ಬೆಂಗಳೂರು: ಲಗೇಜ್‌ನೊಳಗೆ ಜೀವಂತ ಗುಂಡು ಪತ್ತೆ, ಕೆಂಪೇಗೌಡ ಏರ್‌ಪೋರ್ಟಲ್ಲಿ ಪ್ರಯಾಣಿಕನ ಬಂಧನ

By Kannadaprabha News  |  First Published Sep 29, 2023, 6:21 AM IST

ಆರೋಪಿ ಅಮಲೇಶ್‌ ಕಳೆದ 14 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದಾನೆ. ವೃತ್ತಿಯಲ್ಲಿ ಗಾರೆ ಮೇಸ್ತ್ರಿ ಆಗಿರುವ ಅಮಲೇಶ್‌ ಉಡುಪಿಯ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದ. ಬ್ಯಾಗ್‌ಗೆ ಜೀವಂತ ಗುಂಡು ಹೇಗೆ ಬಂದಿತು ಎಂಬ ಪ್ರಶ್ನೆಗೆ ಆತ ಸಮರ್ಪಕ ಉತ್ತರ ನೀಡುತ್ತಿಲ್ಲ. 


ಬೆಂಗಳೂರು(ಸೆ.29):  ತ್ರಿಪುರ ರಾಜ್ಯದ ಅಗರ್ತಲಕ್ಕೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕನ ಬ್ಯಾಗ್‌ನಲ್ಲಿ ಜೀವಂತ ಗುಂಡು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್‌) ಠಾಣೆ ಪೊಲೀಸರು ಪ್ರಯಾಣಿಕನನ್ನು ಬಂಧಿಸಿದ್ದಾರೆ.

ಬಂಧಿತ ಪಶ್ಚಿಮ ಬಂಗಾಳ ಮೂಲದ ಅಮಲೇಶ್‌ ಶೇಕ್‌ (32)ನಿಂದ ಒಂದು ಜೀವಂತ ಗುಂಡು ಜಪ್ತಿ ಮಾಡಲಾಗಿದೆ. ಅಗರ್ತಲ ನಗರಕ್ಕೆ ತೆರಳಲು ಬುಧವಾರ ಸಂಜೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಈತನ ಲಗೇಜನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್‌) ಪರಿಶೀಲಿಸಿದರು. ಆಗ ಅಮಲೇಶ್‌ ಬ್ಯಾಗ್‌ನಲ್ಲಿ ಜೀವಂತ ಗುಂಡು ಇರುವುದು ಪತ್ತೆಯಾಗಿದೆ. ತಕ್ಷಣ ಸಿಐಎಸ್ಎಫ್‌ ಸಬ್‌ ಇನ್‌ಸ್ಪೆಕ್ಟರ್‌ ಮನೋಜ್‌ ಕುಮಾರ್‌ ಅವರು ಅಮಲೇಶ್‌ನನ್ನು ವಶಕ್ಕೆ ಪಡೆದು ಬಿಐಎಎಲ್‌ ಠಾಣೆಗೆ ಕರೆತಂದು ದೂರು ನೀಡಿದ್ದಾರೆ.

Tap to resize

Latest Videos

ಬಣ್ಣದ ಮಾತಿನಿಂದ Auntyಯನ್ನು ಪಟಾಯಿಸಿದ: ಲೈಂಗಿಕವಾಗಿ ಬಳಸಿ, ಬ್ಲ್ಯಾಕ್‌ಮೇಲ್ ಮಾಡಿದಾತ ಅಂದರ್!

ಆರೋಪಿ ಅಮಲೇಶ್‌ ಕಳೆದ 14 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದಾನೆ. ವೃತ್ತಿಯಲ್ಲಿ ಗಾರೆ ಮೇಸ್ತ್ರಿ ಆಗಿರುವ ಅಮಲೇಶ್‌ ಉಡುಪಿಯ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದ. ಬ್ಯಾಗ್‌ಗೆ ಜೀವಂತ ಗುಂಡು ಹೇಗೆ ಬಂದಿತು ಎಂಬ ಪ್ರಶ್ನೆಗೆ ಆತ ಸಮರ್ಪಕ ಉತ್ತರ ನೀಡುತ್ತಿಲ್ಲ. ಬ್ಯಾಗ್‌ನಲ್ಲಿ ಗುಂಡು ನೋಡಿ ಆತನೇ ಆಘಾತಕ್ಕೆ ಒಳಗಾಗಿದ್ದಾನೆ. ಆತನೊಂದಿಗೆ ಕೆಲಸ ಮಾಡುವವರು ಊರುಗಳಿಗೆ ತೆರಳುವಾಗ ಆ ಬ್ಯಾಗ್‌ ಬಳಸಿದ್ದರ ಬಗ್ಗೆ ತಿಳಿಸಿದ್ದಾನೆ. ಈ ಮಾಹಿತಿ ಆಧರಿಸಿ ಆರೋಪಿಯ ಪೂರ್ವಾಪರ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ವಿಚಾರಿಸುವ ಸಂಬಂಧ ಮಣಿಪಾಲ ಠಾಣೆ ಪೊಲೀಸರನ್ನು ಸಂಪರ್ಕಿಸಲಾಗಿದೆ. ಈ ಸಂಬಂಧ ಬಿಐಎಎಲ್‌ ಪೊಲೀಸ್‌ ಠಾಣೆಯಲ್ಲಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

click me!