
ಕೆಜಿಎಫ್(ಡಿ.22): ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್‌ಸನ್‌ಪೇಟೆ ಮತ್ತು ಬೇತಮಂಗಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಗಳಲ್ಲಿ ೩ ಮಂದಿ ಆರೋಪಿಗಳನ್ನು ಬಂಧಿಸಿ ಸುಮಾರು ೧೪ ಲಕ್ಷ ರು. ಮೌಲ್ಯದ ಚಿನ್ನಾಭರಣ, ಒಂದು ಆಟೋ ರಿಕ್ಷಾ ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಬರ್ಟ್‌ಸನ್‌ಪೇಟೆ ವೃತ್ತದ ವಿಶೇಷ ಅಪರಾಧ ಪತ್ತೆ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳ ಪೈಕಿ ನಾಗರಾಜ್, ಅಲಿಯಾಸ್ ಸ್ಕೆಚ್ ನಾಗ ಎಂಬುವವನ ವಿರುದ್ಧ ಬೆಂಗಳೂರು ನಗರದ ಕೆ.ಆರ್.ಪುರಂ, ಬಾಣಸವಾಡಿ, ಪರಪ್ಪನ ಅಗ್ರಹಾರ, ಬಾಗಲಗುಂಟೆ, ಬೆಂಗಳೂರು ಜಿಲ್ಲೆಯ ಅತ್ತಿಬೆಲೆ, ವರ್ತೂರು, ಅನುಗೊಂಡನಹಳ್ಳಿ, ಕೋಲಾರ ಜಿಲ್ಲೆಯ ಮಾಲೂರು, ಕೋಲಾರ ನಗರ, ಕೆಜಿಎಫ್‌ನ ಬೆಮೆಲ್‌ನಗರ ಮತ್ತು ಬಂಗಾರಪೇಟೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಮನೆ ಕಳ್ಳತನ, ದರೋಡೆ ಸೇರಿದಂತೆ ಒಟ್ಟು ೧೭ ಪ್ರಕರಣಗಳು ದಾಖಲಾಗಿದ್ದು, ಈತನ ವಿರುದ್ಧ ವಾರೆಂಟ್ ಹಾಗೂ ಉದ್ಘೋಷಣೆ ಹೊರಡಿಸಲಾಗಿದೆ.
ಮಸಾಜ್ ಪಾರ್ಲರ್, ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ ದಂಧೆ; ಹೊರರಾಜ್ಯಗಳಿಂದ ಉದ್ಯೋಗಕ್ಕೆ ಬರೋ ಹುಡುಗಿಯರೇ ಇವನ ಟಾರ್ಗೆಟ್!
ರಾಬರ್ಟ್‌ಸನ್‌ಪೇಟೆ ಮತ್ತು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦೨೩ನೇ ಸಾಲಿನ ಏಪ್ರಿಲ್ ನಿಂದ ಜೂನ್ ತಿಂಗಳವರೆಗೂ ನಡೆದಿದ್ದ ನಾಲ್ಕು ಮನೆ ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಮತ್ತು ಕಳುವಾದ ಮಾಲನ್ನು ಪತ್ತೆ ಮಾಡಲು ರಾಬರ್ಟ್‌ಸನ್‌ಪೇಟೆ ಸಿಪಿಐ ಪಿ.ಎಂ.ನವೀನ್ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.
ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ಕೆಜಿಎಫ್‌ನ ನಿವಾಸಿಗಳಾದ ಹರೀಶ್ ಮತ್ತು ವಿ.ನಾಗರಾಜ್ ಅಲಿಯಾಸ್ ಸ್ಕೆಚ್ ನಾಗ ಮತ್ತು ತಮಿಳುನಾಡು ತಿರುಪತ್ತೂರಿನ ಎಂ.ಸತೀಶ್ ಅವರನ್ನು ಬಂಧಿಸಿ, ಅವರಿಂದ ೧೪೫ ಗ್ರಾಂ ಚಿನ್ನದ ಆಭರಣ, ೯೦ ಗ್ರಾಂ ಬೆಳ್ಳಿ ನಾಣ್ಯಗಳು, ಕಳವು ಮಾಡಲು ಉಪಯೋಗಿಸಿದ ಸಲಕರಣೆಗಳು, ಒಂದು ಆಟೋ ರೀಕ್ಷಾ ಮತ್ತು ೨ ಕಾರುಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ರು. ೧೩,೮೦,೦೦೦ ಗಳಾಗಿದೆ. ಇದರಲ್ಲಿ ಇನ್ನೊಬ್ಬ ಆರೋಪಿಯೂ ಸಹ ಭಾಗಿಯಾಗಿದ್ದು, ಅವನ ಪತ್ತೆ ಕಾರ್ಯ ಮುಂದುವರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ