ಕಾಲುವೆಯಲ್ಲಿ ಜಾರಿಬಿದ್ದು ಬಾಲಕ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಚಿಕ್ಕ ಅಸಂಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ವಿಜಯಪುರ (ಫೆ.22) : ಕಾಲುವೆಯಲ್ಲಿ ಜಾರಿಬಿದ್ದು ಬಾಲಕ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಚಿಕ್ಕ ಅಸಂಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕಲ್ಲಯ್ಯ ಹಿರೇಮಠ(Kallaiah Hiremath)(13) ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ಬಾಲಕ. ನಿನ್ನೆ ಶಾಲೆಯಿಂದ ಮನೆಗೆ ಬಂದಿದ್ದ ಬಾಲಕ. ಬಳಿಕ ತಂದೆಯನ್ನ ಕಾಣಲು ಜಮೀನಿಗೆ ತೆರಳಿದ್ದ. ಈ ಹಿಂದೆಯೂ ತಂದೆಯಿಂದ ಜಮೀನಿಗೆ ಹೋಗುತ್ತಿದ್ದ ಬಾಲಕ. ನಿನ್ನೆ ಹೊರಟ ವೇಳೆ ತುಂಬಿ ಹರಿಯುತ್ತಿದ್ದ ಮುಳವಾಡ ಏತ ನೀರಾವರಿ(Mulavada lift irrigation) ಯೋಜನೆ ಮುಖ್ಯ ಕಾಲುವೆಗೆ ಬಿದ್ದಿದ್ದಾನೆ. ಈಜು ಬಾರದ ಬಾಲಕ ಕಾಲುವೆಯಿಂದ ಹೊರಬರಲಾಗದೆ ಮುಳುಗಿ ಮೃತಪಟ್ಟಿದ್ದಾನೆ.
undefined
ಕೌಟುಂಬಿಕ ದೌರ್ಜನ್ಯದ ಡಿವೋರ್ಸ್: ಪತ್ನಿ ಜೀವನಾಂಶ ಪಡೆಯಲು ಅರ್ಹಳೆಂದ ಬಾಂಬೆ ಹೈ
ಜಮೀನಿನಿಂದ ತಂದೆ ಮನೆಗೆ ಬಂದರೂ ಬಾಲಕ ಹಿಂದಿರುಗಿಲ್ಲ. ಹೀಗಾಗಿ ಅನುಮಾನಗೊಂಡ ಪೋಷಕರು ಸುತ್ತಮುತ್ತ ಹುಡುಕಾಡಿದ್ದಾರೆ. ಜಮೀನಿಗೆ ಹೋಗಿಬಂದಿದ್ದಾರೆ ಅಲ್ಲೆಲ್ಲೂ ಕಾಣಿಸದ ಮಗ. ಇಂದು ಬೆಳಗ್ಗೆ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಘಟನೆ ಮಾಹಿತಿ ತಿಳಿದು ಕೊಲ್ಹಾರ ಪೊಲೀಸರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ತಾಪ್ತಿ ಘಟನೆ ನಡೆದಿದೆ.
ಕೌಟುಂಬಿಕ ಕಲಹದಿಂದ ನೊಂದು ಗೃಹಿಣಿ ಆತ್ಮಹತ್ಯೆ
ಬೆಂಗಳೂರು : ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಬೇಸರಗೊಂಡು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಯ್ಯಪ್ಪ ನಗರದ ನಿವಾಸಿ ಸಾಯಿ ಸುಮನಾ (26) ಮೃತ ದುರ್ದೈವಿ. ಮನೆಯಲ್ಲಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಸಾಯಿಸುಮನಾ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಮೃತಳ ಪತಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೌಟುಂಬಿಕ ಕಲಹ: ಈ ವಾಸ್ತು ಟಿಪ್ಸ್ ಫಾಲೋ ಮಾಡಿದರೆ ಸಮಸ್ಯೆಗೆ ಸಿಗುತ್ತೆ ಪರಿಹಾರ!
ಐದು ವರ್ಷಗಳ ಹಿಂದೆ ಕೋಲಾರ ಜಿಲ್ಲೆ ಗೊಂಡಾಪುರದ ವೇದಾಂತ್ ಕುಮಾರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಸಾಯಿಸುಮನಾ ಪ್ರೇಮ ವಿವಾಹವಾಗಿದ್ದು, ದಂಪತಿಗೆ ಮೂರು ವರ್ಷದ ಗಂಡು ಮಗುವಿದೆ. ಮನೆ ಸಮೀಪದಲ್ಲಿ ವೇದಾಂತ್ ಪಾನಿಪೂರಿ ಅಂಗಡಿ ನಡೆಸುತ್ತಿದ್ದ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಇದೇ ಕಾರಣಕ್ಕೆ ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು. ಅಂತೆಯೇ ಸೋಮವಾರ ರಾತ್ರಿ ಕೂಡಾ ವೇದಾಂತ್ ಹಾಗೂ ಸಾಯಿ ಸುಮನಾ ಮಧ್ಯೆ ಜಗಳವಾಗಿದೆ. ಇದಾದ ಬಳಿಕ ಊಟ ತರಲು ಮನೆಯಿಂದ ವೇದಾಂತ್ ಹೊರ ಹೋಗಿದ್ದಾನೆ. ಆ ವೇಳೆ ಸಾಯಿ ಸುಮನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ