ತುಮಕೂರು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗಿದ್ದು, ಮಹಿಳೆಯರು ಮಕ್ಕಳು ಹೊರಗೆ ಬರಲು ಹೆದರುವಂತಾಗಿದೆ. ಮುಂಜಾನೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಸದಾಶಿವನಗರದ 7ನೇ ಮುಖ್ಯರಸ್ತೆಯಲ್ಲಿ ನಡೆದಿದೆ.
ತುಮಕೂರು (ಜ.13): ತುಮಕೂರು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗಿದ್ದು, ಮಹಿಳೆಯರು ಮಕ್ಕಳು ಹೊರಗೆ ಬರಲು ಹೆದರುವಂತಾಗಿದೆ. ಮುಂಜಾನೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಸದಾಶಿವನಗರದ 7ನೇ ಮುಖ್ಯರಸ್ತೆಯಲ್ಲಿ ನಡೆದಿದೆ.
ಅಂದಾಜು.2.5 ಲಕ್ಷ ರೂಪಾಯಿ ಮೌಲ್ಯದ 27 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಖದೀಮರು. ಬೆಳಗಿನ ಜಾವ ವಾಕಿಂಗ್ ಮಾಡಲು ಹೊರಬಂದಿದ್ದ ಮಹಿಳೆ. ಸದಾಶಿವನಗರದ ಮುಖ್ಯರಸ್ತೆಯಲ್ಲಿ ವಾಕಿಂಗ್ ಹೊರಟಿದ್ದ ಮಹಿಳೆಯನ್ನ ಬೈಕ್ ನಲ್ಲಿ ಹಿಂಬಾಲಿಸಿ ಬಂದಿದ್ದ ಖದೀಮರು. ಮೇಲ್ನೋಟಕ್ಕೆ ವೃತ್ತಿಪರ ಕಳ್ಳರಂತಿದ್ದು, ಕಳ್ಳತನದ ಗುರುತು ಸಿಗಬಾರದೆಂದು ಹೆಲ್ಮೆಟ್ ಧರಿಸಿ ಬಂದಿದ್ದ ಖದೀಮರು. ಮಹಿಳೆಯ ಬಳಿ ಬರುತ್ತಿದ್ದಂತೆ ಕತ್ತಿಗೆ ಕೈಹಾಕಿ ಮಾಂಗಲ್ಯದ ಸರ ಕಿತ್ತುಕೊಂಡು ಬೈಕ್ ಹತ್ತಿ ಪರಾರಿಯಾಗಿದ್ದಾರೆ.
ತಪ್ಪಿದ ಭಾರೀ ಅನಾಹುತ; ಅಂಗನವಾಡಿಯಲ್ಲಿ ಕುಕ್ಕರ್ ಸ್ಫೋಟ 14 ಮಕ್ಕಳು ಪಾರು, ಹಲವು ಮಕ್ಕಳಿಗೆ ಗಾಯ!
ಘಟನೆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸರು ಭೇಟಿ ನೀಡಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ.