ಕೆಲಸಗಾರನಿಂದಲೇ ಜ್ಯೂವೆಲ್ಲರಿ ಶಾಪ್ ನಲ್ಲಿ ಕಳ್ಳತನ-ಮೋಜು ಮಸ್ತಿಗಾಗಿ ಕಳವು 

By Ravi Nayak  |  First Published Jul 18, 2022, 6:09 PM IST

ಮನುಷ್ಯ ನಂಬಿಕೆಗೆ ಅರ್ಹನಲ್ಲದವನು ಎಂಬುದು ಪದೇ ಪದೆ ಸಾಬೀತಾಗುವಂತ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳ ಸಾಲಿಗೆ ಇದೊಂದು. ಯಶವಂತಪುರ ಜ್ಯುವೆಲ್ಲರಿ ಶಾಪ್ ನಲ್ಲಿ ೧೮ ವರ್‌ಷಗಳಿಂದ ಸೇಲ್ಸ್ ಮ್ಯಾನ್ ಆಗಿದ್ದವನೇ ದೋಚುತ್ತಿದ್ದ ಚಿನ್ನ!


ಬೆಂಗಳೂರು (ಜು.18):  ಈ ಕಾಲಕ್ಕೆ ಯಾರನ್ನ ನಂಬುವುದೋ ಬಿಡುವುದೋ.. ಮನುಷ್ಯನಂತೂ ನಂಬಿಕೆಯ ಅರ್ಹನಮಾಗಿ ಉಳಿದುಕೊಂಡಿಲ್ಲ. ಏಕೆಂದರೆ ದಿನನಿತ್ಯ ಕೊಲೆ ದರೋಡೆ, ಕಳ್ಳತನದಂತೆ ಹತ್ತಾರು ಕ್ರೈಂ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ.  ಹೊನ್ನು ಮಣ್ಣಿಗಾಗಿ ಮಗ, ತಂದೆಯನ್ನ, ತಂದೆ ಮಕ್ಕಳನ್ನು ಮೋಸಗೊಳಿಸುವ ಕಾಲವಿದು. ಹೀಗಿರುವಾಗ ಜ್ಯುವೆಲ್ಲರಿ ಅಂಗಡಿಯಲ್ಲಿ ಅಪರಿಚಿತರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಂತೂ ತುಂಬಾ ಡೇಂಜರ್. ಎಷ್ಟು ಎಚ್ಚರಿಕೆವಹಿಸಿದರೂ ಸಾಲದು. ಯಶವಂತಪುರದಲ್ಲಿ ನಡೆದಿರುವ ಕಳ್ಳತನದ ಈ ಪ್ರಕರಣವನ್ನೇ ನೋಡಿ; ಇಲ್ಲೊಬ್ಬ ತಾನು ಕೆಲಸ‌ ಮಾಡುತ್ತಿದ್ದ ಜ್ಯೂವೆಲ್ಲರಿ ಶಾಪ್ ನಲ್ಲಿ ಒಂದೊಂದೆ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಉಪ್ಪು ತಿಂದ ಮನೆಗೆ ದ್ರೋಹ ಬಗೆದ ಆರೋಪಿಯೇ ಚೇತನ್ ನಾಯ್ಡು ಹಾಗೂ ವಿಜಯ್ ಬಂಧಿತರು. ಯಶವಂತಪುರ ಪೊಲೀಸರು ಆರೋಪಿಗಳಿಂದ ಲಕ್ಷಾಂತರ  ಮೌಲ್ಯದ 600 ಗ್ರಾಂ ಚಿನ್ನಾಭರಣ, 99 ಸಾವಿರ ‌ನಗದು ಹಾಗೂ ಒಂದು ಕಾರು ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ.

ನಗರದ ಯಶವಂತಪುರ(Yashwantapur)ರದಲ್ಲಿನ ದಿ ಬೆಸ್ಟ್ ಜ್ಯೂವೆಲ್ಲರಿ ಶಾಪ್ (The best  jewellery shop)ನಲ್ಲಿ ಕಳೆದ 18 ವರ್ಷಗಳಿಂದ ಸೆಲ್ಸ್ ಮ್ಯಾನ್(Sales man) ಆಗಿ ಕೆಲಸ‌ ಮಾಡುತ್ತಿದ್ದ. ಮಾಲೀಕರ ವಿಶ್ವಾಸ ಸಂಪಾದಿಸಿಕೊಂಡಿದ್ದ.‌‌ಶಾಪ್ ನಲ್ಲಿ ಯಾರು ಇಲ್ಲದಿರುವಾಗ ಸಣ್ಣ ಪ್ರಮಾಣದ ಚಿನ್ನ ಕದಿಯುತ್ತಿದ್ದ. ಕಳ್ಳತನ ಬಳಿಕ ಮಾರಾಟವಾಗಿದೆ ಎಂದು ಲೆಕ್ಕಪತ್ರದಲ್ಲಿ ನಮೂದಿಸುತ್ತಿದ್ದ. 

Tap to resize

Latest Videos

ಇದನ್ನೂ ಓದಿ: Bengaluru Crime News; ಬಾರಲ್ಲಿ 2 ರೌಡಿ ಗುಂಪುಗಳ ಮಾರಾಮಾರಿ

ಕಳೆದ‌‌ ಒಂದು ವರ್ಷದಿಂದ ಇದೇ ರೀತಿ ಕಳ್ಳತನ‌ ಮಾಡುತ್ತಿದ್ದ. ಇತ್ತೀಚೆಗೆ ಗ್ರಾಹಕರೊಬ್ಬರು ಚಿನ್ನದ ಸರ ಆರ್ಡರ್ ಮಾಡಿದ್ದರು.‌ ಡಿಸ್ ಪ್ಲೇ ನಲ್ಲಿ ಹಾಕಲಾಗಿದ್ದ ಚಿನ್ನದ ಸರ ಮಾಯವಾಗಿತ್ತು‌‌.‌‌ ಅಂಗಡಿಯಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ‌.‌ ಅನುಮಾನ ಮೇರೆಗೆ ಸಿಸಿಟಿವಿಯಲ್ಲಿ‌ ಪರಿಶೀಲಿಸಿದಾಗ ಸೇಲ್ಸ್ ಮ್ಯಾನ್ ಚೇತನ್ ನಾಯ್ಡು ಸರ ಕಳ್ಳತನ ಮಾಡಿರುವುದು ಗೊತ್ತಾಗಿತ್ತು.

ಇದನ್ನೂ ಓದಿ: ಸಿಂಧನೂರು: ಲಾರಿ-ಕಾರು ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ನಾಲ್ವರ ದುರ್ಮರಣ 

ಯಶವಂತಪುರ‌ ಪೊಲೀಸ್ ಠಾಣೆ(Yashwantapur police station)ಗೆದೂರು ನೀಡಿದ ಮೇರೆಗೆ ತನಿಖೆ ನಡೆಸಿ ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ಒಂದು ವರ್ಷದಲ್ಲಿ ಕಳ್ಳತನ‌‌ ಮಾಡುತ್ತಿದ್ದು,ಗೊತ್ತಾಗಿದೆ. ಕದ್ದ ಮಾಲನ್ನ ಸ್ನೇಹಿತ ವಿಜಯ್ ಮುಖಾಂತರ ಮಾರಾಟ ಮಾಡುತ್ತಿದ್ದೆವು ಅಂತ ಒಪ್ಪಿಕೊಂಡಿದ್ದಾನೆ. ವಿಶೇಷ ಅಂದ್ರೆ ಇದೇ ಚಿನ್ನಾಭರಣ ಮಾಡಿ ಮೋಜು ಮಸ್ತಿ,ಹುಡ್ಗಿರ ಸಹವಾಸ ಇಟ್ಟುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ನೀಡಿದ ಮಾಹಿತಿ ಮೇರೆಗೆ ವಿಜಯ್ ನನ್ನ ಬಂಧಿಸಲಾಗಿದೆ ಅಂತ ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ಪಾಟೀಲ್ ಹೇಳಿದ್ರು. ಇನ್ನು ಚೇತನ್ ಸ್ನೇಹಿತನಾಗಿರೋ ವಿಜಯ್ ಗೆ ಮರೆಯೋ ಕಾಯಿಲೆ ಇದೆ..ಹೀಗಾಗಿ ಇನ್ನು 100 ಗ್ರಾಂ ಗೋಲ್ಡ್ ಎಲ್ಲಿದೆ ಅಂತ ಗೊತ್ತಾಗಿಲ್ಲ.

click me!