Belagavi Crime: ಫನ್ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಮೂವರು ಯುವಕರು..!

By Girish Goudar  |  First Published Aug 31, 2022, 1:18 PM IST

ಬೆಳಗಾವಿ ‌ಜಿಲ್ಲೆ ಮೂಡಲಗಿ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಡೆದ ಘಟನೆ 


ಬೆಳಗಾವಿ(ಆ.31):  ಫನ್ ಮಾಡಲು ಹೋಗಿ ಮೂವರು ಯುವಕರು ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿ ‌ಜಿಲ್ಲೆ ಮೂಡಲಗಿ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಇಂದು(ಬುಧವಾರ) ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಮೂಲದ ಕಿರಣ್‌ಕುಮಾರ ರಂಗರೇಜ್, ಕೊಪ್ಪಳ ಜಿಲ್ಲೆಯ ಕಾರಟಗಿ ಮೂಲದ ಸಾಗರ ನಿರಂಜನ್ ಹಾಗೂ ಉಡುಪಿ ಜಿಲ್ಲೆಯ ಕೊಲ್ಲೂರು ಮೂಲ್ ಶಶಿಧರ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ. 

ಚಿಲ್ಡ್ರನ್ ‌ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಮುದ್ರಿಸಿದ ನೋಟುಗಳನ್ನ ಬಂಧಿತ ಆರೋಪಿಗಳು ಚಲಾವಣೆಗೆ ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾರೆ. 500 ಮುಖಬೆಲೆಯ ನಕಲಿ ನೋಟು ಮುದ್ರಿಸಿ ಚಲಾವಣೆಗೆ ಯತ್ನಿಸಿದ್ದಾರೆ. 
ಬಾರ್‌ನಲ್ಲಿ ನಕಲಿ ನೋಟು ಚಲಾವಣೆಗೆ ಆರೋಪಿತರು ಮುಂದಾಗಿದ್ದರು. ಬಾರ್‌ಗಳಲ್ಲಿ ಡಲ್ ಲೈಟ್ ಇರುವ ಕಾರಣಕ್ಕೆ ಸಮಯ ಸಾಧಿಸಲು ಆರೋಪಿಗಳು ಯತ್ನಿಸಿದ್ದಾರೆ. ನಕಲಿ ನೋಟು ‌ಎಂದು ಖಚಿತವಾಗ್ತಿದ್ದಂತೆ ಬಾರ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. 

Latest Videos

undefined

ಚಿಕ್ಕೋಡಿ: ಖೋಟಾ ನೋಟು ಜಾಲ ಪತ್ತೆ: ಮುಗ್ದ ಜನರಿಗೆ ವಂಚಿಸುತ್ತಿದ್ದ ಗ್ಯಾಂಗ್‌ ಅರೆಸ್ಟ್

ತಕ್ಷಣ ಸ್ಥಳಕ್ಕೆ ಆಗಮಿಸಿದ ಘಟಪ್ರಭಾ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 500 ಮುಖಬೆಲೆಯ 473 ನಕಲಿ ನೋಟುಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಘಟಪ್ರಭಾ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
 

click me!