Bengaluru: ರಸ್ತೆ ಬದಿಯಲ್ಲಿ ಹೋಗುವಾಗ ಮೊಬೈಲ್ ನೋಡ್ತಾ ಹೋಗುವವರೇ ಎಚ್ಚರ!

Published : Oct 07, 2023, 09:23 AM IST
Bengaluru: ರಸ್ತೆ ಬದಿಯಲ್ಲಿ ಹೋಗುವಾಗ ಮೊಬೈಲ್ ನೋಡ್ತಾ ಹೋಗುವವರೇ ಎಚ್ಚರ!

ಸಾರಾಂಶ

ರಸ್ತೆ ಬದಿಯಲ್ಲಿ ಹೋಗುವಾಗ ಮೊಬೈಲ್ ನೋಡ್ತಾ ಹೋಗುವವರೇ ಎಚ್ಚರ, ಕಣ್ಣು ಮುಚ್ಚಿ ಕಣ್ಣು ಬಿಡೊದ್ರೊಳಗೆ ನಿಮ್ಮ ಕೈಯಲ್ಲಿದ್ದ ಮೊಬೈಲ್ ಮಾಯ, ಕ್ಷಣಾರ್ಧದಲ್ಲಿ ಬೈಕ್ ನಲ್ಲಿ ಬಂದು ಮೊಬೈಲ್ ಎಗರಿಸ್ತಾರೆ ಅಸಾಮಿಗಳು. 

ಬೆಂಗಳೂರು (ಅ.07): ರಸ್ತೆ ಬದಿಯಲ್ಲಿ ಹೋಗುವಾಗ ಮೊಬೈಲ್ ನೋಡ್ತಾ ಹೋಗುವವರೇ ಎಚ್ಚರ, ಕಣ್ಣು ಮುಚ್ಚಿ ಕಣ್ಣು ಬಿಡೊದ್ರೊಳಗೆ ನಿಮ್ಮ ಕೈಯಲ್ಲಿದ್ದ ಮೊಬೈಲ್ ಮಾಯ, ಕ್ಷಣಾರ್ಧದಲ್ಲಿ ಬೈಕ್ ನಲ್ಲಿ ಬಂದು ಮೊಬೈಲ್ ಎಗರಿಸ್ತಾರೆ ಅಸಾಮಿಗಳು. ಕೈಯಲ್ಲಿ ಮೊಬೈಲ್ ಹಿಡಿದುಕೊಂಡವರೇ ಇವರ ಟಾರ್ಗೆಟ್. ಹೌದು!  ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಮೊಬೈಲ್ ಹಿಡಿದುಕೊಂಡು ಹೋಗ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದು ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಜಯನಗರದ ಸಬ್ ರಿಜಿಸ್ಟರ್ ಆಫೀಸ್ ಬಳಿ ನಡೆದಿದೆ. ರಾತ್ರಿ 10:30 ರ ಸುಮಾರಿಗೆ ನಡೆದುಕೊಂಡು ಹೋಗುವಾಗ ಘಟನೆ ನಡೆದಿದ್ದು, ಜಯನಗರ ಠಾಣೆಗೆ ಯುವಕರು ಮಾಹಿತಿ ನೀಡಿದ್ದಾರೆ.
 


ಕಳ್ಳತನ ಮಾಡಿದ ಎರಡೇ ಗಂಟೆಯಲ್ಲಿ ಆರೋಪಿ ಬಂಧನ: ಚಕೇರಳದಿಂದ ಮುಂಬೈಗೆ ತೆರಳುತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣಿ ಬಾಲಕೃಷ್ಣನ್‌ ಎಂಬವವರ ಲಕ್ಷಾಂತರ ರು. ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಎರಡೇ ಗಂಟೆಗಳಲ್ಲಿ ಬಂಧಿಸಿದ ಘಟನೆ ಬುಧವಾರ ನಡೆದಿದೆ. ಕಲ್ಯಾಣಿ, ಬುಧವಾರ ತ್ರಿಶ್ಶೂರ್‌ನಿಂದ ಪ್ರಯಾಣಿಸುತ್ತಿದ್ದು, ರಾತ್ರಿ 10.10 ಗಂಟೆಗೆ ರೈಲು ಮಂಗಳೂರು, ತೋಕೂರು ರೈಲ್ವೇ ನಿಲ್ದಾಣದ ಹತ್ತಿರ ನಿಧಾನಗತಿಯಲ್ಲಿ ಚಲಿಸುತ್ತಿರುವಾಗ ಕಳ್ಳರು ಅವರ ಕೈಯಲ್ಲಿದ್ದ ಬ್ಯಾಗನ್ನು ಬಲವಂತವಾಗಿ ಸೆಳೆದುಕೊಂಡು ಪರಾರಿಯಾಗಿದ್ದರು.

ಬ್ಯಾಗಿನಲ್ಲಿ 127 ಗ್ರಾಂ ತೂಕದ ಚಿನ್ನಾಭರಣಗಳು, ಮೊಬೈಲ್‌, ಹ್ಯಾಂಡ್‌ ಬ್ಯಾಗ್‌, ಎಸ್‌ಬಿಐ ಕಾರ್ಡ್‌, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಕನ್ನಡಕ ಇತ್ಯಾದಿ 6,70,000 ರು.ಗಳ ಸೊತ್ತುಗಳಿದ್ದು, ಅವರು ತಕ್ಷಣ ರೈಲಿನ ಟಿಟಿಇ ಅಧಿಕಾರಿಗಳಿಗೆ ದೂರು ನೀಡಿದ್ದರು. ಟಿಟಿಇ ಚಂದ್ರಕಾಂತ ಶೇಟ್‌ ಅವರು ಉಡುಪಿ ರೈಲ್ವೇ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಶ್ರೀಕಾಂತ್‌ ಎಂಬವವರಿಗೆ ಈ ಕಳ್ಳತನದ ಮಾಹಿತಿ ನೀಡಿದ್ದರು. 

ಕಾಂಗ್ರೆಸ್‌ನವರಿಗೆ ಕೇಸರಿ ಅಂದ್ರೆ ಆಗಲ್ಲ, ಮುಸ್ಲಿಮರ ಟೋಪಿಯನ್ನು ಹಾಕಿಕೊಳ್ಳುತ್ತಾರೆ: ಸಿ.ಟಿ.ರವಿ

ಶ್ರೀಕಾಂತ್ ಅವರು 11.55 ಗಂಟೆಗೆ ಉಡುಪಿ ರೈಲ್ವೇ ಪ್ಲ್ಯಾಟ್‌ ಪಾರಂನಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಸನ್ನಿ ಮಲ್ಹೋತ್ರಾ ಎಂಬಾತನನ್ನು ವಶಕ್ಕೆ ಪಡೆದು ರೈಲ್ವೆ ಪೊಲೀಸ್ ಎಎಎಸ್ಐ ಸುಧೀರ್‌ ಶೆಟ್ಟಿ ಮುಂದೆ ಹಾಜರುಪಡಿಸಿದರು. ಆತನಿಂದ ಕಲ್ಯಾಣಿ ಅವರ 93.17 ಗ್ರಾಂ ಚಿನ್ನಾಭರಣ, 3,700 ರು. ಮತ್ತು ಎಟಿಎಂ ಕಾರ್ಡು ಸೇರಿ 4,67,620 ರು. ಮೌಲ್ಯದ ಸೊತ್ತುಗಳು ಪತ್ತೆಯಾಗಿವೆ. ಉಳಿದ ಚಿನ್ನಾಭರಣಗಳು ಆತನ ಜೊತೆ ಇದ್ದು ಇನ್ನೊಬ್ಬ ಆರೋಪಿಯ ಬಳಿ ಇದ್ದಿರಬೇಕು ಎಂದು ಸಂಶಯಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು