ನೇರಲಗುಂಟೆ ಶಾಲೆಯಲ್ಲಿ ಕಳ್ಳತನ: 2 ಲ್ಯಾಪ್‌ ಟಾಪ್‌, ಕ್ವಿಂಟಾಲ್‌ ಹಾಲಿನ ಪುಡಿ ಕದ್ದೊಯ್ದ ಖದೀಮರು!

By Kannadaprabha News  |  First Published Jul 9, 2023, 6:23 AM IST

 ತಾಲೂಕಿನ ನೇರಲಗುಂಟೆ ಗ್ರಾಮದ ಶ್ರೀ ವೆಂಕಟೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ರಾತ್ರಿ ಶಾಲೆಯ ಕಚೇರಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಕೊಠಡಿಯಲ್ಲಿದ್ದ ಎರಡು ಹೊಸ ಲ್ಯಾಪ್‌ ಟಾಪ್‌ಗಳು, ಒಂದು ಪ್ರಿಂಟರ್‌, ಒಂದು ಪೊ›ಜೆಕ್ಟ್ರ್‌, ಚಾರ್ಜರ್‌ಗಳನ್ನು ಕದ್ದೊಯ್ಯಲಾಗಿದೆ.


ಚಳ್ಳಕೆರೆ (ಜು.9) :  ತಾಲೂಕಿನ ನೇರಲಗುಂಟೆ ಗ್ರಾಮದ ಶ್ರೀ ವೆಂಕಟೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶುಕ್ರವಾರ ರಾತ್ರಿ ಶಾಲೆಯ ಕಚೇರಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಕೊಠಡಿಯಲ್ಲಿದ್ದ ಎರಡು ಹೊಸ ಲ್ಯಾಪ್‌ ಟಾಪ್‌ಗಳು, ಒಂದು ಪ್ರಿಂಟರ್‌, ಒಂದು ಪೊ›ಜೆಕ್ಟ್ರ್‌, ಚಾರ್ಜರ್‌ಗಳನ್ನು ಕದ್ದೊಯ್ಯಲಾಗಿದೆ.

ಬಿಸಿಯೂಟಕ್ಕಾಗಿ ಸರಕಾರ ನೀಡಿದ್ದ 20 ಕೆ.ಜಿ ಪ್ಯಾಕೆಟ್‌ಗಳ 5 ಚೀಲಗಳನ್ನು ಒಳಗೊಂಡಂತೆ 100 ಕೆ.ಜಿ ಹಾಲಿನ ಪುಡಿ, 30 ಕೆ.ಜಿ ಸಕ್ಕರೆ, ಸಾಂಬರ್‌ ಪುಡಿ, ಕಾರದ ಪುಡಿ ಚೀಲಗಳು ಕಳ್ಳತನವಾಗಿವೆ. ಒಂದು ವಾರದ ಹಿಂದೆ ಸರ್ಕಾರ ಕುಕ್ಕರ್‌, ಮಿಕ್ಸರ್‌, ಅಳತೆ ಮಾಪನ ಯಂತ್ರಗಳನ್ನು ಶಾಲೆಗೆ ಒದಗಿಸಲಾಗಿತ್ತು. ಇವುಗಳನ್ನು ಕಳ್ಳತನ ಮಾಡಲಾಗಿದೆ.

Latest Videos

undefined

 

ಕಲಬುರಗಿ: ಶ್ರೀಗಂಧ ಮರ ಅಕ್ರಮ ಸಾಗಾಟ, ಇಬ್ಬರಿಗೆ ಜೈಲು ಶಿಕ್ಷೆ

ಮುಖ್ಯಶಿಕ್ಷಕರ ಕೊಠಡಿ ಮತ್ತು ಸ್ಟಾಫ್‌ ರೂಂ ಒಂದೇ ವಿಶಾಲವಾದ ಕೊಠಡಿಯಲ್ಲಿದೆ. ಇಲ್ಲಿ ಪ್ರಮುಖವಾದ ವಸ್ತುಗಳು ಇರಿಸಲಾಗುತ್ತಿದ್ದು, ಈ ಕೊಠಡಿಗೆ ಇನ್ನರ್‌ ಲಾಕ್‌, ಸೇಫ್ಟಿಡೋರ್‌ ಮತ್ತು ಬೀಗ ಹಾಕಲಾಗಿದೆ. ಆದರೆ ಕಳ್ಳರು ಈ ಮೂರು ರೀತಿಯ ರಕ್ಷಣೆಗಳನ್ನು ಒಡೆದು ಹಾಕಿದ್ದಾರೆ. ಹಾರೆಯಂತಹ ಸಲಕರಣೆಯಿಂದ ಬಾಗಿಲನ್ನು ಒಡೆದಿದ್ದಾರೆ. ಸೇಫ್ಟಿಡೋರ್‌ ಕಿತ್ತು ಹಾಕಲಾಗಿದೆ. ಬಾಗಿಲಿನ ಮುಂಭಾಗದಲ್ಲಿ ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ ಹೊಂದಿರುವ ಸೇಫ್ಟಿಡೋರ್‌ ಒಡೆಯಲಾಗಿದೆ. ಶನಿವಾರ ಬೆಳಗಿನ ಶಾಲೆಯ ಸಮಯಕ್ಕೆ ಶಿಕ್ಷಕರು ಬಂದಾಗಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.

2.5 ಕಿಮೀ ದೂರಕ್ಕೆ ₹400 ಕೇಳಿದ ಆಟೋ ಡ್ರೈವರ್; ಅಷ್ಟು ದುಡ್ಡು ಆಗಲ್ಲ ಅಂದಿದ್ದಕ್ಕೆ ಯುವಕನ ಮೊಬೈಲ್ ಕಸಿದು ಪರಾರಿ!

ಜೂನ್‌ 21ರಂದು ಶಾಲೆ ಸ್ಥಾಪನೆಯ 50ನೇ ವರ್ಷದ ಸಂಭ್ರಮಾಚರಣೆ ಜರುಗಿತ್ತು. ಈ ಹಿನ್ನೆಲೆಯಲ್ಲಿ ದಾನಿಗಳು ಲ್ಯಾಪ್‌ಟಾಪ್‌ ಸೇರಿದಂತೆ ನಾನಾ ಕೊಡುಗೆಗಳನ್ನು ನೀಡಿದ್ದರು. ಈ ಎಲ್ಲ ವಸ್ತುಗಳು ಕಳ್ಳತನವಾಗಿವೆ. ಪಿಎಸ್‌ಐ ದೇವರಾಜ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಸಾಕ್ಷಗಳನ್ನು ಸಂಗ್ರಹಿಸಿದ್ದಾರೆ. ಮುಖ್ಯಶಿಕ್ಷಕ ಸತ್ಯನಾರಾಯಣ ದೂರು ದಾಖಲಿಸಿದ್ದಾರೆ. ನಾಯಕನಹಟ್ಟಿಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!