ಸಂಘಟನೆ ಹೆಸರೇಳಿಕೊಂಡು ಪೆಟ್ರೋಲ್ ಬಂಕ್ ಮಾಲೀಕನಿಗೆ 5 ಲಕ್ಷಕ್ಕೆ ಡಿಮ್ಯಾಂಡ್; ಆರೋಪಿಗಳ ಬಂಧನ

By Ravi JanekalFirst Published Feb 19, 2024, 1:01 PM IST
Highlights

: ಸಂಘಟನೆ ಹೆಸರು ಹೇಳಿಕೊಂಡು ಪೆಟ್ರೋಲ್ ಬಂಕ್ ಮಾಲೀಕರನ್ನ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಖದೀಮರನ್ನ ತುಮಕೂರಿನ ಎನ್‌ಇಪಿಎಸ್ ಪೊಲೀಸರು ಬಂಧಿಸಿದ್ದಾರೆ. ರಕ್ಷಿತ್ ಕರಿಮಣ್ಣಿ (33), ಮಂಜುನಾಥ್ @ ಉಪ್ಪಾರಹಳ್ಳಿ ಮಂಜುನಾಥ್ (46), ಅರುಣ್ @ ಅಣ್ಣಪ್ಪ (54) ಬಂಧಿತ ಆರೋಪಿಗಳು. ತುಮಕೂರಿನ ಎಸ್ಎಸ್ ಪುರಂನಲ್ಲಿರುವ ಶಿವದೇವ್ ಪೆಟ್ರೋಲ್ ಬಂಕ್ ಮಾಲೀಕನಿಗೆ ಬೆದರಿಕೆ ಹಾಕಿದ್ದ ಆರೋಪಿಗಳು. 

ತುಮಕೂರು (ಫೆ.19): ಸಂಘಟನೆ ಹೆಸರು ಹೇಳಿಕೊಂಡು ಪೆಟ್ರೋಲ್ ಬಂಕ್ ಮಾಲೀಕರನ್ನ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಖದೀಮರನ್ನ ತುಮಕೂರಿನ ಎನ್‌ಇಪಿಎಸ್ ಪೊಲೀಸರು ಬಂಧಿಸಿದ್ದಾರೆ.

ರಕ್ಷಿತ್ ಕರಿಮಣ್ಣಿ (33), ಮಂಜುನಾಥ್ @ ಉಪ್ಪಾರಹಳ್ಳಿ ಮಂಜುನಾಥ್ (46), ಅರುಣ್ @ ಅಣ್ಣಪ್ಪ (54) ಬಂಧಿತ ಆರೋಪಿಗಳು. ತುಮಕೂರಿನ ಎಸ್ಎಸ್ ಪುರಂನಲ್ಲಿರುವ ಶಿವದೇವ್ ಪೆಟ್ರೋಲ್ ಬಂಕ್ ಮಾಲೀಕನಿಗೆ ಬೆದರಿಕೆ ಹಾಕಿದ್ದ ಆರೋಪಿಗಳು. 

ನಿರ್ಮಾಪಕಿಯಿಂದ ಹಣ ಸುಲಿಯಲು ಕಿಡ್ನಾಪ್‌ ಕಥೆ ಕಟ್ಟಿದ ಕಾರು ಚಾಲಕ; ಮುಂದೆ ನಡೆದಿದ್ದೇನು?

 ನಿಮ್ಮ ಪೆಟ್ರೋಲ್ ಬಂಕ್ ನಲ್ಲಿ ಕಡಿಮೆ‌ ಪೆಟ್ರೋಲ್ ಹಾಕುತ್ತಿದ್ದೀರಿ ಎಂದು ಬೆದರಿಸಿ 5 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳು. ನಾವು ಹೇಳಿದಷ್ಟು ಹಣ ಕೊಡದಿದ್ದರೆ 100 ರಿಂದ 200 ಜನರನ್ನು ಕರೆತಂದು ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆಯೊಡ್ಡಿದ್ದ ಖದೀಮರು. ಮುಂಗಡವಾಗಿ 50 ಸಾವಿರ ಹಣ ಪಡೆದಿದ್ದ ಆರೋಪಿಗಳು. ಬೆದರಿಕೆ ಹಾಕಿದ್ದರಿಂದ ಪೆಟ್ರೋಲ್ ಬಂಕ್ ಮಾಲೀಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಎನ್‌ಇಪಿಎಸ್ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಅದರಂತೆ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. 

ಈ ಹಿಂದೆ ಇದೇ ರೀತಿ ಬೇರೆ ಹಣ ಸುಲಿದಿರುವ ಪ್ರಕರಣಗಳು ನಡೆದಿರುವ ಸಾಧ್ಯತೆ ಈ ಹಿನ್ನೆಲೆ ವಿಚಾರಣೆ ನಡೆಸಿರುವ ಪೊಲೀಸರು.

 

ಬೆಂಗಳೂರು: ಪಾರ್ಟ್‌ಟೈಂ ಕೆಲಸದ ಸೋಗಲ್ಲಿ 1.07 ಲಕ್ಷ ವಂಚನೆ, ಕಂಗಾಲಾದ ಯುವತಿ

click me!