಅಬಕಾರಿ ಇಲಾಖೆಯವರೂ ಸಹ ಈ ಸಂಬಂಧ ಕಟ್ಟುನಿಟ್ಟು ಆದೇಶ ಹೊರಡಿಸಿ ಸೂಚನೆ ನೀಡಿದ್ದರೂ ಸಹ ಖಾಸಗಿ ಟ್ರಾವೆಲ್‌ ಏಜೆನ್ಸಿಯ ಸಿಬ್ಬಂದಿ ತಮ್ಮ ಅಕ್ರಮ ಮದ್ಯ ಮಾರಾಟ ದಂಧೆ ಹಾಗೇ ಮುಂದುವರಿಸಿದ್ದರು ಎನ್ನಲಾಗಿದೆ.

click me!