ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದೃಶ್ಯ ಸಿನಿಮಾದ ಸ್ಟೈಲಲ್ಲಿ ಮಗಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಲೆಗೈದ ತಂದೆ ಪೊಲೀಸರಿಂದ ತಪ್ಪಿಸಿಕೊಳ್ಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹುಬ್ಬಳ್ಳಿ (ಸೆ.28): ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ದೃಶ್ಯಂ ಸಿನಿಮಾದಲ್ಲಿ ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಕೊಲೆ ಮಾಡಿದರೂ, ಕೊಲೆ ಪ್ರಕರಣದಿಂದ ಇಡೀ ಕುಟುಂಬವೇ ತಪ್ಪಿಸಿಕೊಳ್ಳುತ್ತದೆ. ಹುಬ್ಬಳ್ಳಿಯಲ್ಲಿ ದೃಶ್ಯ ಸಿನಿಮಾದ ಮಾದರಿಯಲ್ಲಿಯೇ ಕಟ್ಟಡ ಕಾರ್ಮಿಕ ಕುಟುಂಬದಲ್ಲಿನ ಮಗಳೊಂದಿಗೆ ಅನೈತಿಕ ಸಂಬಂಧ ಬೆಳೆಸಲು ಮುಂದಾದ ಯುವಕನ್ನು ಯುವತಿಯ ತಂದೆ ಕೊಲೆ ಮಾಡಿದ್ದಾನೆ. ಆದರೆ, ಕೊಲೆ ಮಾಡಿದ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿದ್ದು, ತಾನು ಜೈಲಿಗೆ ಹೋಗಬೇಕಾಗುತ್ತದೆ ಎಂದು ರಸ್ತೆಯಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಸಿನಿಮಾನೇ ಬೇರೆ, ನಿಜ ಜೀವನವೇ ಬೇರೆ ಎಂದು ಅರಿತುಕೊಂಡು ಜೀವನ ಮಾಡಬೇಕು. ಇಲ್ಲವಾದಲ್ಲಿ ಇಂತಹ ಅನಾಹುತಗಳು ಸಂಭವಿಸುತ್ತವೆ. ರವಿಚಂದ್ರನ್ ಅವರ ದೃಶ್ಯಂ ಸಿನಿಮಾದ ಶೈಲಿಯಲ್ಲಿ ಮಗಳೊಂದಿಗೆ ಅಸಹ್ಯವಾಘಿ ನಡೆದುಕೊಳ್ಳುತ್ತಿದ್ದ ಯುವಕನನ್ನು ಕೊಲೆ ಮಾಡಿ, ಕೊನೆಗೆ ತಾನು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ಶರಣಾದ ವ್ಯಕ್ತಿ ಹಾಗೂ ಆರೋಪಿ ಪರಸಪ್ಪ (50) ಎಂದು ಗುರುತಿಸಲಾಗಿದೆ.
undefined
ಹಣ ಎಣಿಸೋಕೆ ಬರೊಲ್ಲವೆಂದು ರೇಗಿಸಿದ ಸ್ನೇಹಿತನನ್ನೇ ಕೊಲೆಗೈದ ಕ್ಯಾಷಿಯರ್
ಹುಬ್ಬಳ್ಳಿಯ ಸಿಲ್ವರ್ ಟೌನ್‌ನಲ್ಲಿ ನಿರ್ಮಾಣ ಹಂತದ ಕಟ್ಟದಲ್ಲಿ ಮೌಲಾಲಿ ಎನ್ನುವ ಯುವಕನ ಕೊಲೆಯಾಗಿತ್ತು. ನಿರ್ಮಾಣ ಹಂತದ ಕಟ್ಟಡದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ನಡೆದಿತ್ತು. ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಕಟ್ಟಡದೊಳಗೆ ಯಾರೊಬ್ಬರೂ ಬಾರದಿದ್ದರೂ ಕೊಲೆ ಯಾರಿಂದ ನಡೆದಿದೆ ಎಂದು ಶೋಧನೆ ಮಾಡಿದಾಗ ಕಟ್ಟಡದಲ್ಲಿ ವಾಸವಾಗಿದ್ದವರೇ ಕೊಲೆ ಮಾಡಿದ್ದಾರೆಂಬ ಅನುಮಾನ ಬಂದಿದೆ. ಆಗ ನಿರ್ಮಾಣ ಹಂತದ ಕಟ್ಟದಲ್ಲಿ ಶೆಡ್ ನಿರ್ಮಿಸಿಕೊಂಡು ಕುಟುಂಬ ಸಮೇತವಾಗಿ ವಾಸವಾಗಿದ್ದ ವಾಚ್‌ಮ್ಯಾನ್ ಕೊಲೆ ಮಾಡಿದ್ದಾನೆ ಎಂಬ ಸುಳಿವು ಸಿಕ್ಕಿದೆ.
ಪೊಲೀಸರಿಗ ಸುಳಿವು ಸಿಗಬಾರದೆಂದು ಎಷ್ಟೇ ಸಾಕ್ಷ್ಯ ನಾಶ ಮಾಡಲು ಮುಂದಾದರೂ ಸಫಲವಾಗದ ಹಿನ್ನೆಲೆಯಲ್ಲಿ ಕೊಲೆಯ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ತಾನು ವಾಚ್‌ಮ್ಯಾನ್ ಕೆಲಸ ಮಾಡಿಕೊಂಡು ಇಡೀ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಜೈಲಿಗೆ ಹೋದರೆ ಸಮಸ್ಯೆ ಆಗುತ್ತದೆ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರ ಕಣ್ತಪ್ಪಿಸಿಕೊಂಡು ಹೋಗಿ ಹುಬ್ಬಳ್ಳಿಯ ಅಪೂರ್ವ ನಗರದ ಪ್ರಮುಖ ರಸ್ತೆಯಲ್ಲಿರುವ ಸಣ್ಣ ಮರವೊಂದಕ್ಕೆ ತನ್ನದೇ ಟವೆಲ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿಯಾದ ಪರಸಪ್ಪ, ಕುಟುಂಬದ ಜೊತೆಗೆ ನಿರ್ಮಾಣ ಹಂತದಲ್ಲಿ ಕಟ್ಟಡದಲ್ಲಿ ವಾಸವಿದ್ದನು. ಪರಸಪ್ಪನ ಮಗಳ ಜೊತೆಗೆ ಕೊಲೆಯಾದ ವ್ಯಕ್ತಿ ಮೌಲಾಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದರಿಂದ ವೈವಾಹಿಕ ಜೀವನಕ್ಕೆ ಸಮಸ್ಯೆ ಆಗುವುದೆಂದು ಬುದ್ಧಿವಾದ ಹೇಳಿದ್ದಾನೆ. ಇಷ್ಟಾದರೂ ಯಾವುದೇ ಮಾತು ಕೇಳದ ಹಿನ್ನೆಲೆಯಲ್ಲಿ ಕುಪಿತಗೊಂಡ ಪರಸಪ್ಪ, ನಿನ್ನೆ ಸಂಜೆ ವೇಳೆ ಮಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದನು.
ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಅಪಘಾತ, ಇನ್ಫೋಸಿಸ್, ಆ್ಯಕ್ಸೆಂಚರ್‌ನ ನಾಲ್ವರು ಟೆಕ್ಕಿ ಮೃತ!
ಕೊಲೆಯಾದ ಮೃತ ವ್ಯಕ್ತಿ ಮೌಲಾಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ತಾಲೂಕಿನ ಮರಗಡಿ ನಿವಾಸಿಯಾಗಿದ್ದಾನೆ. ಗಾರೆ ಕೆಲಸದ ನಿಮಿತ್ತವಾಗಿ ಹುಬ್ಬಳ್ಳಿಗೆ ಬಂದಿದ್ದನು. ಇನ್ನು ಕೊಲೆ ಆರೋಪಿಯನ್ನು ಪತ್ತೆ ಮಾಡುತ್ತಿದ್ದ ಪೊಲೀಸರಿಗೆ ಆರೋಪಿ ಪರಸಪ್ಪ ರಸ್ತೆ ಬದಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.