ಸತ್ತಿಬಾಬು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ರಾಜ್ಯಗಳ್ಳಿ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ. ಈತನ ಮೇಲೆ ಈ ವರೆಗೆ ಒಟ್ಟು 56 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ತೆಲಂಗಾಣ ರಾಜ್ಯದಲ್ಲಿ 20, ಆಂಧ್ರಪ್ರದೇಶದಲ್ಲಿ 30, ತಮಿಳುನಾಡಿನಲ್ಲಿ 3 ಹಾಗೂ ಕರ್ನಾಟಕದ 3 ಪ್ರಕರಣದ ಆರೋಪಿಯಾಗಿದ್ದಾನೆ.
ವರದಿ : ಮಧು.ಎಂ.ಚಿನಕುರಳಿ
ಮೈಸೂರು(ಆ.02): ಆತ ಓದಿರೋದು ಕೇವಲ 10 ನೇ ತರಗತಿ. ಆದರೆ ಇಂಟರ್ನೆಟ್ ಬಳಸೋದರಲ್ಲಿ ಪಂಟರ್. ಇಂಟರ್‌ನೆಟ್ ಮೂಲಕವೇ ಐಷಾರಾಮಿ ಏರಿಯಾಗಳ ಮಾಹಿತಿ ಕಲೆ ಹಾಕ್ತಿದ್ದ. ನಂತರ ಮನೆ ಕಳ್ಳತನ ಮಾಡ್ತಿದ್ದ.. ಐಷಾರಾಮಿ ಕಾರು ಕದೀತಿದ್ದ. ನಾಲ್ಕು ರಾಜ್ಯಗಳ ಅರ್ಧ ಸೆಂಚುರಿ ಕಳ್ಳತನ ಮಾಡಿದವನ ಕಥೆ ಇಲ್ಲಿದೆ.
undefined
56 ಕೇಸ್‌ಗಳಲ್ಲಿ ಬೇಕಾದ ಕಳ್ಳ ಮೈಸೂರು ಪೊಲೀಸರ ಬಲಗೆ
ಒಂದಲ್ಲ, ಎರಡಲ್ಲ, ಮೂರಲ್ಲ.... 4 ರಾಜ್ಯಗಳಲ್ಲಿ 54 ಕಳ್ಳತನ ಪ್ರಕರಣ ನಡೆಸಿರೋ ಆಸಾಮಿಯ ಕಥೆ ಇದು. ಹೆಸರು ಸತ್ತಿಬಾಬು @ ಕರಿ ಸತ್ತಿಬಾಬು. ಪಕ್ಕದ ಆಂಧ್ರಪ್ರದೇಶ ರಾಜ್ಯದ ಚಿತ್ತೂರಿನವನು. ಸತ್ತಿಬಾಬು ಓದಿರೋದು 10ನೇ ತರಗತಿಯಾದರೂ ಕಳ್ಳತನದಲ್ಲಿ ಟೆಕ್ನಾಲಜಿ ಬಳಸುವ ಖದೀಮ. ಇಂಟರ್‌ನೆಟ್ ಬಳಸಿಕೊಂಡು ಐಷಾರಾಮಿ ಏರಿಗಳು, ಮನೆಗಳ ಮಾಹಿತಿ ಕಲೆ ಹಾಕುತ್ತಿದ್ದ ಆಸಾಮಿ ಒಬ್ಬನೇ ಮನೆ ನುಗ್ಗಿ ಒಡವೆಗಳನ್ನು ದೋಚುತ್ತಿದ್ದುದು ಮಾತ್ರವಲ್ಲದೆ, ಅವರ ಐಷಾರಾಮಿ ಕಾರುಗಳನ್ನೂ ಕಳ್ಳತನ ಮಾಡುತ್ತಿದ್ದ.
ಕೊಡೆಕಲ್ ಬಸವೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕದ್ದ ಖದೀಮರು!
ಮನೆ ಹಾಗೂ ಐಷಾರಾಮಿ ಕಾರುಗಳನ್ನು ಕಳುವು ಮಾಡುತ್ತಿದ್ದ ಕುಖ್ಯಾತ ಕಳ್ಳ ಈಗ ಅಂದರ್ ಆಗಿದ್ದಾನೆ. ನಾಲ್ಕು ರಾಜ್ಯಗಳಲ್ಲಿ ಮನೆ ಕಳ್ಳತನ ಹಾಗೂ ಕಾರು ಕಳ್ಳತನ ಮಾಡುತ್ತಿದ್ದ ಈತ ಮೈಸೂರಿನ ವಿ ವಿ ಪುರಂ, ಹೆಬ್ಬಾಳು ಹಾಗೂ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ್ದ. ವಿ.ವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಯಾದವಗಿರಿಯಲ್ಲಿ ಮನೆಯೊಂದಕ್ಕೆ ಕನ್ನ ಹಾಕಿ ಚಿನ್ನಾಭರಣ ಕಳವು ಮಾಡಿದ್ದವನು, ಅವರ ಕಾರನ್ನೂ ಕದ್ದೊಯ್ದಿದ್ದ.
ಪ್ರಕರಣ ಭೇದಿಸಿ ವಿವಿ.ಪುರಂ ಪೊಲೀಸರಿಗೆ ಮೈಸೂರಿನಲ್ಲೇ ಮತ್ತೆರಡು ಕಾರು ಕಳವು ಮಾಡಿದ ಬಗ್ಗೆ ಸುಳಿವು ಸಿಕ್ಕಿತ್ತು. ಬಂಧಿತನಿಂದ ಮೂರು ಕಾರು, ಮತ್ತು 750 ಗ್ರಾಂ ಚಿನ್ನಾಭರಣ, ಮೂರು ವಾಚುಗಳು ಸೇರು ಸುಮಾರು 1.19 ಕೋಟಿ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಲ್ಕು ರಾಜ್ಯಗಳಲ್ಲಿ ಕೈ ಚಳಕ ತೋರಿಸಿರುವ ಖದೀಮ
ಸತ್ತಿಬಾಬು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕ ರಾಜ್ಯಗಳ್ಳಿ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ. ಈತನ ಮೇಲೆ ಈ ವರೆಗೆ ಒಟ್ಟು 56 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ತೆಲಂಗಾಣ ರಾಜ್ಯದಲ್ಲಿ 20, ಆಂಧ್ರಪ್ರದೇಶದಲ್ಲಿ 30, ತಮಿಳುನಾಡಿನಲ್ಲಿ 3 ಹಾಗೂ ಕರ್ನಾಟಕದ 3 ಪ್ರಕರಣದ ಆರೋಪಿಯಾಗಿದ್ದಾನೆ. ಐಷಾರಾಮಿ ಕಾರು ಕದ್ದು ಶೋಕಿಗಾಗಿ ಕಡಿಮೆ ಹಣಕ್ಕೆ ಮಾಡುತ್ತಿದ್ದ ವಿಷಯ ಸದ್ಯ ಬಯಲಾಗಿದೆ ಎಂದಿದ್ದಾರೆ ಮೈಸೂರು ಸಿಟಿ ಪೊಲೀಸ್ ಕಮಿಷನರ್ ರಮೇಶ್ ಬಾನೋತ್.
ಇದೇ ಕಳ್ಳ ಮಾಜಿ ಸಚಿವ ಎಂ ಶಿವಣ್ಣ ಅವರ ಕಾರನ್ನು ಸಹ ಕದ್ದೊಯ್ದಿದ್ದ. ವಿಜಯನಗರದ ಎಂ ಶಿವಣ್ಣನವರ ನಿವಾಸದ ಬಳಿಯೇ ಕಾರು ಕಳ್ಳತನವಾಗಿತ್ತು. ಮನೆಗೆ ನುಗ್ಗಿ ಕಾರ್ ಕೀ ಪಡೆದು ಕಾರು ಕಳ್ಳತನ ಮಾಡಿದ್ದ. ಈ ಸಂಬಂಧ ಎಂ ಶಿವಣ್ಣ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ವಶಪಡಿಸಿಕೊಂಡಿರುವ ಮೂರು ಕಾರುಗಳ ಪೈಕಿ ಎಂ ಶಿವಣ್ಣನವರ ಕಾರು ಕೂಡ ಒಂದಾಗಿದೆ.