ರಾಜ್ಯದಲ್ಲಿ ಉದ್ಯಮಿಗಳಿಗೆ ಇನ್ವೆಸ್ಟಮೆಂಟ್ ಹೆಸ್ರಲ್ಲಿ ಆನ್ ಲೈನ್ ದೋಖಾ ಮಾಡ್ತಿದ್ದ ನೈಜೀರಿಯಾ ಮೂಲದ ಮೂವರನ್ನ ವಿಜಯಪುರ ಸಿಇಎಸ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ನ.13): ರಾಜ್ಯದಲ್ಲಿ ಉದ್ಯಮಿಗಳಿಗೆ ಇನ್ವೆಸ್ಟಮೆಂಟ್ ಹೆಸ್ರಲ್ಲಿ ಆನ್ ಲೈನ್ ದೋಖಾ ಮಾಡ್ತಿದ್ದ ನೈಜೀರಿಯಾ ಮೂಲದ ಮೂವರನ್ನ ವಿಜಯಪುರ ಸಿಇಎಸ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೂತು ಸ್ಥಳೀಯರನ್ನ ಬಳಿಸಿಕೊಂಡು ಬೃಹತ್ ಉದ್ದಿಮೆದಾರರಿಗೆ ವಂಚನೆ ಮಾಡ್ತಿದ್ದ ಈ ವಿದೇಶಿ ನೈಜೀರಿಯನ್ ತಂಡ ಈಗ ಖೆಡ್ಡಾಗೆ ಬಿದ್ದಿದೆ.
ಉದ್ಯಮಿಗಳೇ ಇವರ ಟಾರ್ಗೆಟ್, ಗುಮ್ಮಟನಗರಿಯಲ್ಲು ವಂಚನೆ: ಉದ್ಯಮಿಗಳನ್ನೆ ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದ ಈ ನೈಜೀರಿಯನ್ ತಂಡ ಗುಮ್ಮಟನಗರಿ ವಿಜಯಪುರದ ಉದ್ಯಮಿಯೊಬ್ಬರಿಗೆ ಮೈನಿಂಗ್ ಹೆಸರಲ್ಲಿ ಆನ್ ಲೈನ್ ಮೂಲಕ ವಂಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ನೈಜೇರಿಯನ್ ಪ್ರಜೆಗಳನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಕ್ರಿಪ್ಟೋ ಮೈನಿಂಗ್ ಮೂಲಕ ಹಣ ಹೂಡಿಕೆ ಮಾಡಿದರೆ ಅದಕ್ಕೆ ಇನ್ನೂರು ಪಟ್ಟು ಲಾಭ ಬರುತ್ತದೆ ಎಂದು ನಯವಾಗಿ ಉದ್ಯಮಿಯನ್ನು ನಂಬಿಸಲಾಗಿತ್ತು. ವಂಚಕರ ಮಾತಿಗೆ ಆಸೆ ಬಿದ್ದು ಅವರು ಹೇಳಿದಂತೆ ಹಣ ನೀಡಲಾಗಿತ್ತು. ಈ ಕಿಲಾಡಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಆ ಉದ್ಯಮಿಯಿಂದ 59 ಲಕ್ಷ ರು,ಗೂ ಹೆಚ್ಚು ಹಣವನ್ನು ಹಾಕಿಸಿಕೊಂಡಿದ್ದಾರೆ.
ಬರ, ಕರೆಂಟ್ ಕಣ್ಣಾಮುಚ್ಚಾಲೆ ನಡುವೆ ರೈತ ಸ್ನೇಹಿ ಯೋಜನೆ ಸ್ಥಗಿತ: ಅನ್ನದಾತರ ಆಕ್ರೋಶ!
ಬೆಂಗಳೂರಿನಲ್ಲಿ ಕುಂತೆ ವಂಚಿಸುತ್ತಿದ್ದ ನೈಜೀರಿಯನ್ ಗಳು: ಬೆಂಗಳೂರಲ್ಲಿದ್ದುಕೊಂಡೆ ಉದ್ಯಮಿಗಳಿಗೆ ಗಾಳ ಹಾಕುತ್ತಿದ್ದ ಈ ವಿದೇಶಿ ವಂಚಕರು ವಿಜಯಪುರ ಉದ್ಯಮಿಗೆ ವಂಚಿಸಿದ ಬಳಿಕ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಸಿಪಿಐ ರಮೇಶ ಅವಜಿ ಹಾಗೂ ತಂಡ ಬೆಂಗಳೂರಿನಲ್ಲಿ ಮೂವರು ನೈಜೇರಿಯನ್ ವ್ಯಕ್ತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬೆಂಗಳೂರಿನ ಸಿಕೆ ಪಾಳ್ಯದಲ್ಲಿ ವಾಸವಿದ್ದ ಒಸೆಮುದಿಮೆನ್ ಪೀಟರ್ (38), ಕೆ.ಆರ್. ಪುರಂನಲ್ಲಿದ್ದ ಎಮೆಕಾ ಹ್ಯಾಪಿ (40) ಹಾಗೂ ನೀಲಸಂದ್ರದ ನಿವಾಸಿಯಾಗಿದ್ದ ಒಬಿನ್ನಾ ಸ್ಟ್ಯಾನ್ಲಿ (42) ಬಂಧಿತರು.
ಕರೆಂಟ್ ಕೈಕೊಟ್ಟು ಸಿಕ್ಕಿಬಿದ್ದ ನೈಜೀರಿಯನ್ ಗ್ಯಾಂಗ್: ಇಡೀ ಪ್ರಕರಣದಲ್ಲಿ ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ನೈಜೀರಿಯನ್ ಮೂಲದ ವ್ಯಕ್ತಿಗಳು ಸಿಕ್ಕಿಬಿದ್ದಿದ್ದೆ ಅಚ್ಚರಿಯ ವಿಚಾರ. ಎಷ್ಟೆ ಹುಡುಕಿದ್ರು ವಿದೇಶಿ ಖದೀಮರು ಸಿಕ್ಕಿಬಿದ್ದಿರಲಿಲ್ಲ. ಈ ವಂಚನೆಯಲ್ಲಿ ತೊಡಗಿದ್ದ ಯಾರೊಬ್ಬರು ಪೋನ್ ಕಾಲ್ ಬಳಕೆ ಮಾಡ್ತಿರಲಿಲ್ಲ. ಎಲ್ಲವೂ ಸಹ ವಾಟ್ಸಾಪ್ ಕಾಲ್ ಮೂಲಕವೇ ನಡೆಯುತ್ತಿತ್ತು. ಹೀಗಾಗಿ ಪೊಲೀಸರಿಗೆ ಈ ನೈಜೀರಿಯನ್ ವಂಚಕರನ್ನ ಬಂಧಿಸೋದು ಕಷ್ಟವಾಗಿತ್ತು. ಆದ್ರೆ ನೈಜೀರಿಯನ್ ಆರೋಪಿಗಳ ಪೈಕಿ ಸಿ.ಕೆ ಪಾಳ್ಯದಲ್ಲಿದ್ದ ಪೀಟರ್ ಮನೆಯಲ್ಲಿ ಕರೆಂಟ್ ಕೈಕೊಟ್ಟಾಗ ಸರಿ ಮಾಡಲು ಎಲೆಕ್ಟ್ರಿಶಿಯನ್ ಒಬ್ಬನಿಗೆ ಕಾಲ್ ಮಾಡಿದ್ದಾನೆ. ಆಗ ಎಲೆಕ್ಟ್ರೀಶಿಯನ್ ನನ್ನ ಪತ್ತೆ ಮಾಡಿ ವಿಚಾರಿಸಿದಾಗ, ನೈಜೀರಿಯನ್ ವಂಚಕರು ಒಬ್ಬೊಬ್ಬರಾಗಿ ಸಿಕ್ಕಿಬಿದ್ದಿದ್ದಾರೆ.
ಕಳೆದ ತಿಂಗಳು ಕೀನ್ಯಾ ವಂಚಕನನ್ನ ಬಂಧಿಸಿದ್ದ ಸಿಪಿಐ ಅವಜಿ: ಈ ಪ್ರಕರಣಕ್ಕೆ ಸಂಬಂಧಿಸಿ ಇದಕ್ಕೂ ಮುಂಚೆ ಕಳೆದ ತಿಂಗಳ 10ರಂದು ಒಬ್ಬ ಕೀನ್ಯಾ ಪ್ರಜೆ ಸೇರಿ ಐವರನ್ನು ಸಹ ಸಿಇಎನ್ ಇನ್ಸ್ಪೆಕ್ಟರ್ ರಮೇಶ ಅವಜಿ ಬಂಧಿಸಿದ್ದರು. ಬಳಿಕ ತೀವ್ರ ಕಾರ್ಯಾಚರಣೆ ನಡೆಸಿ ಮೂವರು ವಂಚಕರು ಸಿಕ್ಕಿಹಾಕಿಕೊಂಡಿದ್ದು, ತನಿಖೆ ಮುಂದುವರಿದಿದೆ. ಕೃತ್ಯಕ್ಕೆ ಬಳಸಲಾದ 21 ಮೊಬೈಲ್, 18 ಸಿಮ್ ಕಾರ್ಡ್, ಒಂದು ಲ್ಯಾಪ್ ಟಾಪ್, ಎಟಿಎಂ ಕಾರ್ಡ್ ಸೇರಿ ಅನೇಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬರದ ಬರೆಯ ನಡುವೆ ದ್ರಾಕ್ಷಿ ಬೆಳೆದ ರೈತರಿಗೆ ಇನ್ಸುರೆನ್ಸ್ ಶಾಕ್: ವಿಮಾ ಕಂಪನಿಯ ಮಹಾ ದೋಖಾ, ರೈತರೇ ಕಂಗಾಲು!
ಸಿಪಿಐ ರಮೇಜಿ ಕಾರ್ಯಕ್ಕೆ ಹಿರಿಯ ಅಧಿಕಾರಿಗಳ ಶ್ಲಾಘನೆ: ಸಿಇಎನ್ ಇನ್ಸ್ಪೆಕ್ಟರ್ ರಮೇಶ ಅವಜಿ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಅದ್ರಲ್ಲು ಕ್ಲಿಷ್ಟಕರವಾಗಿದ್ದ ಆನ್ ಲೈನ್ ವಂಚನೆ ಪ್ರಕರಣದಲ್ಲಿಯು ಸಹ ವಿದೇಶಿ ವಂಚಕರನ್ನ ಬಂಧಿಸಿ ಕರೆತಂದದ್ದು ಗಮನ ಸೆಳೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಬೈರ್ ಕ್ರೈಂ ಪೊಲೀಸ್ ಇನ್ಸಪೆಕ್ಟರ್ ರಮೇಶ ಅವಜಿಯವರ ನೇತೃದಲ್ಲಿ ತಂಡವನ್ನು ರಚಿಸಿದ್ದರು. ತಂಡದ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.