ಸಂಬಂಧಿಯೊಬ್ಬರ ಮನೆಗೆ ಬರ್ತಡೇ ಪಾರ್ಟಿಗೆ ಹೊರಟಿದ್ದ ಇಬ್ಬರು ಯುವಕರು ರಸ್ತೆ ಮಧ್ಯದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ರಸ್ತೆ ಮಧ್ಯೆ ಕಂದಕ ಬಿದ್ದಿದ್ದರೂ ಯಾವುದೇ ಸೂಚನೆ ಫಲಕ ಹಾಕದಿರುವುದು ಸಾವಿಗೆ ಕಾರಣವಾಯಿತೇ?
ಗದಗ (ಸೆ.28) : ತಾಲೂಕಿನ ನಾಗಾವಿ ಗ್ರಾಮದ ಹೊರವಲಯದಲ್ಲಿ ರಸ್ತೆ ಮಧ್ಯದ ಕಂದಕದಲ್ಲಿ ಬಿದ್ದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.. ಲಕ್ಕುಂಡಿ ಗ್ರಾಮದ ಮಂಜುನಾಥ್ ಮಾದರ್ (19) ಬಸವರಾಜ್ ಜವಳಬೆಂಚಿ (17) ಮೃತ ಯುವಕರು ಎಂದು ಗುರುತಿಸಲಾಗಿದೆ.. ಲಕ್ಕುಂಡಿಯಿಂದ ಎಲೆಸಿರುಂದ ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೊರಟಿದ್ದ ಇಬ್ಬರು ಕಂದಕದಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಕಂದಕಕ್ಕೆ ಉರುಳಿದ ಬಸ್: 11 ಜನರ ದಾರುಣ ಸಾವು: ಸೇನೆಯಿಂದ ರಕ್ಷಣಾ ಕಾರ್ಯ
undefined
ಬರ್ತ್ ಡೇ ಆಚರಣೆಗೆ ಹೊರಟಿದ್ದ ಯುವಕರು:
ಮಂಜುನಾಥ್ ಮಾದರ್(Manjunat Madara) ಅವರ ಸಂಬಂಧಿಕರ ಮನೆಗೆ ಬರ್ತ್ ಡೇ(Birthday) ಆಚರಣೆಗೆ ಸ್ನೇಹಿತ ಬಸವರಾಜ್(Basavaraj) ಜೊತೆ ಹೊರಟಿದ್ರು.. ದಾರಿ ಮಧ್ಯೆ ಕೇಕ್ ತೆಗೆದುಕೊಂಡು ಎಲೆಸಿರುಂದಕ್ಕೆ ಹೊರಟಿದ್ರು. ಪ್ರಯಾಣದ ವೇಳೆ ನಾಗಾವಿ-ಬೆಳದಡಿ ಮಧ್ಯ ರಸ್ತೆ ಕಂದಕ ಬಿದ್ದಿರೋದು ಅವರಿಗೆ ಗೊತ್ತಾಗಿರಲಿಲ್ಲ. ಸಂಜೆ ಏಳು ಗಂಟೆ ಸುಮಾರಿಗೆ ಕತ್ತಲೆಯಲ್ಲೇ ಬೈಕ್ ಸಾಗುವಾಗ ಕಂದಕ ಗಮನಿಸದೇ ಬಿದ್ದು ದುರ್ಘಟನೆ ನಡೆದಿದೆ.
ರಸ್ತೆಗೆ 50 ಅಡಿ ಕಂದಕ ಬಿದ್ದರೂ ಎಚ್ಚರಿಕೆ ಫಲಕ ಇಲ್ಲ..!
ಬ್ಯಾರಿಕೇಡ್, ಸುರಕ್ಷತಾ ಫಲಕ ಅಳವಡಿಸದಿರುವುದೇ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.. ಕಂದಕ ಬಿದ್ದು ಸುಮಾರು ತಿಂಗಳು ಕಳೆದಿದೆ. ಹೀಗಿದ್ರೂ ಬ್ಯಾರಿಕೇಡ್ ಹಾಕಿಲ್ಲ.. ಪೊಲೀಸರ ನಿಯೋಜನೆ ಮಾಡ್ಲಿಲ್ಲ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳೇ ಸಾವಿಗೆ ನೇರಹೊಣೆ ಎಂದು ಗ್ರಾಮದ ಮಂಜುನಾಥ್ ಚಲವಾದಿ ಆರೋಪಿಸ್ತಿದಾರೆ. ಕಂದಕಕ್ಕೆ ಉರುಳಿದ ಬಸ್ 9 ಶಾಲಾ ಮಕ್ಕಳು ಸೇರಿ 16 ಸಾವು!
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಮೃತದೇಹ ಮೇಲೆತ್ತದಿರಲು ಗ್ರಾಮಸ್ಥರ ನಿರ್ಧಾರ: ಮೃತ ದಲಿತ ಯುವಕರ ಕುಟುಂಬಕ್ಕೆ ಸಹಾಯ ಆಗ್ಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ಕೊಡ್ಬೇಕು ಆಗ್ಲೆ ಮೃತ ದೇಹ ಮೇಲೆತ್ತಲು ಅವಕಾಶ ಕೊಡ್ತೀವಿ ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದಾರೆ.. ಇತ್ತ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಗ್ರಾಮಾಂತರ ಪೊಲೀಸ್ ಸ್ಟೇಷನ್ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.