
ಆಗ್ರಾ (ಮಾ.1) ದೇಶಾದ್ಯಂತ ಸುದ್ದಿ ಮಾಡಿದ್ದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಸುವ ಮುನ್ನವೇ ಆಗ್ರಾದಲ್ಲಿ ಟೆಕ್ಕಿಯೊಬ್ಬರು ಪತ್ನಿ ವಿರುದ್ಧ ಕಿರುಕುಳ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಟಿಸಿಎಸ್ ಉದ್ಯೋಗಿ ಮಾನವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಮಾನವ್ ಮತ್ತು ನಿಕಿತಾ ಕಳೆದ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದರು. ಮುಂಬೈನಲ್ಲಿ ನೆಲೆಸಿದ್ದ ದಂಪತಿ ದಾಂಪತ್ಯ ಕಲಹದಿಂದ ಆಗ್ರಾಕ್ಕೆ ಹಿಂದಿರುಗಿದ್ದರು.
ಈ ನಡುವೆಯೇ ಫೆ.24ರಂದು ಮಾನವ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ವಿಡಿಯೋ ಮಾಡಿ, ಪತ್ನಿ ಕಿರುಕುಳ ಸಾವಿಗೆ ಕಾರಣ ಎಂದಿದ್ದಾನೆ. ಜತೆಗೆ ‘ಪುರುಷರ ಬಗ್ಗೆಯೂ ಯೋಚಿಸಿ.ಇಲ್ಲಿದ್ದರೆ ಅಪರಾಧಿಯಾಗಲೂ ಯಾವುದೇ ಪುರುಷ ಉಳಿಯುವುದಿಲ್ಲ’ ಎಂದಿದ್ದಾನೆ.
ಆರೋಪ ಸುಳ್ಳು- ಪತ್ನಿ: ಆದರೆ ನಿಕಿತಾ ಆರೋಪ ನಿರಾಕರಿಸಿದ್ದು, ‘ಗಂಡ ಅತಿಯಾಗಿ ಕುಡಿಯುತ್ತಿದ್ದ. ಹಲವು ಸಲ ಆತ್ಮಹತ್ಯೆಗೆ ಯತ್ನಿಸಿದ್ದ. ಕುಡಿದ ಬಳಿಕ ಹಲ್ಲೆ ಮಾಡುತ್ತಿದ್ದ. ಅತ್ತೆ-ಮಾವನಿಗೆ ಈ ಬಗ್ಗೆ ಹೇಳಿದ್ದರೂ ನಿರ್ಲಕ್ಷಿಸಿದ್ದರು’ ಎಂದಿದ್ದಾಳೆ. ತನ್ನ ವಿರುದ್ಧ ಕೇಳಿ ಬಂದಿರುವ ಅಕ್ರಮ ಸಂಬಂಧದ ಆರೋಪವನ್ನೂ ನಿರಾಕರಿಸಿದ್ದಾಳೆ.
Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?
ಈ ಸಂಬಂಧ ಟೆಕ್ಕಿ ತಂದೆ, ಸೊಸೆ ವಿರುದ್ಧ ದೂರು ದಾಖಲಿಸಿದ್ದು, ಇದುವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ.
ಬೆಂಗಳೂರಿನಲ್ಲಿ ಉತ್ತರ ಭಾರತದ ಟೆಕ್ಕಿಯ ದುರಂತ ಅಂತ್ಯ; ಹೆಂಡತಿಯ ಕರಾಳತೆ ಬಿಚ್ಚಿಟ್ಟ ಡೆತ್ ನೋಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ