
ಹೊಳೆಹೊನ್ನೂರು (ಆ.2): ದೇವಸ್ಥಾನದ ಅರ್ಚಕರಿಗೆ ನೀಡಿದ್ದ ಸರ್ಕಾರಿ ಚೆಕ್, ಅಮಾನ್ಯ (ಬೌನ್ಸ್) ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದಲ್ಲಿರುವ ಮುಜರಾಯಿ ಇಲಾಖೆಗೆ ಒಳಪಟ್ಟ ಪಾರ್ವತಿ ಬ್ರಹ್ಮೇಶ್ವರದ ದೇಗುಲದ ಅರ್ಚಕ ಕೆ.ಆರ್.ಆನಂದ್ ಅವರ ಮೂರು ತಿಂಗಳ ವೇತನ ಹಾಗೂ ಇತರೆ ನಿರ್ವಹಣೆ ವೆಚ್ಚ ಸೇರಿ ಒಟ್ಟು ₹35,600 ಮೌಲ್ಯದ ಚೆಕ್ ಅನ್ನು ಜು.1ರ ದಿನಾಂಕ ನಮೂದಿಸಿ ಶಿವಮೊಗ್ಗ ತಹಸೀಲ್ದಾರ್ ಸೀಲು ಸಹಿ ಮಾಡಿ ಕೊಟ್ಟಿದ್ದರು.
ಇದನ್ನೂ ಓದಿ: ಬೆಳಗಾವಿ: ರೋಗಿಯನ್ನು ಆಸ್ಪತ್ರೆಗೆ ಸೇರಿಸಲು8 ಕಿ.ಮೀ. ಚಟ್ಟದ ಮೇಲೆ ಹೊತೊಯ್ದರು!
ಇತ್ತೀಚೆಗೆ ನಗದೀಕರಣಕ್ಕೆ ಚೆಕ್ ಅನ್ನು ಕೂಡ್ಲಿ ಕರ್ನಾಟಕ ಬ್ಯಾಂಕಿಗೆ ನೀಡಲಾಗಿತ್ತು. ಆದರೆ ಚೆಕ್ ನೀಡಲಾಗಿದ್ದ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೆ ಇರುವುದರಿಂದ ಅಮಾನ್ಯಗೊಂಡಿದೆ ಎಂದು ಬ್ಯಾಂಕಿನಿಂದ ಹಿಂಬರಹ ನೀಡಿ ಚೆಕ್ ವಾಪಾಸ್ಸು ನೀಡಿದ್ದಾರೆ.
ಜೀವನ ನಿರ್ವಹಣೆ ಮಾಡುವುದು ಹಾಗೂ ಕರ್ತವ್ಯ ನಿರ್ವಹಿಸುವುದು ಕಷ್ಟಕರ ಆಗಿದ್ದು, ಮುಂದಿನ ದಿನಗಳಲ್ಲಿ ಇದು ಸರಿಯಾಗದೆ ಇದ್ದಲ್ಲಿ ಕರ್ತವ್ಯದಿಂದ ಮುಕ್ತಿ ಪಡೆಯುವುದಾಗಿ ಅರ್ಚಕ ಕೆ.ಆರ್.ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ