
ಚಿಕ್ಕಬಳ್ಳಾಪುರ (ಸೆ.28): ಬುದ್ಧಿವಾದದ ಹೇಳಿದ್ದಕ್ಕೆ ಕಿಡಿಗೇಡಿಯೊಬ್ಬ ಪೊಲೀಸ್ ಅಧಿಕಾರಿಯ ಸ್ಕೂಟಿಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ.
ಖಲೀಂ ಉಲ್ಲಾ ಬೆಂಕಿಯಿಟ್ಟ ಭೂಪ. ಗುಡಿಬಂಡೆನಗರದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವ ಆರೋಪಿ. ತನ್ನ ಸಹೋದರನೊಂದಿಗೆ ಜಗಳ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯಲ್ಲೂ ಕೂಗಾಟ ನಡೆಸಿದ್ದ ಆರೋಪಿ. ರಾತ್ರಿವೇಳೆ ಗಸ್ತಿನಲ್ಲಿದ್ದ ಎಎಸ್‌ಐ ನಂಜುಂಡ ಶರ್ಮಾ ಅವರು ಬೈದು ಬುದ್ಧಿವಾದ ಹೇಳಿದ್ದರು. ಇಷ್ಟಾದರೂ ಸುಮ್ಮನಾಗದ ಅರೋಪಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಮತ್ತೆ ಸಹೋದರನ ಮನೆಗೆ ಬಂದು ಕಿರಿಕ್ ಮಾಡಿದ್ದಾನೆ. ಮನೆ ಮುಂದೆ ನಿಲ್ಲಿಸಿದ್ದ ಸಹೋದರನ ಕಾರಿನ ಗಾಜು ಒಡೆದು ಪುಂಡಾಟ ಮಾಡಿದ್ದಾನೆ. ಮತ್ತೆ ಪೊಲೀಸರು ಹಿಂಬಾಲಿಸಿ ಬಂದು ಆರೋಪಿ ಖಲೀಂ ಉಲ್ಲಾಗೆ ಬೈದು ವಾರ್ನಿಂಗ್ ಕೊಟ್ಟಿದ್ದಾರೆ.
ಹಣ ಎಣಿಸೋಕೆ ಬರೊಲ್ಲವೆಂದು ರೇಗಿಸಿದ ಸ್ನೇಹಿತನನ್ನೇ ಕೊಲೆಗೈದ ಕ್ಯಾಷಿಯರ್
ಆದರೆ ಆಸಾಮಿ ಸಹೋದರನ ಮೇಲಿನ ಸಿಟ್ಟು ಪೊಲೀಸರ ಮೇಲೆ ತಿರುಗಿಸಿದ್ದಾನೆ. ತನಗೆ ಬೈದು ಬುದ್ಧಿ ಹೇಳಿದ ಎಎಸ್‌ಐ ನಂಜುಂಡ ಶರ್ಮಾರನ್ನೇ ಹಿಂಬಾಲಿಸಿಕೊಂಡು ಹೋಗಿರುವ ಆರೋಪಿ, ಎಎಸ್‌ಐ ಸ್ಕೂಟಿ ಮನೆ ಮುಂದೆ ನಿಲ್ಲಿಸಿ ಒಳ ಹೋಗ್ತಿದ್ದಂತೆ ಸ್ಕೂಟಿಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸರಿಗೂ ಹೆದರದ ಭೂಪರಪ್ಪ ಇವರು!
12ರ ಬಾಲೆಯನ್ನು ರೇಪ್ ಮಾಡಿ ರಸ್ತೆಗೆಸೆದ ದುರುಳರು: ಕಣ್ಣೀರಿಡುತ್ತ 8 ಕಿಮೀ ನಡೆದ ಹುಡುಗಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ