ಭೀಮಾತೀರದ ಅಂದಾಕ್ಷಣ, ರಕ್ತಪಾತ, ಗ್ಯಾಂಗ್‌ವಾರ್, ಕಂಟ್ರಿ ಪಿಸ್ತೂಲು ದಂಧೆ, ಮರಳು ದಂಧೆಗಳು ನೆನಪಿಗೆ ಬರುತ್ವೆ. ಆದ್ರೆ ಈಗ ಭೀಮಾತೀರದಲ್ಲಿ ಮತ್ತೊಂದು ಖತರ್ನಾಕ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ಆ.19): ವಿಜಯಪುರ ಜಿಲ್ಲೆಯ ಭೀಮಾತೀರಕ್ಕೆ ಖತರ್ನಾಕ್ ಗ್ಯಾಂಗ್‌ವೊಂದು ಎಂಟ್ರಿ ಕೊಟ್ಟಿದೆ. ಈ ಗ್ಯಾಂಗ್ ಮಾಡುವ ಲೂಟಿಯ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಈ ಗ್ಯಾಂಗ್ ಒಂದು ಬಾರಿ ಹಣ ಹೊಡೆಯೋದಕ್ಕೆ ಹೊಂಚು ಹಾಕಿದ್ರೆ ಮುಗಿದು ಹೋಯ್ತು, ಅಲ್ಲೊಂದು ಲೂಟಿ ಪಿಕ್ಸ್. ಕಾರ್‌ಗಳ ಮೇಲೆ ಆಯಿಲ್ ಸುರಿದು ಯಾಮಾರಿಸಿ ಹಣ ಲಪಟಾಯಿಸುತ್ತಿರುವ ಈ ಆಯಿಲ್ ಗ್ಯಾಂಗ್ ವ್ಯಾಪಾರಸ್ಥರನ್ನ, ಉದ್ಯಮಿಗಳನ್ನ ಬೆಚ್ಚಿ ಬೀಳುವಂತೆ ಮಾಡಿದೆ.
ಭೀಮಾತೀರದಲ್ಲಿ ಆಯಿಲ್ ಗ್ಯಾಂಗ್ ಆತಂಕ: ಭೀಮಾತೀರದ ಅಂದಾಕ್ಷಣ, ರಕ್ತಪಾತ, ಗ್ಯಾಂಗ್‌ವಾರ್, ಕಂಟ್ರಿ ಪಿಸ್ತೂಲು ದಂಧೆ, ಮರಳು ದಂಧೆಗಳು ನೆನಪಿಗೆ ಬರುತ್ವೆ. ಆದ್ರೆ ಈಗ ಭೀಮಾತೀರದಲ್ಲಿ ಮತ್ತೊಂದು ಖತರ್ನಾಕ್ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಅದೆ ಆಯಿಲ್ ಗ್ಯಾಂಗ್. ಈ ಆಯಿಲ್ ಗ್ಯಾಂಗ್ ಇಟ್ಟಿರೋ ಹಾವಳಿಗೆ ವಿಜಯಪುರ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಪ್ರತಿಷ್ಟತ ಬ್ಯಾಂಕ್ ಗಳ ಎದುರು ಹೊಂಚು ಹಾಕಿ ನಿಲ್ಲುವ ಈ ಖತರ್ನಾಕ್ ಗ್ಯಾಂಗ್ ಹಣ ಹೊಡೆಯೋದಕ್ಕೆ ವ್ಯವಸ್ಥಿತ ಪ್ಲಾನ್ ಮಾಡಿಕೊಳ್ಳುತ್ತೆ. ಹಾಗೇ ಪ್ಲಾನ್ ಹಾಕಿದ್ರೋ ಮುಗಿದೆ ಹೋಯ್ತು ಅಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಗ್ಯಾರಂಟಿ..!
ಮಣ್ಣಿನ ಗಣಪನಾ? ಪಿಓಪಿ ಗಣೇಶನಾ? ಗೊಂದಲದಲ್ಲಿ ಭಕ್ತರು!
ಹೇಗೆ ಲೂಟಿ ಮಾಡುತ್ತೆ ಈ ಆಯಿಲ್ ಗ್ಯಾಂಗ್.?: ಪ್ರತಿಷ್ಟಿತ ಬ್ಯಾಂಕ್‌ಗಳ ಎದುರು ನಿಲ್ಲುವ ಈ ಆಯಿಲ್ ಗ್ಯಾಂಗ್ ಬ್ಯಾಂಕ್‌ಗಳಿಂದ ಲಕ್ಷ-ಲಕ್ಷ ಹಣ ತೆಗೆದುಕೊಂಡು ಬರುವವರನ್ನ ಗುರುತಿಸುತ್ತೆ. ಅವ್ರ ಹಣವನ್ನ ಲಪಟಾಯಿಸಲು ಪಕ್ಕಾ ಪ್ಲಾನ್ ಮಾಡಿಕೊಳ್ಳುತ್ತೆ. ಬ್ಯಾಂಕ್‌ನಿಂದ ಬ್ಯಾಗ್‌ನಲ್ಲಿ ಹಣದ ಸಮೇತ ಹೊರಗೆ ಬಂದ್ರೋ ಅಂತವರನ್ನ ಯಾಮಾರಿಸಿ, ಗೊತ್ತೆ ಆಗದಂತೆ ಕ್ಷಣಾರ್ಧದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನ ಲಪಟಾಯಿಸಿಕೊಂಡು ಪರಾರಿಯಾಗಿ ಬಿಡುತ್ತೆ.
ಕಾರ್ ಮೇಲೆ ಆಯಿಲ್ ಹಾಕಿ ಗಮನ ಬೇರೆ ಸೆಳೆದು ಕೃತ್ಯ: ಈ ಆಯಿಲ್ ಗ್ಯಾಂಗ್ ಹೇಗೆ ಹಣ ಲೂಟಿ ಮಾಡುತ್ತೆ. ಅವ್ರ ಪ್ಲಾನ್ ಏನು ಅನ್ನೋದನ್ನ ತಿಳಿದ್ರೆ ನೀವು ಖಂಡಿತ ಶಾಕ್ ಆಗ್ತೀರಿ. ಬ್ಯಾಂಕಿಗೆ ಬರುವವರ ಮೇಲೆ ಕಣ್ಣಿಡುವ ಈ ಆಯಿಲ್ ಗ್ಯಾಂಗ್ ಸದಸ್ಯರು. ಬ್ಯಾಗ್‌ಗಳನ್ನ ಹಣ ತುಂಬಿಕೊಂಡು ಕಾರ್‌ಗಳಲ್ಲಿ ಹೋವುವರರನ್ನ ಟಾರ್ಗೆಟ್ ಮಾಡಿಕೊಳ್ಳುತ್ತೆ. ಅವರು ಕಾರ್ ಹತ್ತಿದ ಮೇಲೆ ಕಾರಿನ ಬೋನಟ್ ಬಳಿ ಇದೆ ಗ್ಯಾಂಗ್ ಸದಸ್ಯ ಆಯಿಲ್ ಸುರಿಯುತ್ತಾನೆ. ಇನ್ನೊಬ್ಬ ಸದಸ್ಯ ಆಯಿಲ್ ಬಿದ್ದಿದೆ ನೋಡಿ ಅಂತ ಕಾರ್‌ನಲ್ಲಿ ಹಣ ಇಟ್ಟುಕೊಂಡವರಿಗೆ ದಾರಿ ತಪ್ಪಿಸುತ್ತಾನೆ. ಹಣವ ಚೀಲವನ್ನ ಕಾರಲ್ಲೆ ಬಿಟ್ಟು ಆಯಿಲ್ ಬಿದ್ದ ಕಡೆಗೆ ಗಮನ ಕೊಡ್ತಿದ್ದಂತೆ ಇನ್ನೊಬ್ಬ ಗ್ಯಾಂಗ್ ಸದಸ್ಯ ಕಾರಲ್ಲಿ ಕೈ ಹಾಕಿ ಹಣದ ಚೀಲ ತೆಗೆದುಕೊಂಡು ಪರಾರಿಯಾಗಿ ಬಿಡ್ತಾನೆ. ನೋಡ ನೋಡ್ತಿದ್ದಂತೆ ಈ ಖತರ್ನಾಕ್ ಗ್ಯಾಂಗ್ ಆಯಿಲ್ ಹೆಸರಲ್ಲಿ ಯಾಮಾರಿಸಿ ಜನರನ್ನ ಬಕರಾ ಮಾಡಿ ಹಣ ಕೊಳ್ಳೆ ಹೊಡೆಯುತ್ತಿದೆ.
ವ್ಯಾಪಾರಸ್ಥರು, ಉದ್ಯಮಿಗಳೇ ಇವ್ರ ಟಾರ್ಗೆಟ್: ಈ ಆಯಿಲ್ ಗ್ಯಾಂಗ್‌ಗೆ ಪ್ರತಿಷ್ಟಿತ ವ್ಯಾಪಾರಸ್ಥರು, ಉದ್ಯಮಿಗಳು ಟಾರ್ಗೆಟ್. ಅದ್ರಲ್ಲು ಬ್ಯಾಂಕ್‌ಗಳಿಂದ ಲಕ್ಷಾಂತರ ರೂಪಾಯಿ ವಿಡ್ರಾ ಮಾಡಿಕೊಂಡು ಬರುವವರು ಇವ್ರ ಪಕ್ಕಾ ಟಾರ್ಗೆಟ್ ಆಗ್ತಾರೆ. ಬ್ಯಾಂಕ್ ಎದುರು ನಿಂತು ಮೊದಲು ಒಳಗೆ ಹೋಗೋರನ್ನ ವಾಚ್ ಮಾಡ್ತಾರೆ. ಬ್ಯಾಂಕ್ ಹೋದ ಅದೇ ವ್ಯಕ್ತಿ ಲಕ್ಷಾಂತರ ರೂಪಾಯಿ ವಿಡ್ರಾ ಮಾಡಿಕೊಂಡು ಚೀಲಕ್ಕೆ ತುಂಬಿಕೊಂಡನೋ ಆತನೇ ನೋಡಿ ಟಾಗ್ರೆಟ್. ಅವನ ಬೆನ್ನಿಗೆ ಬೀಳುವ 5 ರಿಂದ 10 ಜನರ ತಂದ ಪ್ರತಿ ಕ್ಷಣವನ್ನು ವಾಚ್ ಮಾಡುತ್ತೆ. ಕಾರ್ ಹತ್ತುತ್ತಿದ್ದಂತೆ ಹಣ ತಂದವರ ಗಮನವನ್ನ ಬೇರೆಡೆ ಸೇಳೆದು ಕಣ್ಮುಚ್ಚಿ ಕಣ್ಣು ಬಿಡೋದ್ರಲ್ಲಿ ಲೂಟಿ ನಡೆಸಿ ಬಿಡುತ್ತೆ.
ಚಡಚಣ ಹಾಗೂ ವಿಜಯಪುರ ನಗರದಲ್ಲಿ ಲೂಟಿ: ನಿನ್ನೆ ಚಡಚಣ ಪಟ್ಟಣದಲ್ಲಿ ಇದೆ ಮಾದರಿಯಲ್ಲಿ 18ಲಕ್ಷ ರೂಪಾಯಿಯನ್ನ ಆಯಿಲ್ ಲೂಟಿ ಮಾಡಿದೆ. ಚಡಚಣ ತಾಲೂಕಿನ ಲೋಣಿ ಬಿ ಕೆ ಗ್ರಾಮದ ಖಾಪ್ಸೆ ಎಂಬುವರನ್ನ ಟಾರ್ಗೆಟ್ ಮಾಡಿಕೊಂಡು ಈ ರೀತಿ ಲೂಟಿ ಮಾಡಿದೆ. ಇಲ್ಲಿದೆ ಇದೆ ಮೆಥೆಡ್‌ನ್ನ ಆಯಿಲ್ ಗ್ಯಾಂಗ್ ಯೂಸ್ ಮಾಡಿದೆ. ಕಾರ್ ಮೇಲೆ ಆಯಿಲ್ ಹಾಕಿ ಅಟೆನ್ಷನ್ ಡೈವರ್ಷನ್ ಮಾಡಿ ಹಣ ಲೂಟಿ ಮಾಡಲಾಗಿದೆ. ಕಳೆದ ಫೆಬ್ರವರಿ 3, 2022 ರಂದು ಕೂಡ ವಿಜಯಪುರ ನಗರದ ಆಶ್ರಮ ರಸ್ತೆಯ ಎಕ್ಸಿಸ್ ಬ್ಯಾಂಕ್ ಬಳಿ ಇದೆ ರೀತಿಯಲ್ಲಿ ಲೂಟಿ ನಡೆದಿದೆ. ಇಲ್ಲಿಯೂ ಕಾರ್ ಮೇಲೆ ಆಯಿಲ್ ಹಾಕಿ ಗಮನ ಬೇರೆಡೆ ಸೆಳೆದು ಲೂಟಿ ಮಾಡಲಾಗಿದೆ.
ಬಾಲಿವುಡ್ ಖಾನ್‌ಗಳು ಪಾಕಿಸ್ತಾನದ ಏಜೆಂಟರು: ಯತ್ನಾಳ್
ಬಲು ಖತರ್ನಾಕ್ ಈ ಆಯಿಲ್ ಗ್ಯಾಂಗ್: ಈ ಆಯಿಲ್ ಗ್ಯಾಂಗ್ ಬಲು ಖತರ್ನಾಕ್ ಇದ್ದಂತೆ ಕಾಣ್ತಿದೆ. ಒಂದು ಪಟ್ಟಣ ಹಾಗೂ ನಗರದಲ್ಲಿ ಈ ಮಾದರಿಯಲ್ಲಿ ಲೂಟಿ ಮಾಡಿದ್ರೆ ಮತ್ತೆ ಅದೆ ಪಟ್ಟಣ, ನಗರದಲ್ಲಿ ಆಯಿಲ್ ಮಾದರಿಯ ಲೂಟಿ ನಡೆದಿಲ್ಲ. ಕಳೆದ 2022 ರ ಫೆಬ್ರವರಿಯಲ್ಲಿ ವಿಜಯಪುರ ನಗರದಲ್ಲಿ ಈ ಆಯಿಲ್ ಮಾದರಿಯಲ್ಲಿ ಲೂಟಿ ನಡೆಸಿದ ಗ್ಯಾಂಗ್ ವಾಪಾಸ್ ಆಗಸ್ಟ್ ತಿಂಗಳಲ್ಲಿ 60 ಕಿ.ಮೀಟರ್ ದೂರದ ಚಡಚಣ ಪಟ್ಟಣದಲ್ಲಿ ಈ ಕೃತ್ಯ ನಡೆಸಿದೆ. ಅಂದ್ರೆ ಪೊಲೀಸರಿಗೆ ಯಾವುದೆ ಸುಳಿವು ಬಿಡದಂತೆ ಈ ಗ್ಯಾಂಗ್ ಕಾರ್ಯನಿರ್ವಹಿಸುತ್ತಿರುವ ಅನುಮಾನಗಳು ಈ ಮೂಲಕ ಮೂಡ್ತಿವೆ.