ಮಗ ಮಾಡಿದ್ದ 700 ರೂ. ಸಾಲದ ವಿಚಾರವಾಗಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಗೋಕಾಕಿನ 12ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶಿಸಿದೆ.
ಬೆಳಗಾವಿ (ಡಿ.22): ಮಗ ಮಾಡಿದ್ದ 700 ರೂ. ಸಾಲದ ವಿಚಾರವಾಗಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಗೋಕಾಕಿನ 12ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆದೇಶಿಸಿದೆ.
ಮಾನಿಂಗ್ ಗಾಯಕವಾಡ(41) ಕೊಲೆಯಾಗಿದ್ದ ವ್ಯಕ್ತಿ. ಕಳೆದ ವರ್ಷ ಮಾರ್ಚ್‌ನಲ್ಲಿ ಗೋಕಾಕ ತಾಲೂಕಿನ ಮರಡಿಮಠ ಗ್ರಾಮದಲ್ಲಿ ನಡೆದಿದ್ದ ಹತ್ಯೆ ಪ್ರಕರಣ. ಮಾನಿಂಗ್ ಮಗ ಹಣಮಂತ ಗಾಯಕವಾಡ ತನ್ನ ಮನೆಯ ಪಕ್ಕದ ಆರೋಪಿ ಬಳಿ 700 ಸಾಲ ಮಾಡಿಕೊಂಡಿದ್ದ.
ಮಸಾಜ್ ಪಾರ್ಲರ್, ಸ್ಪಾ ಹೆಸರಲ್ಲಿ ವೇಶ್ಯವಾಟಿಕೆ ದಂಧೆ; ಹೊರರಾಜ್ಯಗಳಿಂದ ಉದ್ಯೋಗಕ್ಕೆ ಬರೋ ಹುಡುಗಿಯರೇ ಇವನ ಟಾರ್ಗೆಟ್!
ರಾಜು ಶಂಕರ್ ಭಜಂತ್ರಿ ಬಳಿ 700 ರೂ ಸಾಲ ಮಾಡಿದ್ದ ಹಣಮಂತ. ಇದೇ ವಿಚಾರವಾಗಿ ಶುರುವಾಗಿದ್ದಜಗಳ ಮಾನಿಂಗ ಕೊಲೆಯಲ್ಲಿ ಅಂತ್ಯವಾಗಿತ್ತು. ಕೊಲೆ ವಿಚಾರವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆ ಕೊಲೆ ಪ್ರಕರಣದಲ್ಲಿ ರಾಜು ಶಂಕರ್ ಭಜಂತ್ರಿ, ಗೀತಾ ರಾಜು ಭಜಂತ್ರಿ ಸೇರಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು. ನ್ಯಾಯಾಲಯ ವಿಚಾರಣೆ ವೇಳೆ ತಪ್ಪಿಸ್ಥರೆಂದು ಸಾಬೀತಾದ ಹಿನ್ನೆಲೆ ಐಪಿಸಿ ಸೆಕ್ಷನ್ 304 ರ ಪ್ರಕಾರ 9 ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಿ ಆದೇಶಿಸಿದ ನ್ಯಾಯಾಲಯ. ಈ ಪ್ರಕರಣದಲ್ಲಿ ಅಭಿಯೋಜಕ ಸುನೀಲ ಹಂಜಿ ಸರ್ಕಾರದ ಪರ ವಕಾಲತ್ತು ವಹಿಸಿದ್ದರು.
ಶಿವಮೊಗ್ಗದಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ: ಬೆಂಗಳೂರು, ಮೈಸೂರಿನಿಂದ ಬರ್ತಿದ್ದ ಕಾಲ್‌ಗರ್ಲ್ಸ್!