
ಬೆಂಗಳೂರು (ನ.14): ಕಿಡಿಗೇಡಿಗಳು ದೇವಾಲಯದ ಗೋಪುರದ ವಿಗ್ರಹ ಹಾಗೂ ಆಯುಧಗಳನ್ನು ಮುರಿದು ವಿರೂಪಗೊಳಿಸಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿ ಸರ್ಕಲ್‌ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಗೋಪುರದ ಮೇಲ್ಭಾಗದಲ್ಲಿ ಸುಬ್ರಹ್ಮಣ್ಯಸ್ವಾಮಿ ವಿಗ್ರಹ, ಆಯುಧಗಳನ್ನು ದುಷ್ಕರ್ಮಿಗಳು ಮುರಿದು ಭಗ್ನಗೊಳಿಸಿದ್ದಾರೆ. ನ.8ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈ ದೇವಸ್ಥಾನ ನಿರ್ವಹಣೆ ಮಾಡುತ್ತಿರುವ ಬೊಮ್ಮನಹಳ್ಳಿ ಬೇಗೂರು ರಸ್ತೆಯ ಮಾರುತಿ ಯುವಕರ ಸಂಘದ ಕಾರ್ಯದರ್ಶಿ ಬಿ.ಜಿ.ಮುನಿರೆಡ್ಡಿ ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಎದುರೇ ಮೂತ್ರ ವಿಸರ್ಜನೆ : ಮುಸ್ಲಿಂ ಯುವಕನ ಬಂಧನ
ಪದೇ ಪದೆ ಹಿಂದು ದೇವರು, ದೇವಸ್ಥಾನಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸುತ್ತಿದ್ದ ಇದು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಪ್ರಕರಣಗಳು ನಡೆಯುತ್ತಿವೆ. ಇತ್ತೀಚಿಗಷ್ಟೇ ದೇವಾಲಯದೊಳಗೆ ದೇವಿಯ ಮೂರ್ತಿ ನಗ್ನ ಗೊಳಿಸಿ ವಿಕೃತಿ ಮೆರೆಯಲಾಗಿತ್ತು. ಅದಾದ ಬಳಿಕ ದೇವಾಲಯದ ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಮೂತವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ ದುಷ್ಕರ್ಮಿಗಳು. ಅಂತದೇ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಗಳ ಪತ್ತೆ ಹಚ್ಚಿ ಸೂಕ್ತ ಕ್ರಮಕ್ಕೆ ಭಕ್ತರು ಒತ್ತಾಯಿಸಿದ್ದಾರೆ. ದೀಪಾವಳಿಯಂಥ ಹಬ್ಬದಲ್ಲಿ ನಡೆದಿರುವುದು ಸಹಿಸಲಾಸಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಭಕ್ತರು.
ವಿಜಯೇಂದ್ರ ಪದಗ್ರಹಣಕ್ಕೆ ಹೋಗಲ್ಲ, ಬಿಜೆಪಿ ಬಿಟ್ಟರೂ ಬೇರೆ ಪಕ್ಷ ಸೇರಲ್ಲ: ಸಿಟಿ ರವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ