
ಹುಬ್ಬಳ್ಳಿ (ಜ.09): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕಾಟ ಜೋರಾಗಿದೆ. ರಾತ್ರಿ ಬೆಳಗಾಗೋದ್ರೋಗೆ ಒಂದಲ್ಲಾ ಒಂದು ಮನೆಗಳ ಕಳ್ಳತನ ಸುದ್ದಿ ಕೇಳಿಬರುತ್ತೆ. ಕಳೆದೆರೆಡು ತಿಂಗಳಲ್ಲಿ 20ಕ್ಕೂ ಹೆಚ್ಚು ಮನೆಗಳ ಕಳ್ಳತನ ನಡೆದಿದ್ದು, ಜನರು ಭಯಭೀತರಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿರುವ ಕಳ್ಳರು ರಾತ್ರೋರಾತ್ರಿ ದೋಚಿ ಪರಾರಿಯಾಗುತ್ತಿದ್ದಾರೆ. ಹುಬ್ಬಳ್ಳಿಯ ಅಶೋಕ ನಗರ, ಮಯೂರಿ ಬಡಾವಣೆ, ತಿರುಪತಿ ಬಜಾರ್, ಮಾಗಡಿ ಬಡಾವಣೆ ಸೇರಿದಂತೆ 10ಕ್ಕೂ ಹೆಚ್ಚು ಏರಿಯಾಗಳಲ್ಲಿ ಕಳೆದ ಎರಡು ತಿಂಗಳಿನಿಂದ ದಿನವೂ ಮನೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಕಳ್ಳನ ಚಹರೆ ಪತ್ತೆ.. ಆದ್ರು ಪೊಲೀಸರ ಮೌನ: ಕಳುವಾದ ಬಹುತೇಕ ಮನೆಗಳನ್ನು ನೋಡಿದ್ರೆ ಒಂದೇ ಮಾದರಿಯಲ್ಲಿ ಕಳ್ಳತನಗಳಾಗುತ್ತಿವೆ. ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಎಂಟ್ರಿಕೊಡುವ ಕಳ್ಳ. ಗ್ಯಾಸ್ ಕಟರ್ ಸಹಾಯದಿಂದ ಮನೆಯ ಇಂಟರ್ ಲಾಕ್ ಒಡೆದು ಕಳುವು ಮಾಡುತ್ತಿರುವುದು ಬಯಲಾಗಿದೆ. ಕಳ್ಳತನ ಚಲನವಲದ ದೃಶ್ಯ ಬಡಾವಣೆಯ ಸಿಸಿಟಿವಿ ಹಾಗೂ ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎರಡು ತಿಂಗಳಾದರೂ ಪೊಲೀಸರಿಗೆ ಹಿಡಿಯಲು ಆಗುತ್ತಿಲ್ಲ. ಅಶೋಕ ನಗರ ಮತ್ತು ಕೇಶವಾಪುರ ಪೊಲೀಸ್ ಠಾಣೆ ಲಿಮಿಟ್‌ನಲ್ಲಿ 20ಕ್ಕೂ ಹೆಚ್ಚು ಕಳುವಿನ ಪ್ರಕರಣಗಳು ವರದಿಯಾಗಿವೆ.
ಶಾಲಾ ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವು: ಪೋಷಕರ ಆಕ್ರಂದನ
ಮುಖ ಸಂಪೂರ್ಣ ಮುಚ್ಚಿಕೊಂಡು ಮನೆಗಳಿಗೆ ಎಂಟ್ರಿ ಕೊಡುವ ಕಳ್ಳ ಚಾಲಕಿ ತನದಿಂದ ಮನೆಗ ಸೆಂಟರ್ ಲಾಕ್‌ಗಳ ಹೊಡೆದು ಒಳನುಗ್ಗಿ ಮನೆಯಲ್ಲಿ ಇದ್ದ ನಗದು- ಆಭರಣಗಳನ್ನು ದೋಚುತ್ತಿದ್ದು,ಕಳ್ಳನ ಕಾಟಕ್ಕೆ ಜನರು ಬೇಸ್ತು ಬಿದ್ದಿದ್ದಾರೆ. ನಿನ್ನೆ ಒಂದೇ ರಾತ್ರಿ ಮೂರು ಮನೆ ಕಳವು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಸವಾಗಿರುವ ಮಯೂರ ಎಸ್ಟೇಟ್ ಬಡಾವಣೆಯಲ್ಲಿ - ಶರಾದ್ ಮಜಲಿಕರ್ ಎಂಬುವವರು ಮನೆ ದೋಚಿಸಿರುವ ಕಳ್ಳ ಮೂರು ಲಕ್ಷ ಬೆಳ್ಳಿ ಆಭರಣ- 1.5 ಲಕ್ಷ ನಗರದು ದೋಚಿ ಪರಾರಿಯಾಗಿದ್ದು, ಅದೇ ದಿನ ಬೆಂಗಳೂರಿಗೆ ತೆರಳಿದ್ದ ವೈದ್ಯರೊಬ್ಬರ ಮನೆ ಸೇರಿ ಮೂರು ಮನೆ ಕಳ್ಳತನ ಮಾಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ