ಕಾರವಾರ: ಅರಣ್ಯದಲ್ಲಿ ಅಡಗಿಟಿಸಿದ್ದ ಅಕ್ರಮ ಗೋವಾ ಮದ್ಯ ಪತ್ತೆ, ಮೂವರ ಬಂಧನ

By Girish Goudar  |  First Published Mar 23, 2023, 4:30 AM IST

ಕಾರವಾರದ ಹೋಟೆಗಾಳಿ ಗ್ರಾಮದ ಭೀಮಕೋಲ ಡ್ಯಾಂ ಸಮೀಪದ ಅರಣ್ಯದಲ್ಲಿ ನಡೆದ ಘಟನೆ. ಖಚಿತ ಮಾಹಿತಿ ಮೇರೆಗೆ ಕಾರವಾರ ಅಬಕಾರಿ ಪೊಲೀಸರ ಕಾರ್ಯಾಚರಣೆ. 


ಉತ್ತರಕನ್ನಡ(ಮಾ.23): ಅರಣ್ಯದಲ್ಲಿ ಅಡಗಿಸಿಡಲಾಗಿದ್ದ ಅಕ್ರಮ ಗೋವಾ ಮದ್ಯ ಸಹಿತ 3 ಆರೋಪಿಗಳನ್ನ ಅಬಕಾರಿ ಪೊಲೀಸರು ವಶಕ್ಕೆ ಪಡೆದ ಘಟನೆ ಕಾರವಾರದ ಹೋಟೆಗಾಳಿ ಗ್ರಾಮದ ಭೀಮಕೋಲ ಡ್ಯಾಂ ಸಮೀಪದ ಅರಣ್ಯದಲ್ಲಿ ನಿನ್ನೆ(ಬುಧವಾರ) ನಡೆದಿದೆ. 

ಖಚಿತ ಮಾಹಿತಿ ಮೇರೆಗೆ ಕಾರವಾರ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ 3 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಬಕಾರಿ ಉಪಾಧೀಕ್ಷಕ ಬಸವರಾಜ ಕರವಿನಕೊಪ್ಪ, ನಿರೀಕ್ಷಕ ದಯಾನಂದ, ಉಪನಿರೀಕ್ಷಕ ಎಂ.ಎಂ.ನಾಯ್ಕ ತಂಡದಿಂದ ದಾಳಿ ನಡೆಸಲಾಗಿದೆ. 

Tap to resize

Latest Videos

ಅಕ್ರಮ ಮದ್ಯ ಸೇವಿಸಿ ವ್ಯಕ್ತಿ ಸಾವು: ಮೃತದೇಹವಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ

ಹೋಟೆಗಾಳಿ ಮೂಲದ ಆನಂದ ಮಾಳ್ಸೇಕರ್, ಸತ್ಯವಿಜಯ ಮಾಳ್ಸೇಕರ್, ಮನೋಜ ಕೋಳಂಬಕರ್ ಬಂಧಿತ ಆರೋಪಿಗಳಾಗಿದ್ದಾರೆ. 89.280 ಲೀ ಗೋವಾ ಮದ್ಯ, 305.500 ಲೀ ಗೋವಾ ಪೆನ್ನಿ, 120 ಲೀ ಗೋವಾ ಬಿಯರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 1.88 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ಅಂತ ತಿಳಿದು ಬಂದಿದೆ. 

ಮಾರಾಟ ಮಾಡುವ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿತ್ತು ಅಂತ ತಿಳಿದು ಬಂದಿದೆ. ಬಂಧಿತ ಆರೋಪಿಗಳ ವಿರುದ್ಧ ಅಬಕಾರಿ ಪೊಲೀಸರು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. 
ಅಕ್ರಮವಾಗಿ ಮದ್ಯ ದಾಸ್ತಾನು ಇರಿಸಿದ್ದ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಕಾರವಾರ ಅಬಕಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

click me!