ಮಗುವಿಗೆ ಜನ್ಮ ನೀಡಿದ ಬೆನ್ನಲ್ಲಿಯೇ ಸಾವು ಕಂಡ ತಾಯಿ, ನವಜಾತ ಶಿಶುವನ್ನು ಬೇರೊಬ್ಬರಿಗೆ ಮಾರಿದ ನರ್ಸ್‌!

Published : Oct 06, 2023, 10:25 PM IST
ಮಗುವಿಗೆ ಜನ್ಮ ನೀಡಿದ ಬೆನ್ನಲ್ಲಿಯೇ ಸಾವು ಕಂಡ ತಾಯಿ, ನವಜಾತ ಶಿಶುವನ್ನು ಬೇರೊಬ್ಬರಿಗೆ ಮಾರಿದ ನರ್ಸ್‌!

ಸಾರಾಂಶ

 ಸೆಪ್ಟೆಂಬರ್‌ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಅಕ್ಟೋಬರ್‌ 1 ರಂದು ಸಾವು ಕಂಡಿದ್ದಾಳೆ. ಇಬ್ಬರು ನರ್ಸ್‌ಗಳು ಆಕೆಯ ಹೆರಿಗೆಯನ್ನು ಮನೆಯಲ್ಲಿಯೇ ಮಾಡಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.  

ರಾಂಚಿ (ಅ.6): ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಸಾವು ಕಂಡಿದ್ದಾಳೆ. ಇದರ ಬೆನ್ನಲ್ಲಿಯೇ ಮಗುವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ರಾಂಚಿನ ಪೊಲೀಸರು ಇಬ್ಬರು ನರ್ಸ್‌ಗಳು ಸೇರಿದಂತೆ ಮೂವರು ಮಹಿಳೆಯನ್ನು ಬಂಧಿಸಿದ್ದಾರೆ. ಶುಕ್ರವಾರಸ ಸಂಜೆಯ ವೇಳೆಗೆ ಇವರನ್ನು ರಾಂಚಿಯಲ್ಲಿಯೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಮನೋಹರಪುರದಲ್ಲಿ ಪ್ರಕರಣ ದಾಖಲಾಗಿದೆ. ಮುನ್ನಿ ಚಾಂಪಿಯಾ ಎಂಬ ಯುವತಿ ಹೆರಿಗೆಯಾದ ಕೂಡಲೇ ಸಾವನ್ನಪ್ಪಿದ್ದಾಳೆ. ಈ ಪ್ರದೇಶದಲ್ಲಿ ನರ್ಸ್‌ ಆಗಿರುವ ಇಬ್ಬರು ಮಹಿಳೆಯರು ಮನೆಯಲ್ಲಿಯೇ ಆಕೆಗೆ ಹೆರಿಗೆ ಮಾಡಿಸಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಸೆಪ್ಟೆಂಬರ್‌ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಆಕೆ, ಅಕ್ಟೋಬರ್‌ 1 ರಂದು ಸಾವು ಕಂಡಿದ್ದರು. ಆ ಬಳಿಕ ಈ ಇಬ್ಬರು ನರ್ಸ್‌ಗಳು ಮಗುವನ್ನು ನೆರೆಯ ಜಿಲ್ಲೆಯಲ್ಲಿ ವಾಸಿಸುವ ಗುಡ್ಡಿ ಗುಪ್ತಾ ಎಂಬ ಮಹಿಳೆಗೆ ಮಾರಾಟ ಮಾಡಿದ್ದಾರೆ. ಆದರೆ, ದಿನಗಳು ಕಳೆದರೂ ಮಗು ಒಂದೇ ಸಮನೆ ಅಳುವುದು ಹಾಗ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಗುಡ್ಡಿ ಗುಪ್ತಾ ಮಗುವನ್ನು ಹಿಂತಿರುಗಿಸಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಶುಗಳನ್ನು ಖರೀದಿಸಿದ ಮಹಿಳೆ ಮತ್ತು ಮಾರಾಟ ಮಾಡಿದ ಇಬ್ಬರು ನರ್ಸ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಉಪ ಪೊಲೀಸ್ ಆಯುಕ್ತರು, ಹೆರಿಗೆ ಬಳಿಕ ಮೃತಪಟ್ಟ ಮಹಿಳೆ ಅವಿವಾಹಿತೆಯಾಗಿದ್ದು, ತಂದೆ-ತಾಯಿಯ ಮರಣದ ನಂತರ ಆಕೆ ತನ್ನ ತಾಯಿಯ ಸಂಬಂಧಿಯೊಂದಿಗೆ ವಾಸಿಸುತ್ತಿದ್ದಳು ಎಂದು ತಿಳಿಸಿದ್ದಾರೆ.

ಬಡ್ಡಿ ಹಣದ ವಿಚಾರವಾಗಿ ಗಲಾಟೆ: ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಕೆಲವು ತಿಂಗಳ ಹಿಂದೆ ನಡೆದ ಕೇರಳದಲ್ಲಿ ಇಂಥದ್ದೇ ಘಟನೆ ನಡೆಸಿತ್ತು. ತಿರುವನಂತಪುರಂ ಥೈಕ್ಕಾಡ್‌ನಲ್ಲಿ ತಾಯಿ ಮತ್ತು ಮಗು ಹೆರಿಗೆಯಾದ ತಕ್ಷಣ ತಮ್ಮ ನವಜಾತ ಶಿಶುವನ್ನು ಮಾರಾಟ ಮಾಡಿದ್ದರು. ನೆರೆಮನೆಯ ಮಹಿಳೆಯೊಬ್ಬರು ಹಣ ಕೊಟ್ಟು ಮಗುವನ್ನು ಖರೀದಿ ಮಾಡಿದ್ದರು. ಮಾರಾಟ ಮಾಡುತ್ತಿರುವ ವಿಷಯ ತಿಳಿದ ಚೈಲ್ಡ್ ಲೈನ್ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 3 ಲಕ್ಷ ಕೊಟ್ಟು ಮಗುವನ್ನು ಖರೀದಿಸಿರುವುದಾಗಿಯೂ ಮಹಿಳೆ ಒಪ್ಪಿಕೊಂಡಿದ್ದಳು.

ಅಪರಿಚಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಹುಷಾರ್: ಉಂಡ ಮನೆಗೆ ದ್ರೋಹ ಬಗೆದ ಖದೀಮರು ಅರೆಸ್ಟ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ