
ಬೆಂಗಳೂರು (ಫೆ.19): ಪ್ರತಿಷ್ಟಿತ ಹೋಟೆಲ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ಹಣ ದೋಚುತ್ತಿದ್ದ ಖರ್ತನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ನಿವಾಸಿ ಎಂ.ಎಸ್.ರವಿಕುಮಾರ್ ಬಂಧಿತ ಆರೋಪಿ.
ವಯಸ್ಸಾಗಿದೆ, ಆರ್ಥಿಕ ಸಂಕಷ್ಟದಲ್ಲಿದ್ದೇನೆ ಸಿಂಪಥಿ ಗಿಟ್ಟಿಸಿ ಕೆಲಸ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಕ್ಯಾಷಿಯರ್ ಆಗಿ ಕೆಲಸ ಪಡೆಯುತ್ತಿದ್ದ ಆಸಾಮಿ. ಹೊಟೇಲ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ ಹೊಂಚುಹಾಕಿ ಹಣ ಎಗರಿಸ್ತಿದ್ದ ಆರೋಪಿ. ಕಳೆದ ವರ್ಷ ಫೆಬ್ರವರಿ 19 ರಂದು ಕೆ.ಆರ್.ಪುರಂ ಭಟ್ಟರಹಳ್ಳಿಯ ಹೋಟೆಲ್ ನಲ್ಲಿ ಹಣ ಕಳವು ಮಾಡಿದ್ದ ಆರೋಪಿ. ಹೋಟೆಲ್ ಮಾಲೀಕರು ಕ್ಯಾಷ್ ಕೌಂಟರ್‌ನಲ್ಲಿಟ್ಟಿದ್ದ ಒಂದು ಲಕ್ಷ ರೂಪಾಯಿ ಹಣ ಎಗರಿಸಿ ಎಸ್ಕೇಪ್ ಆಗಿದ್ದ ಖದೀಮ.
ಇದೊಂದೇ ಅಲ್ಲ, ಹಲವು ಹೋಟೆಲ್‌ಗಳಲ್ಲಿ ಇದೇ ರೀತಿ ಕೈಚಳಕ ತೋರಿಸಿರೋ ಆರೋಪಿ. ಭಟ್ಟರ್ ಹಳ್ಳಿ ಹೋಟೆಲ್ ಕಳ್ಳತನ ಬಳಿಕ ಇತ್ತೀಚೆಗೆ ದೇವನಹಳ್ಳಿ ಬೈಪಾಸ್ ರಸ್ತೆಯ ಪ್ರತಿಷ್ಟಿತ ಹೋಟೆಲ್ ಕ್ಯಾಷಿಯರ್ ಆಗಿ ಕೆಲಸಕ್ಕೆ ಸೇರಿದ್ದ ಅಲ್ಲಿಯೂ ಕೈಚಳಕ ತೋರಿಸಿದ್ದ. ಹಣ ಕಳೆದುಕೊಂಡ ಹೋಟೆಲ್ ಮಾಲೀಕ ಸತೀಶ್ ಶೆಟ್ಟಿ ಎಂಬುವವರಿಂದ ಲಾಕ್ ಆದ ಆಸಾಮಿ. ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಹೋಟೆಲ್ ಮಾಲೀಕ. ಸದ್ಯ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಖದೀಮನ ವಿಚಾರಣೆ ನಡೆಸುತ್ತಿದ್ದಾರೆ ಇನ್ನಷ್ಟು ಹೋಟೆಲ್‌ಗಳ ಕಳ್ಳತನ ಪ್ರಕರಣ ಬಯಲಿಗೆ ಬರುತ್ತವೋ ವಿಚಾರಣೆ ಬಳಿಕ ತಿಳಿಯಲಿದೆ.
ನಿರ್ಮಾಪಕಿಯಿಂದ ಹಣ ಸುಲಿಯಲು ಕಿಡ್ನಾಪ್ ಕಥೆ ಕಟ್ಟಿದ ಕಾರು ಚಾಲಕ; ಮುಂದೆ ನಡೆದಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ