Ramanagara: ಶಾಲಾ ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿ ಸಾವು: ಪೋಷಕರ ಆಕ್ರಂದನ

By Govindaraj S  |  First Published Jan 9, 2023, 10:19 PM IST

ಚಾಲಕರ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಶಾಲಾ ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿಯ ಪಿಚ್ಚನಕೆರೆ ಬಳಿ ಸೋಮವಾರ ಸಂಜೆ ಜರುಗಿದೆ.


ರಾಮನಗರ (ಜ.09): ಚಾಲಕರ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಶಾಲಾ ಬಸ್‌ನಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿರುವ ಘಟನೆ ಹಾರೋಹಳ್ಳಿಯ ಪಿಚ್ಚನಕೆರೆ ಬಳಿ ಸೋಮವಾರ ಸಂಜೆ ಜರುಗಿದೆ. ಮೃತ ವಿದ್ಯಾರ್ಥಿನಿಯನ್ನು ಸಿದ್ದೇನಹಳ್ಳಿ ಗ್ರಾಮದ ಸ್ವಾಮಿ ಎಂಬುವವರ ಮಗಳು ರಕ್ಷಿತಾ (6) ಯುಕೆಜಿ ವಿದ್ಯಾಭ್ಯಾಸ ಮಾಡುತ್ತಿದ್ದಳು. 

ರಾಮನಗರ ತಾಲೂಕಿನ ಬಿಡದಿ ಬಳಿಯ ರಾಮನಹಳ್ಳಿ ಗೇಟ್‌ನ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯುಕೆಜಿ ತರಗತಿಯಲ್ಲಿ ಓದುತ್ತಿದ್ದು, ಎಂದಿನಂತೆ ಶಾಲೆ ಮುಗಿಸಿ ಬಸ್ ನಲ್ಲಿ ಬರಬೇಕಾದ ಸಂದರ್ಭದಲ್ಲಿ ಪಿಚ್ಚನಕೆರೆ ಬಳಿ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಸಾಗಬೇಕಾದರೆ ಶಾಲಾ ಸಿಬ್ಬಂದಿಯು ಬಸ್‌ನ ಬಾಗಿಲು ಹಾಕಿರಲಿಲ್ಲ ಆಗ ಚಾಲಕ ತಿರುವಿನಲ್ಲಿ ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ ವಿದ್ಯಾರ್ಥಿನಿ ರಕ್ಷಿತಾ ಕೆಳಗಿ ಬಿದ್ದಿದ್ದಾಳೆ ಬಿದ್ದಾಗ ಬಸ್ ಹಿಂದಿನ ಚಕ್ರ ತಲೆಯ ಮೇಲೆ ಹತ್ತಿದ್ದು ತಲೆ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

Tap to resize

Latest Videos

ಸಿಬ್ಬಂದಿಗಳ ಅಜಾಗರೂಕತೆಗೆ ಜನಾಕ್ರೋಶ: ಬಸ್‌ನಿಂದ ವಿದ್ಯಾರ್ಥಿನಿ ಬಿದ್ದು ಮರಣ ಹೊಂದಿದ ಸುದ್ದಿ ತಿಳಿದ ಕೂಡಲೇ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದು ಬಸ್ ಸಿಬ್ಬಂದಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಯಾವುದೇ ಶಾಸಕರು ಮಾಡದ ಸಾಹಸ ಸುಧಾಕರ್ ಮಾಡಿದ್ದಾರೆ: ಸಚಿವ ಸೋಮಶೇಖರ್

ಪೋಷಕರ ಆಕ್ರಂದನ: ತಮ್ಮ ಮಗಳು ಬಸ್‌ನಿಂದ ಬಿದ್ದು ಸತ್ತ ಸುದ್ದಿ ತಿಳಿದ ಪೋಷಕರು ಸ್ಥಳಕ್ಕೆ ಬಂದು ಗೋಳಾಡುತ್ತಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲಿಗೆ ಬಂದಂತಹ ಸುತ್ತಮುತ್ತಲಿನ ಗ್ರಾಮಸ್ಥರು ಶಾಲಾ ಸಿಬ್ಬಂದಿಗಳ ವಿರುದ್ದ ಹಿಡಿಶಾಪ ಹಾಕಿದರು. ಶಾಲೆಯ ಸಿಬ್ಬಂದಿಗಳು ತಮ್ಮ ಬೇಜವಾಬ್ದಾರಿತನದಿಂದ ಒಂದು ಮುಗ್ದ ಜೀವವನ್ನು ಬಲಿ ತೆಗೆದುಕೊಂಡಿದ್ದು, ಅವರ ಅಜಾಗರೂಕತೆಯೇ ಈ ಘಟನೆಗೆ ಕಾರಣವಾಗಿದೆ. ಇನ್ನು ಶಾಲೆಯ ವಿರುದ್ದ ಹಾಗೂ ಸಿಬ್ಬಂದಿಗಳ ವಿರುದ್ದ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!