
ಕಾಸರಗೋಡು(ನ.13) ಮನೆಯಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಚಿಕ್ಕಪ್ಪನ ಕಾರು ಹರಿದ ದುರಂತ ಘಟನೆ ಕಾಸರಗೋಡಿನ ಉಪ್ಪಳದ ಸೊಂಕಾಲ್ ಬಳಿ ನಡಿದಿದೆ. ಇಬ್ಬರು ಮಕ್ಕಳು ಆಡವಾಡುತ್ತಿದ್ದಾಗಲೇ ಈ ದುರ್ಘಟನೆ ನಡೆದು ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಒಂದೂವರೆ ವರ್ಷದ ಮಗು ಅಂಗಳದಲ್ಲಿ ಆಟವಾಡುತ್ತಿದ್ದರೆ, ಮಗುವಿನ ಅಣ್ಣ ಸೈಕಲ್ ತುಳಿಯುತ್ತಿದ್ದ. ಇದೇ ವೇಳೆ ಚಿಕ್ಕಪ್ಪನ ಕಾರು ಮನೆಗೆ ಆಗಮಿಸಿದೆ. ಅಂಗಳ ಮತ್ತೊಂದು ಬದಿಯಲ್ಲಿ ಕಾರು ನಿಲ್ಲಿಸಲು ಚಿಕ್ಕಪ್ಪ ಮುಂದಾಗಿದ್ದ. ಈ ವೇಳೆ ದುರ್ಘಟನೆ ನಡೆದು ಹೋಗಿದೆ.
ಭಾನುವಾರ(ನ.12) ಸಂಜೆ ಈ ಘಟನೆ ನಡೆದಿದೆ. ನಿಸ್ಸಾರ್ ಎಂಬುವಪರ ಪುತ್ರ ಒಂದೂವರೆ ವರ್ಷದ ಮಸ್ತೂರ್ ಜಿಶಾನ್ ಮೃತಪಟ್ಟ ದುರ್ದೈವಿ. ಜಿಶಾನ್ ಮನೆಗೆ ಚಿಕ್ಕಪ್ಪ ಕಾರಿನ ಮೂಲಕ ಆಗಮಿಸಿದ್ದಾರೆ. ಈ ವೇಳೆ ಆಂಗಳದಲ್ಲಿ ಇಬ್ಬರು ಆಟವಾಡುತ್ತಿರುವುದನ್ನು ಚಿಕ್ಕಪ್ಪ ಗಮನಿಸಿದ್ದಾರೆ. ಅಂಗಳದ ಮತ್ತೊಂದು ಬದಿಯಲ್ಲಿ ಕಾರು ಪಾರ್ಕ್ ಮಾಡಲು ಚಿಕ್ಕಪ್ಪ ಮುಂದಾಗಿದ್ದಾರೆ.
ಒಂದೂವರೆ ವರ್ಷದ ಮಗ ಕಾರಿನಿಂದ ಕೊಂಚ ದೂರದಲ್ಲಿತ್ತು. ಇತ್ತ ಮಗುವಿನ ಅಣ್ಣ ಸೈಕಲ್‌ನ್ನು ಮನೆ ಪಕ್ಕದಲ್ಲಿ ನಿಲ್ಲಿಸಲು ತೆರಳಿದ್ದ. ಇತ್ತ ಮಗು ಆಟವಾಡುತ್ತಿದ್ದ ಜಾಗದಿಂದ ನೇರವಾಗಿ ಕಾರಿನ ಮಂಭಾಗದಲ್ಲಿ ಬಂದು ನಿಂತಿದೆ. ಕಾರಿನೊಳಗಿದ್ದ ಚಿಕ್ಕಪ್ಪನಿಗೆ ಮಗು ಕಾಣಿಸಿಲ್ಲ. ಕಾರು ಮುಂದಕ್ಕೆ ತೆಗೆದಾಗ ಮಗುವಿನ ಮೇಲೆ ಹರಿದಿದೆ.
ಓಡೋಡಿ ಬಂದ ಮಗುವಿನ ಅಣ್ಣ ಕಾರಿನಡಿ ಸಿಲುಕಿದ್ದ ಮಗುವನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾನೆ. ಆರ್ತನಾದ, ಚೀರಾಟದಿಂದ ಕುಟುಂಬಸ್ಥರು ಹೊರಬಂದಿದ್ದಾರೆ. ತಕ್ಷಣವೇ ಕಾರಿನಡಿಯಲ್ಲಿ ಸಿಲುಕಿದ್ದ ಮಗುವನ್ನು ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಗು ಅಪಘಾತವಾದ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ವಾಯು ವಿಹಾರಿಗಳ ಮೇಲೆ ಹರಿದ ಕಾರು: ವೃದ್ಧೆ ಹಾಗೂ ಬಾಲಕಿಗೆ ಗಂಭೀರ ಗಾಯ
ನಿಸ್ಸಾರ್ ಮನಗೆ ಚಿಕ್ಕಪ್ಪ ಹೆಚ್ಚಾಗಿ ಕಾರಿನಲ್ಲೇ ಆಗಮಿಸುತ್ತಿದ್ದರು. ಈ ವೇಳೆ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿರುವುದು ಸಾಮಾನ್ಯವಾಗಿತ್ತು. ಆದರೆ ಕಳೆದ ಭಾನುವಾರ ದುರ್ಘಟನೆ ನಡೆದಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ