ಹೋಂ ವರ್ಕ್‌ ಮಾಡದಿದ್ದಕ್ಕೆ 7 ವರ್ಷದ ವಿದ್ಯಾರ್ಥಿಗೆ ಹೊಡೆದು ಸಾಯಿಸಿದ ವಸತಿಶಾಲೆ ಮಾಲೀಕ..!

Published : Mar 25, 2023, 02:55 PM ISTUpdated : Mar 25, 2023, 03:03 PM IST
ಹೋಂ ವರ್ಕ್‌ ಮಾಡದಿದ್ದಕ್ಕೆ 7 ವರ್ಷದ ವಿದ್ಯಾರ್ಥಿಗೆ ಹೊಡೆದು ಸಾಯಿಸಿದ ವಸತಿಶಾಲೆ ಮಾಲೀಕ..!

ಸಾರಾಂಶ

ಹೋಂ ವರ್ಕ್‌ ಮಾಡದ ಕಾರಣಕ್ಕೆ ಆರೋಪಿ ಸುಜೀತ್ ಕುಮಾರ್ ಬುಧವಾರ ಮರದ ಕೋಲಿನಿಂದ ಥಳಿಸಿದ್ದರು ಎಂದು ವಿದ್ಯಾರ್ಥಿಯ ಸ್ನೇಹಿತನೊಬ್ಬ ತಿಳಿಸಿದ್ದಾನೆ. ಮೃತ ವಿದ್ಯಾರ್ಥಿಯನ್ನು 7 ವರ್ಷದ ಆದಿತ್ಯ ಎಂದು ಗುರುತಿಸಲಾಗಿದೆ.

ಪಾಟ್ನಾ (ಮಾರ್ಚ್ 25, 2023): ಹೋಮ್‌ವರ್ಕ್ ಮಾಡಲು ವಿಫಲವಾದ ಕಾರಣಕ್ಕೆ ವಸತಿ ಶಾಲೆಯ ಮಾಲೀಕರು ಥಳಿಸಿದ ಒಂದು ದಿನದ ನಂತರ ಬಿಹಾರದಲ್ಲಿ 7 ವರ್ಷದ ವಿದ್ಯಾರ್ಥಿ ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಅವರು ಥಳಿಸಿದ ಬಳಿಕವೇ ಬಾಲಕ ಮೃತಪಟ್ಟಿದ್ದಾನೆ ಎಂದು ವಿದ್ಯಾರ್ಥಿಯ ಸ್ನೇಹಿತರು ತಿಳಿಸಿದ್ದಾರೆ. ಬಿಹಾರದ ಸಹರ್ಸಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ.

ಹೋಂ ವರ್ಕ್‌ ಮಾಡದ ಕಾರಣಕ್ಕೆ ಆರೋಪಿ ಸುಜೀತ್ ಕುಮಾರ್ ಬುಧವಾರ ಮರದ ಕೋಲಿನಿಂದ ಥಳಿಸಿದ್ದರು ಎಂದು ವಿದ್ಯಾರ್ಥಿಯ ಸ್ನೇಹಿತನೊಬ್ಬ ತಿಳಿಸಿದ್ದಾನೆ. ಮೃತ ವಿದ್ಯಾರ್ಥಿಯನ್ನು 7 ವರ್ಷದ ಆದಿತ್ಯ ಎಂದು ಗುರುತಿಸಲಾಗಿದೆ. ಹಾಸ್ಟೆಲ್‌ನಲ್ಲಿ ಅವನೊಂದಿಗೆ ವಾಸಿಸುತ್ತಿದ್ದ ಆದಿತ್ಯನ ಸ್ನೇಹಿತರು ಮತ್ತು ಹಿರಿಯರು ಮರುದಿನ ಬೆಳಿಗ್ಗೆ ಅವನು ಹಾಸಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನ್ನು ಕಂಡುಕೊಂಡರು.

ಇದನ್ನು ಓದಿ: ಕೋರ್ಟ್ ಹಾಲ್‌ನಲ್ಲೇ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪಾಪಿ ಪತಿ..!

ಬಳಿಕ, ಅವರು ಆದಿತ್ಯನನ್ನು ಸುಜೀತ್ ಕುಮಾರ್ ಬಳಿಗೆ ಕರೆದೊಯ್ದಾಗ, ಆದಿತ್ಯ ಮೃತಪಟ್ಟಿದ್ದಾನೆಂದು ಅವರು ಕಂಡುಕೊಂಡರು. ಬಳಿಕ, ಅವನ ಮೃದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಸಲಹೆ ನೀಡಿದರು ಎಂದು 4 ನೇ ತರಗತಿ ವಿದ್ಯಾರ್ಥಿ ಹೇಳಿದರು. ನಂತರ, ವಿದ್ಯಾರ್ಥಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಸುಜೀತ್‌ ಕುಮಾರ್ ಅವರು ಬಾಲಕನ ತಂದೆಗೆ ತಿಳಿಸಿದ್ದಾರೆ. ಆದರೆ ಅವರು ತಮ್ಮ ಮಗನ ಶಾಲೆಗೆ ತಲುಪುವ ಮೊದಲು, ಆದಿತ್ಯ ಮೃತಪಟ್ಟಿದ್ದಾರನೆ ಎಂದು ವೈದ್ಯರು ಆಸ್ಪತ್ರೆಯಲ್ಲಿ ಘೋಷಿಸಿದ್ದರು.

ನರ್ಸಿಂಗ್ ಹೋಂಗೆ ಕರೆತಂದಾಗ ಅದಾಗಲೇ ಬಾಲಕ ಮೃತಪಟ್ಟಿದ್ದ ಎಂದು ಡಾ.ದಿನೇಶ್ ಕುಮಾರ್ ತಿಳಿಸಿದರು. ಅವನ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ, ಮರಣೋತ್ತರ ಪರೀಕ್ಷೆಯ ನಂತರವೇ ಅವನ ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಬಹುದು ಎಂದೂ ಅವರು ಹೇಳಿದರು.

ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ: ವಿವಾಹಿತ ಸೋದರಿಯನ್ನೇ ಕೊಂದು ನದಿಗೆಸೆದ ಸೋದರರು!

ಆದರೆ ವೈದ್ಯರ ಹೇಳಿಕೆಗೆ ವ್ಯತಿರಿಕ್ತವಾಗಿ ಬಾಲಕನ ದೇಹವು ಹೊಡೆತದಿಂದ ಊದಿಕೊಂಡಿದೆ ಎಂದು ಮತ್ತೊಬ್ಬ ವಿದ್ಯಾರ್ಥಿಯು ಹೇಳಿದ್ದಾನೆ. ಹೋಂವರ್ಕ್‌ ಮಾತ್ರವಲ್ಲದೆ, ಆದಿತ್ಯ ತನ್ನ ಪಾಠಗಳನ್ನು ಕಂಠಪಾಠ ಮಾಡದ ಕಾರಣಕ್ಕೆ ಸತತ ಎರಡು ದಿನ ಆತನಿಗೆ ಥಳಿಸಲಾಗಿದೆ ಎಂದೂ ಅವರು ಹೇಳಿದರು. ಈ ಮಧ್ಯೆ, ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದ ಸುಜೀತ್ ಕುಮಾರ್ ಈಗ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. 

ಇನ್ನು, ತಮ್ಮ ಮಗ ಆದಿತ್ಯ ಮೃತಪಟ್ಟಿರುವ ಬಗ್ಗೆ ಸಂತ್ರಸ್ತೆಯ ತಂದೆ ಪ್ರಕಾಶ್ ಯಾದವ್ ಮಾತನಾಡಿದ್ದು, ಆದಿತ್ಯ ಕೊನೆಯ ಬಾರಿಗೆ ಹೋಳಿಗೆ ನಮ್ಮ ಮನೆಗೆ ಭೇಟಿ ನೀಡಿದ್ದ ಮತ್ತು ಮಾರ್ಚ್ 14 ರಂದು ತಮ್ಮ ಹಾಸ್ಟೆಲ್‌ಗೆ ಮರಳಿದ್ದ. ನನ್ನ ಮಗ ಶಾಲೆಯಲ್ಲಿ ಮೂರ್ಛೆ ಬಿದ್ದಿದ್ದಾನೆ ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಗುರುವಾರ ನನಗೆ ತಿಳಿಸಲಾಯಿತು. ಆದರೆ ನಾನು ತಲುಪುವ ಮೊದಲು ಖಾಸಗಿ ಚಿಕಿತ್ಸಾಲಯದಲ್ಲಿ ಆದಿತ್ಯ ಮೃತಪಟ್ಟಿದ್ದು, ಸುಜೀತ್ ಕುಮಾರ್ ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಅಯ್ಯೋ ಕಂದಮ್ಮ..! 4 ದಿನದ ಹಸುಗೂಸನ್ನು ತುಳಿದು ಸಾಯಿಸಿದ ಪೊಲೀಸರು: ತನಿಖೆಗೆ ಆದೇಶಿಸಿದ ಸಿಎಂ

ಈ ಸಂಬಂಧ ಪ್ರಕಾಶ್‌ ಯಾದವ್ ಅವರು ಪೊಲೀಸ್ ದೂರು ದಾಖಲಿಸಿದ್ದು ಮತ್ತು ಮುಂದಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 2 ತಿಂಗಳ ಕಂದಮ್ಮನನ್ನು ಆಸ್ಪತ್ರೆಯ 3ನೇ ಮಹಡಿಯಿಂದ ಎಸೆದು ಕೊಂದ ಹೆತ್ತ ತಾಯಿ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ