ರಾಣಿಬೆನ್ನೂರು: ಮದುವೆಯಾಗಲಿಲ್ಲ ಎಂಬ ಚಿಂತೆಯಲ್ಲಿ ಯುವಕ ಆತ್ಮಹತ್ಯೆ

By Kannadaprabha News  |  First Published Oct 7, 2023, 4:30 AM IST

ಮದುವೆಯ ವಿಷಯವಾಗಿ ಮನಸ್ಸಿಗೆ ಬೇಸರ ಮಾಡಿಕೊಂಡು ಮನೆಯಲ್ಲಿ ಬೆಟ್‌ಶೀಟ್‌ನಿಂದ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿಸಿದ ಪೊಲೀಸರು 


ರಾಣಿಬೆನ್ನೂರು(ಅ.07):  ಮದುವೆಯಾಗಲಿಲ್ಲ ಎಂಬ ಚಿಂತೆಯಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಇಲ್ಲಿಯ ಹಲಗೇರಿ ರಸ್ತೆಯ ಬಸವೇಶ್ವರ ನಗರದಲ್ಲಿ ನಡೆದಿದೆ. ಬಸವರಾಜ ಮಹಾಭಲೇಶ್ವರ ಬೇಟಗೇರಿ (32) ಆತ್ಮಹತ್ಯೆಗೆ ಶರಣಾದ ಯುವಕ. 

ಕೂಲಿ ಕೆಲಸ ಮಾಡಿಕೊಂಡಿದ್ದ ಬಸವರಾಜ ಮದುವೆ ವಿಷಯವಾಗಿ ಚಿಂತೆ ಮಾಡುತ್ತಿದ್ದು, ಅತಿಯಾಗಿ ಮದ್ಯಸೇವನೆ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ. 

Tap to resize

Latest Videos

undefined

ಹೆಂಡತಿ ಇಬ್ಬರು ಹೆಣ್ಣು ಮಕ್ಕಳಿಗೆ ಗುಂಡಿಕ್ಕಿ ಪೊಲೀಸ್ ಪೇದೆ ಸಾವಿಗೆ ಶರಣು

ಮದುವೆಯ ವಿಷಯವಾಗಿ ಮನಸ್ಸಿಗೆ ಬೇಸರ ಮಾಡಿಕೊಂಡು ಮನೆಯಲ್ಲಿ ಬೆಟ್‌ಶೀಟ್‌ನಿಂದ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

click me!